ಶ್ಯಾನುಭೋಗನಹಳ್ಳಿ: ಎತ್ತಿಗಾಡಿಯಲ್ಲಿ ತೆನೆಹೊತ್ತ ಮಹಿಳೆಯೊಂದಿಗೆ ಕುಮಾರಸ್ವಾಮಿ ಪ್ರಚಾರ

ಅರುಣ್​ ಕುಮಾರ್​ ಬೆಳ್ಳಿ

Updated on: Nov 07, 2024 | 7:42 PM

ಶ್ಯಾನುಭೋಗನಹಳ್ಳಿಯಲ್ಲಿ ಪುಟ್ಟಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ಕುಮಾರಸ್ವಾಮಿಯವರನ್ನು ಹೊತ್ತ ಎತ್ತಿನಗಾಡಿಗೆ ಬೆಲ್ಲದಾರತಿಯನ್ನು ಬೆಳಗಿದ್ದು ಒಂದು ಪುಟ್ಟಹೆಣ್ಣು ಮಗು. ಎರಡೂ ಪಕ್ಷಗಳು ಅಂದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿವೆ. ಬುಧವಾರದಂದು ಮತದಾರ ತನ್ನ ನಿರ್ಧಾರ ತಿಳಿಸಲಿದ್ದಾನೆ. 

ರಾಮನಗರ: ಮಗನನ್ನು ಗೆಲ್ಲಿಸುವ ಛಲ ತೊಟ್ಟು ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಮಾಡಿತ್ತಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಕ್ಷೇತ್ರದ ಶ್ಯಾನುಭೋಗನಹಳ್ಳಿಯಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿದರು. ಪ್ರಚಾರಕ್ಕಾಗಿ ಎತ್ತಿನಗಾಡಿಯನ್ನು ಕಟ್ಟಿಸಿದ ಅವರು ಗಾಡಿಯಲ್ಲಿ ತಮ್ಮ ಪಕ್ಷದ ಸಂಕೇತವಾಗಿರುವ ತೆನೆಹೊತ್ತ ಮಹಿಳೆಯನ್ನು ಕೂರಿಸಿಕೊಂಡಿದ್ದರು. ಹಳ್ಳಿಯಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು ಸುಳ್ಳಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನೆರೆದು ಜನ ಕುಮಾರಸ್ವಾಮಿಯನ್ನು ಸ್ವಾಗತಿಸಿದರೆ ಕೇಂದ್ರ ಸಚಿವ ಎರಡೂ ಕೈಜೋಡಿಸಿ ನಮಸ್ಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಟಿಟ್ ಫಾರ್ ಟ್ಯಾಟ್; ಡಿಕೆ ಸುರೇಶ್ ಆಡಿಯೋ ಬಹಿರಂಗಗೊಳಿಸಿದ ಹೆಚ್ ಡಿ ಕುಮಾರಸ್ವಾಮಿ  

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.