ಬೆಂಗಳೂರು: ಆನೇಕಲ್ ಸೂರ್ಯನಗರ ಸಮೀಪದ ಲಿಂಗಾಪುರ ರಸ್ತೆಯಲ್ಲಿ ಮೂರು ತಿಂಗಳ ಹಿಂದೆಯಿಂದ ದರೋಡೆಗಳು ನಡೆಯುತ್ತಿದ್ದು, ಇದೀಗ ಪೊಲೀಸರು ತನಿಖೆಯ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ದರೋಡೆ ವೇಳೆ ಮುನಿರಾಜ್ ಎಂಬಾತನನ್ನು ಚಾಕುವಿನಿಂದ ಚುಚ್ಚಿ ಗಾಯಗೊಳಿಸಿ ಅವನಲ್ಲಿದ್ದ ಮೊಬೈಲ್, ಹಾಗೂ ಪರ್ಸ್ ಕದ್ದು ಪರಾರಿಯಾಗಿದ್ದರು. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ಶುರು ಮಾಡಿದ್ದ ಜಿಗಣಿ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳನ್ನು ಐಸಾಕ್, ಸಂಜಯ್, ಸಂದೀಪ್ ಮತ್ತು ರೇಣುಕುಮಾರ್ ಎಂದು ಗುರುತಿಸಲಾಗಿದೆ.
ಈ ಹಿಂದೆಯೂ ಕೊಲೆಯ ಆರೋಪದಲ್ಲಿ ಈ ನಾಲ್ಕು ಹಂತಕರು ಜೈಲು ಸೇರಿದ್ದರು. ಜೈಲಿನಿಂದ ಹೊರ ಬಂದ ಮೇಲೆ ಮತ್ತೆ ಅದೇ ಚಾಳಿ ಮುಂದುವರೆಸಿದ್ದು ಮತ್ತೆ ಪೊಲೀಸರ ಅತಿಥಿಯಾಗಿದ್ದಾರೆ.
ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕತ್ತು ಹಿಸುಕಿ ವ್ಯಕ್ತಿಯ ಕೊಲೆ
Published On - 10:11 am, Fri, 25 December 20