ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!

|

Updated on: May 24, 2021 | 3:37 PM

ಮಡಿಕೇರಿ: ಯೋಧರ ತವರು ನಾಡು ಎಂದೇ ಪರಿಗಣಿತವಾಗಿರುವ ಕೊಡಗಿನಲ್ಲಿ ಮತ್ತೊಂದು ದಾರುಣ ಘಟನೆ ತಡವಾಗಿ ವರದಿಯಾಗಿದೆ. ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕರೊಬ್ಬರಿಗೆ ಸೇರಿದ ವಸ್ತುಗಳೂ ಮಾಯವಾಗಿವೆ! ಮೊನ್ನೆಯಷ್ಟೇ ಬಾಲಕಿಯೊಬ್ಬಳು ಕೊರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡು ವ್ಯಥೆಪಡುತ್ತಿದ್ದಾಗ ಆ ಮಹಾತಾಯಿ ಬಳಸುತ್ತಿದ್ದ ಮೊಬೈಲ್​ ಅನ್ನೇ ಮಡಿಕೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯವರು ಎಗರಿಸಿದ್ದರು ಎಂಬ ವಿಷಯ ರಾದ್ಧಾಂತವಾಗಿತ್ತು. ಆ ಘಟನೆ ಮಾಸುವ ಮುನ್ನವೇ ದೇಶ ಕಾಯುತ್ತಿದ್ದ ಹಿರಿಯ ಯೋಧ ಎಂಬುದನ್ನೂ ಪರಿಗಣಿಸದೆ ಆತನಿಗೆ ಸೇರಿದ ವಸ್ತುಗಳನ್ನು​ ಕೋವಿಡ್​ ಸೆಂಟರ್​ನವರು ಎಗರಿಸಿದ್ದಾರೆ ಎಂಬ […]

ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!
ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!
Follow us on

ಮಡಿಕೇರಿ: ಯೋಧರ ತವರು ನಾಡು ಎಂದೇ ಪರಿಗಣಿತವಾಗಿರುವ ಕೊಡಗಿನಲ್ಲಿ ಮತ್ತೊಂದು ದಾರುಣ ಘಟನೆ ತಡವಾಗಿ ವರದಿಯಾಗಿದೆ. ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕರೊಬ್ಬರಿಗೆ ಸೇರಿದ ವಸ್ತುಗಳೂ ಮಾಯವಾಗಿವೆ! ಮೊನ್ನೆಯಷ್ಟೇ ಬಾಲಕಿಯೊಬ್ಬಳು ಕೊರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡು ವ್ಯಥೆಪಡುತ್ತಿದ್ದಾಗ ಆ ಮಹಾತಾಯಿ ಬಳಸುತ್ತಿದ್ದ ಮೊಬೈಲ್​ ಅನ್ನೇ ಮಡಿಕೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯವರು ಎಗರಿಸಿದ್ದರು ಎಂಬ ವಿಷಯ ರಾದ್ಧಾಂತವಾಗಿತ್ತು. ಆ ಘಟನೆ ಮಾಸುವ ಮುನ್ನವೇ ದೇಶ ಕಾಯುತ್ತಿದ್ದ ಹಿರಿಯ ಯೋಧ ಎಂಬುದನ್ನೂ ಪರಿಗಣಿಸದೆ ಆತನಿಗೆ ಸೇರಿದ ವಸ್ತುಗಳನ್ನು​ ಕೋವಿಡ್​ ಸೆಂಟರ್​ನವರು ಎಗರಿಸಿದ್ದಾರೆ ಎಂಬ ಆರೋಪ, ಕೆಟ್ಟ ವಾರ್ತೆ ಈಗ ಕೇಳಿಬಂದಿದೆ.

ಮಡಿಕೇರಿ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕರಾದ ಧರ್ಮಪ್ಪ(61) ಅವರಿಗೆ ಸೇರಿದ ವಸ್ತುಗಳು ಮಿಸ್​ ಅಗಿವೆ. ಮಾಜಿ ಯೋಧ, ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮದ ಧರ್ಮಪ್ಪ ಗೌಡ ಎಂ ಎನ್ (61) ಮೇ 4ರಂದು ಮೃತಪಟ್ಟಿದ್ರು. ಮೃತ ಧರ್ಮಪ್ಪನವರ ಪರ್ಸ್, ಮೊಬೈಲ್​, ಉಂಗುರವನ್ನು ವಾಪಸ್​ ನೀಡಿಲ್ಲ. 20 ದಿನ ಕಳೆದರೂ ಮಡಿಕೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯ ಸಿಬ್ಬಂದಿಯು ಧರ್ಮಪ್ಪ ಅವರ ಸಂಬಂಧಿಕರಿಗೆ ವಸ್ತುಗಳನ್ನು ಹಿಂದಿರುಗಿಸಿಲ್ಲ. ಇದೀಗ, ಧರ್ಮಪ್ಪ ಕುಟುಂಬಸ್ಥರು ಮಡಿಕೇರಿ ನಗರ ಪೊಲೀಸ್​ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಶನಿವಾರಸಂತೆ ಗ್ರಾಮದ ಧರ್ಮಪ್ಪ ಗೌಡ ಎಂ ಎನ್

ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!

ಬಾಲಕಿಯ ವಿಷಯದಲ್ಲಿ ಏನಾಯಿತು? ಮೊಬೈಲ್​ ಸಿಕ್ತಾ?

ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಪುಟ್ಟ ಬಾಲಕಿ ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾಳೆ. ಮೊಬೈಲ್​ನಲ್ಲಿ ನನ್ನ ಅಮ್ಮನ ನೆನಪುಗಳಿವೆ. ದಯವಿಟ್ಟು ಅಮ್ಮನ ಮೊಬೈಲ್​ನ ಹಿಂದಿರುಗಿಸಿ ಎಂದು ತಾಯಿಯನ್ನು ಕಳೆದುಕೊಂಡ ಮಗಳು ಕೊಡಗು ಜಿಲ್ಲಾಧಿಕಾರಿಗೆ, ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ, ಶಾಸಕರಿಗೆ ಪತ್ರ ಬರೆದಿದ್ದಳು. ಅಮ್ಮನ ನೆನಪಿರುವ ಆ ಮೊಬೈಲ್​ನ ನನಗೆ ಬೇಕು ಹುಡುಕಿಕೊಡಿ ಎಂದು ಪುಟ್ಟ ಹುಡುಗಿ ಅಂಗಲಾಚಿ ಕೇಳಿದ್ದಳು. ಆದರೆ ಮೊಬೈಲ್ ಇನ್ನು ಸಿಗಲೇ ಇಲ್ಲ.

ಅಮ್ಮನ ಮೊಬೈಲ್​ಗಾಗಿ ಪರದಾಟ ಪಡುತ್ತಿರುವ ಮಗಳು ಹೃತಿಕ್ಷಾ ಮೊಬೈಲ್ ಖಂಡಿತಾ ಸಿಗುತ್ತದೆ ಎನ್ನುವ ಭರವಸೆಯಲ್ಲಿದ್ದಾಳೆ. ಪೊಲೀಸರು, ಜಿಲ್ಲಾಧಿಕಾರಿಗಳು ಮೊಬೈಲ್ ಹುಡುಕಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ನನ್ನ ತಾಯಿಯ ನೆನಪುಗಳು ತಣ್ಣಗೆ ಉಳಿದಿವೆ. ಹೀಗಾಗಿ ನನಗೆ ಆ ಮೊಬೈಲ್ ಬೇಕೆ ಬೇಕು ಎಂದು ಟಿವಿ9 ಡಿಜಿಟಲ್​ನೊಂದಿಗೆ ಮಾತನಾಡುತ್ತಾ ಹೃತಿಕ್ಷಾ ಬೇಸರ ವ್ಯಕ್ತಪಡಿಸಿದ್ದಾಳೆ.

‘ಮೊಬೈಲ್ ತೆಗೆದುಕೊಂಡವರು ದಯವಿಟ್ಟು ವಾಪಸ್​ ಕೊಡಿ; ನಿಮ್ಮ ವಿರುದ್ಧ ಕೇಸ್​ ಹಾಕಿಸೋಲ್ಲ’

ನಿನ್ನೆ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ 10 ಮೊಬೈಲ್​ಗಳನ್ನು ಪರಿಶೀಲಿಸುವಂತೆ ಆಸ್ಪತ್ರೆ ವೈದ್ಯರು ಹೇಳಿದ್ದರು. ಹೀಗಾಗಿ ಮೃತ ಪ್ರಭಾ ಅವರ ಸಹೋದರ ಸಂತೋಷ್ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿರುವ 10 ಮೊಬೈಲ್​ಗಳಲ್ಲಿ ಮೃತ ಮಹಿಳೆಯ ಮೊಬೈಲ್ ಇಲ್ಲ. ಹೀಗಾಗಿ ತಾಯಿಯ ಮೊಬೈಲ್​ಗಾಗಿ ಮಗಳು ಹೃತಿಕ್ಷಾ ಪರಿತಪಿಸುತ್ತಿದ್ದಾಳೆ.

ಮೊಬೈಲ್ ಬಗ್ಗೆ ದೂರು ದಾಖಲಾಗಿದೆ. ಡಿವೈ.ಎಸ್​ಪಿ ಹುಡುಕಿ ಕೊಡುತ್ತೇವೆ ಅಂತ ಹೇಳಿದ್ದಾರೆ. ಆಸ್ಪತ್ರೆಯಲ್ಲಿದ್ದ 11 ದಿನಗಳಲ್ಲಿ 9 ದಿನ ನನ್ನ ಹೆಂಡತಿ ನನ್ನ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದಾರೆ. ಹೀಗಾಗಿ ಮೊಬೈಲ್ ಆಸ್ಪತ್ರೆಯಲ್ಲಿಯೇ ಕಳೆದು ಹೋಗಿದೆ. ಕಳೆದು ಹೋದ ಮೊಬೈಲ್​ಗೆ ಕರೆ ಮಾಡಿದ್ದಾಗ ಮೊದಲು ರಿಂಗ್ ಆಗಿತ್ತು. ಆ ನಂತರ ಸ್ವಿಚ್ಛ್ ಆಫ್ ಆಗಿದೆ. ಪತ್ನಿಯ ಫೋಟೋ ಆ ಮೊಬೈಲ್​ನಲ್ಲಿದೆ. ಹೀಗಾಗಿ ಮಗಳು ಆ ಮೊಬೈಲ್ ಬೇಕೆಂದು ಪಟ್ಟು ಹಿಡಿದ್ದಾಳೆ ಅಂತ ಹೃತಿಕ್ಷಾ ತಂದೆ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ನಾವು ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ. ಲಾಕ್​ಡೌನ್​ನಿಂದ 20 ದಿನಗಳಾಯ್ತು ಯಾವ ಕೆಲಸವೂ ಇಲ್ಲ. ತಿನ್ನುವುದಕ್ಕೂ ಕಷ್ಟವಾಗಿದೆ. ಈ ನಡುವೆ ಏಳೆಂಟು ಸಾವಿರ ರೂಪಾಯಿಯ ಮೊಬೈಲ್ ತೆಗೆದುಕೊಳ್ಳುವ ಸಾಮರ್ಥ್ಯನೂ ನಮಗೆ ಇಲ್ಲ. ಯಾರಾದರೂ ಮೊಬೈಲ್ ತೆಗೆದುಕೊಂಡರೆ ದಯವಿಟ್ಟು ಕೊಡಿ. ಅವರ ವಿರುದ್ಧ ಕೇಸ್​ ಹಾಕಲ್ಲ ಎಂದು ಮೃತ ಮಹಿಳೆಯ ಪತಿ ಬೇಸರ ವ್ಯಕ್ತಪಡಿಸಿದರು.

(dharmappa kodagu ex soldier from shanivarsanthe loses battle against coronavirus also loses his valuables in madikeri hospital)