ದೇವನಹಳ್ಳಿ, ಮಾರ್ಚ್ 24: ಇದು ಆಧುನಿಕ ಯುಗ. ಅಂಗೈನಲ್ಲಿ ಮೊಬೈಲ್ ಇಟ್ಟುಕೊಂಡು ಯೂಟ್ಯೂಬ್ ಮೂಲಕ ಸಾಕಷ್ಟು ಮೋಡಿಗಳನ್ನ ಮಾಡಿರುವುದನ್ನ ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ರೈತ (farmer) ಇದೀಗ ಇದೇ ಯೂಟ್ಯೂಬ್ನಿಂದ ಕಾಶ್ಮೀರ್ನಲ್ಲಿ ಬೆಳೆಯುವ ಸೇಬು (apple) ವನ್ನು ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಬೆಳೆದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು. ಅಂದಹಾಗೆ ಕಾಶ್ಮಿರದ ಚುಮು ಚುಮು ಚಳಿ ಮಳೆಯಂತೆ ಬೀಳುವ ಮಂಜಿನ ನಡುವೆ ಬೆಳೆಯ ಬೇಕಾದ ಸೇಬುವನ್ನು ನಮ್ಮದೆ ಸಿಲಿಕಾನ್ ಸಿಟಿ ಹೊರವಲಯದ ಹೊಸಕೋಟೆ ಬಳಿ ಬೆಳೆದಿದ್ದು, ರುಚಿಯಲ್ಲೂ ಕಾಶ್ಮೀರಿ ಸೇಬುಗಿಂತ ಕಡಿಮೆ ಏನಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿಯ ಸಿದ್ದೆನಹಳ್ಳಿ ಗ್ರಾಮದ ರೈತ ಬಸವರಾಜು, ಏನಾದ್ರು ವಿಭಿನ್ನವಾಗಿ ಬೆಳೆ ಬೆಳೆದು ಎಲ್ಲರಿಗೂ ಮಾದರಿಯಾಗಬೇಕು ಅಂತಿರುವಾಗಲೆ ಉರಿ ಬಿಸಿಲಿನಲ್ಲೂ ಸೇಬು ಬೆಳೆ ಬೆಳೆಯುವ ವಿಡಿಯೋವನ್ನ ಯೂಟ್ಯೂಬ್ನಲ್ಲಿ ನೋಡಿದ್ದರಂತೆ. ಹೀಗಾಗಿ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ಬಿಜಾಪುರದ ರೈತರನ್ನ ಸಂಪರ್ಕಿಸಿದ ರೈತ ಬಸವರಾಜು ನಂತರ ಬಿಜಾಪುರದಿಂದ 450 ಗಿಡಗಳನ್ನ ತಂದು ಇಲ್ಲಿ ನಾಟಿ ಮಾಡಿದ್ದಾರೆ.
ಇದನ್ನೂ ಓದಿ: Karaga: ಕರಗ ಹೊರಲು ಮೂರು ಗುಂಪುಗಳ ಕಿತ್ತಾಟ, ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ರದ್ದು
ಜೊತೆಗೆ ಸೇಬು ಗಿಡಗಳಿಗೆ ಯಾವುದೇ ರಾಸಾಯನಿಕ ಔಷದಿಗಳನ್ನ ಬಳಸದೆ ಕಪ್ಪು ಮಣ್ಣು, ಹೊಂಗೆ ಹಿಂಡಿ ಮತ್ತು ಬೇವಿನ ಹಿಂಡಿಯನ್ನ ಹಾಕಿ ಬೆಳೆ ಬೆಳೆದಿದ್ದು ಇದೀಗ ಭರ್ಜರಿ ಸೇಬು ಬೆಳೆ ಬೆಳೆದಿದ್ದಾರೆ. 450 ಗಿಡಗಳಲ್ಲಿ 12 ಗಿಡಗಳು ಹಾಳಾಗಿದ್ದು ಉಳಿದ ಗಿಡಗಳು ಭರ್ಜರಿ ಸೇಬು ಫಸಲು ನೀಡಿದ್ದು ಬಿಸಿಲ ನಡುವೆ ಬೆಳೆದ ಕೆಂಪು ಸೇಬು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.
ರೈತ ಕಾಲ ಕಾಲಕ್ಕೆ ಬೇವಿನ ಎಣ್ಣೆಯನ್ನ ಗಿಡಗಳಿಗೆ ಸಿಂಪಡಿಸುತ್ತಾ ಕೊಟ್ಟಿಗೆ ಗೊಬ್ಬರ ಬಳಸಿ ಸೇಬು ಬೆಳೆ ಬೆಳೆದಿದ್ದು ಇದೀಗ ಭರ್ಜರಿ ಫಸಲು ಸಹ ತೋಟದಲ್ಲಿ ಬಂದಿದೆ. ಅಲ್ಲದೆ ಕಾಶ್ಮೀರಿ ಸೇಬುಗೆ ಸೆಡ್ಡು ಹೊಡೆಯುವಂತೆ ಕಾಶ್ಮಿರದಲ್ಲಿ ಬೆಳೆಯುವಂತೆ ಸೇಬು ಸಿಲಿಕಾನ್ ಸಿಟಿಯಲ್ಲೂ ಬೆಳೆದಿದ್ದು ಸೇಬು ಗಿಡಗಳನ್ನ ನೋಡಲು ರೈತರು ಅಚ್ಚರಿಯಿಂದ ಬರ್ತಿದ್ದಾರೆ. ಜೊತೆಗೆ ರೈತ ಬೆಳೆದಿರುವ ಸೇಬು ಬೆಳೆಯನ್ನ ವ್ಯಾಪಾರಿಗಳು ತೋಟದ ಬಳಿಗೆ ಬಂದು ಕೆಜಿಗೆ 120 ರೂಪಾಯಿಯಂತೆ ಕೊಂಡುಕೊಂಡು ಹೋಗ್ತಿದ್ದು ರೈತನಿಗೆ ಉತ್ತಮ ಆದಾಯ ಸಹ ತಂದುಕೊಡ್ತಿದೆ. ಇನ್ನೂ ಯೂಟ್ಯೂಬ್ ನೋಡಿ ಸೇಬು ಬೆಳೆ ಬೆಳೆದ ರೈತನನ್ನ ಕಂಡು ಗ್ರಾಮಸ್ಥರ ಜೊತೆಗೆ ಕುಟುಂಬಸ್ಥರು ಸಹ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ನೆಲಮಂಗಲದಲ್ಲಿ ನಕಲಿ ಬ್ರಾಂಡ್ಗಳ ಹಾವಳಿ: ಸ್ವಲ್ಪ ಯಾಮಾರಿದ್ರೂ ನಿಮ್ಮ ಮನ-ಮನೆಯ ನೆಮ್ಮದಿ ಹಾಳಾಗಿ ಬಿಡುತ್ತೆ!
ಯೂಟ್ಯೂಬ್ ನೋಡಿ ನೋಡಿ ಹಾಳಾಗ್ತಿದ್ದೀಯಾ ಅಂತ ಬೈಯುವ ಸಾಕಷ್ಟು ಜನರ ನಡುವೆ ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಎಂಬಂತೆ ಬಯಲು ಸೀಮೆಯಲ್ಲಿ ಸೇಬು ಬೆಳೆಯುವ ಮೂಲಕ ರೈತ ಇತರರಿಗೆ ಮಾದರಿಯಾಗಿರುವುದಂತ್ತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.