ನಿಜವಾಯ್ತು ಬಬಲಾದಿ ಮಠದ ಕೊರೊನಾ ಭವಿಷ್ಯ, ದರ್ಶನಕ್ಕೆ ಮುಗಿಬಿದ್ದ ಭಕ್ತರು

| Updated By: ಆಯೇಷಾ ಬಾನು

Updated on: Jun 08, 2021 | 9:08 AM

ಮಹಾಮಾರಿ ಕೊರೊನಾ ಕಡಿಮೆಯಾಗುತ್ತಿದ್ದಂತೆ ಕಾಲಜ್ಞಾನಿ ಬಬಲಾದಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಮಳೆಯಿಂದ ತುಂಬಿ ಹರಿಯುತ್ತಿರುವ ಬಿದರಿ ಹಳ್ಳದಲ್ಲಿ ನಡೆದು ಭಕ್ತರು ದರ್ಶನಕ್ಕಾಗಿ ಮುಗಿ ಬೀಳುತ್ತಿದ್ದಾರೆ. ಏಕೆಂದರೆ ಸಿದ್ದು ಮುತ್ಯಾ ನುಡಿದಿದ್ದ ಕೊರೊನಾ ಭವಿಷ್ಯ ನಿಜವಾಗಿದೆ.

ನಿಜವಾಯ್ತು ಬಬಲಾದಿ ಮಠದ ಕೊರೊನಾ ಭವಿಷ್ಯ, ದರ್ಶನಕ್ಕೆ ಮುಗಿಬಿದ್ದ ಭಕ್ತರು
ಮಳೆಯಿಂದ ತುಂಬಿ ಹರಿಯುತ್ತಿರುವ ಬಿದರಿ ಹಳ್ಳದಲ್ಲಿ ನಡೆದು ಭಕ್ತರು ದರ್ಶನಕ್ಕಾಗಿ ಹೋಗುತ್ತಿರುವುದು.
Follow us on

ವಿಜಯಪುರ: ಕೊರೊನಾ ವೈರಸ್ ಎರಡನೇ ಅಲೆ ದೇಶದ ಜನರನ್ನು ಮಂಕು ಮಾಡಿದೆ. ಮೊದಲ ಅಲೆಗಿಂತ ಹೆಚ್ಚಿನ ಜೀವ ಹಾನಿಯನ್ನ ಮಾಡಿದೆ. ಸದ್ಯ ಈಗ ಎರಡನೇ ಅಲೆಯ ಪ್ರಭಾವ ಕಡಿಮೆಯಾಗುತ್ತಿದ್ದು ಜನರ ಮುಖದಲ್ಲಿ ಕೊಂಚ ಕೊಂಚ ಮಂದಹಾಸ ಕಾಣಿಸುತ್ತಿದೆ. ಈ ನಡುವೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಹೊಳೆ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವಜ್ಜ ಮೂಲ ಸಂಸ್ಥಾನ ಮಠಾಧೀಶ ಮತ್ತು ಮಠದ ಕಾರ್ಣಿಕ ಶ್ರೀ ಸಿದ್ದು ಮುತ್ಯಾ ಹೊಳಿಮಠರನ್ನು ಭೇಟಿ ಮಾಡಲು ಭಕ್ತರು ಮುಗಿಬಿದ್ದಿದ್ದಾರೆ.

ನಿಜವಾಯ್ತು ಬಬಲಾದಿ ಮಠದ ಕೊರೊನಾ ಭವಿಷ್ಯ
ಮಹಾಮಾರಿ ಕೊರೊನಾ ಕಡಿಮೆಯಾಗುತ್ತಿದ್ದಂತೆ ಕಾಲಜ್ಞಾನಿ ಬಬಲಾದಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಮಳೆಯಿಂದ ತುಂಬಿ ಹರಿಯುತ್ತಿರುವ ಬಿದರಿ ಹಳ್ಳದಲ್ಲಿ ನಡೆದು ಭಕ್ತರು ದರ್ಶನಕ್ಕಾಗಿ ಮುಗಿ ಬೀಳುತ್ತಿದ್ದಾರೆ. ಏಕೆಂದರೆ ಸಿದ್ದು ಮುತ್ಯಾ ನುಡಿದಿದ್ದ ಕೊರೊನಾ ಭವಿಷ್ಯ ನಿಜವಾಗಿದೆ.

ಇಲ್ಲಿಗೆ ಮುಗಿಯಲಿಲ್ಲ… ಮತ್ತೆ ವ್ಯಾಧಿ ಕಾಡುತ್ತೆ ಎಂದು ಕೊರೊನಾ 2ನೇ ಅಲೆಯ ಬಗ್ಗೆ ಕಳೆದ 3 ತಿಂಗಳ ಹಿಂದೆ ಶಿವರಾತ್ರಿ ವೇಳೆ ಸಿದ್ದು ಮುತ್ಯಾ ನಿಖರ ಭವಿಷ್ಯ ನುಡಿದಿದ್ದರು. ಈ ಭವಿಷ್ಯ ಈಗ ನಿಜವಾಗಿದೆ. ಹಾಗೂ ಕೊರೊನಾ ಹಾವಳಿ ಕಡಿಮೆಯಾಗಲು ಅಂಬಲಿ, ಅನ್ನ ಪ್ರಸಾದ ಮಾಡಿ ಮನೆಯಲ್ಲಿ ತೆಂಗಿನಕಾಯಿ ಒಡೆಯಲು ಸಿದ್ದು ಮುತ್ಯಾ ಹೇಳಿದ್ದರು. ಎರಡು ಸೋಮವಾರ ಕಳೆಯುತ್ತಿದ್ದಂತೆ ಕೊರೊನಾ ಕೇಸ್ಗಳು ಕಡಿಮೆಯಾಗಿವೆ. ಈ ಹಿನ್ನೆಲೆಯಲ್ಲಿ‌ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಬರುತ್ತಿದೆ. ಮಠಕ್ಕೆ ಬರಬೇಡಿ, ಮನೆಯಲ್ಲಿ ಸದಾಶಿವ ಅಜ್ಜನ ಪೋಟೋ ಪೂಜೆ ಮಾಡಿ ಎಂದು ಹೇಳಿದ್ರು ಭಕ್ತರು ಕೇಳ್ತಿಲ್ಲ. ಲಾಕ್‌ಡೌನ್ ಬಳಿಕ ಮಠದ ಮುಖ್ಯಸ್ಥರು ಬಬಲಾದಿ ಮಠದ ಗೇಟ್ಗೆ ಬೀಗ ಹಾಕಿದ್ದರೂ ಮಠದ ಹೊರಗಿನಿಂದಲೇ ದರ್ಶನ ಮಾಡ್ತೀವಿ ಎಂದು ಭಕ್ತರು ಬರುತ್ತಿದ್ದಾರೆ.

ಇದನ್ನೂ ಓದಿ: Jeff Bezos: ಬಾಹ್ಯಾಕಾಶಕ್ಕೆ ಸೈಟ್​ ಸೀಯಿಂಗ್​ಗೆ ಹೊರಟಿದ್ದಾರೆ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್, ನೀವೂ ಜತೆಯಾಗಬಹುದು!