ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣ; ಯುವಕನ ವಿರುದ್ಧ ಎಫ್‌ಐಆರ್ ದಾಖಲು

Ayesha Banu

|

Updated on: May 24, 2021 | 3:30 PM

ಯುವಕ ಪುನೀತ್ ವಿರುದ್ಧವೇ ಕಿರುಗುಂದ ಗ್ರಾಮದ ಮಹಿಳೆ ದೂರು ನೀಡಿದ್ದಾಳೆ. ನನ್ನ ಸಂಸಾರ ಹಾಳಾಗುವುದಕ್ಕೆ ಯುವಕ ಪುನೀತ್ ಕಾರಣ. ತನಗೆ ಸಹಕರಿಸುವಂತೆ ಪದೇಪದೆ ನನ್ನನ್ನು ಒತ್ತಾಯಿಸುತ್ತಿದ್ದ. ತನ್ನ ಜತೆ ಬರುವಂತೆ ಕೂಡ ಪುನೀತ್ ಒತ್ತಾಯ ಮಾಡ್ತಿದ್ದ. ಪುನೀತ್ ಪ್ರಕರಣ ಬಯಲಾದ ಬಳಿಕ ನನ್ನ ವಿಚಾರವೂ ಎಲ್ಲರಿಗೂ ಗೊತ್ತಾಗಿದೆ...

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣ; ಯುವಕನ ವಿರುದ್ಧ ಎಫ್‌ಐಆರ್ ದಾಖಲು
ಪ್ರಾತಿನಿಧಿಕ ಚಿತ್ರ
Follow us

ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಕೇಸ್ಗೆ ಸಂಬಂಧಿಸಿ ಯುವಕ ಪುನೀತ್ ವಿರುದ್ಧವೇ ಕಿರುಗುಂದ ಗ್ರಾಮದ ಮಹಿಳೆ ದೂರು ನೀಡಿದ್ದಾಳೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನನ್ನ ಸಂಸಾರ ಹಾಳಾಗುವುದಕ್ಕೆ ಯುವಕ ಪುನೀತ್ ಕಾರಣ. ತನಗೆ ಸಹಕರಿಸುವಂತೆ ಪದೇಪದೆ ನನ್ನನ್ನು ಒತ್ತಾಯಿಸುತ್ತಿದ್ದ. ತನ್ನ ಜತೆ ಬರುವಂತೆ ಕೂಡ ಪುನೀತ್ ಒತ್ತಾಯ ಮಾಡ್ತಿದ್ದ. ಪುನೀತ್ ಪ್ರಕರಣ ಬಯಲಾದ ಬಳಿಕ ನನ್ನ ವಿಚಾರವೂ ಎಲ್ಲರಿಗೂ ಗೊತ್ತಾಗಿದೆ. ಆತ ನನ್ನೊಂದಿಗೆ ಮಾತನಾಡಿರುವ ಆಡಿಯೋ ಕೂಡ ಗೊತ್ತಾಗಿದೆ. ಇದರಿಂದ ನನ್ನ ಮಾನ ಮರ್ಯಾದೆ ಹಾಳಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಘಿಸಿದ್ದಾಳೆ. ಹೀಗಾಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪುನೀತ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಘಟನೆ ಏನು? ಕಿರಗುಂದ ಗ್ರಾಮದಲ್ಲಿ ಪುನೀತ್ ಗೋಣಿಬೀಡು ಪೊಲೀಸ್ ಠಾಣೆ ಪಿಎಸ್ಐ ವಿರುದ್ಧ ಆರೋಪ ಮಾಡಿದ್ದ. ಪ್ರಕರಣವೊಂದರ ಸಂಬಂಧ ತನ್ನನ್ನ ವಿಚಾರಣೆ ಮಾಡುವಾಗ ಪಿಎಸ್ಐ ತನಗೆ ಮೂತ್ರ ಕುಡಿಸಿದ್ರು. ಜಾತಿ ನಿಂದನೆ ಮಾಡಿದ್ರು, ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ರು ಅಂತಾ ಯುವಕ ಪುನೀತ್ ಆರೋಪಿಸಿದ್ದ. ಅಷ್ಟೇ ಅಲ್ಲದೇ ಠಾಣೆಯ ಪಿಎಸ್ಐ ವಿರುದ್ಧ ದೂರು ಸಲ್ಲಿಸಿದ್ದ. ಪರಿಣಾಮ ಮೊನ್ನೆ ರಾತ್ರಿ ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ನಿನ್ನೆ ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಇನ್ಸ್ಪೆಕ್ಟರ್ ಅರ್ಜುನ್ರನ್ನ ಅಮಾನತು ಮಾಡಿ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಡಿವೈಎಸ್‌ಪಿ ನಡೆಸುತ್ತಿದ್ದ ಪ್ರಕರಣದ ತನಿಖೆ ಇದೀಗ ಸಿಐಡಿ ಹಸ್ತಾಂತರಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕಿರುಗುಂದ ಗ್ರಾಮಕ್ಕೆ ಭೇಟಿ ನೀಡಿ ಯುವಕ ಪುನೀತ್ ಸೇರಿದಂತೆ ಸ್ಥಳೀಯರಿಂದ ಮಾಹಿತಿ ಕಲೆಹಾಕಿದ್ರು.

ಪಿಎಸ್ಐ ವಿರುದ್ಧ ಯುವಕ ಪುನೀತ್ ಆರೋಪದ ಬೆನ್ನಲ್ಲೇ ಪುನೀತ್ ವಿವಾಹಿತ ಮಹಿಳೆ ಜೊತೆ ನಡೆಸಿರುವ ಆಡಿಯೋ ಕೂಡ ಹರಿದಾಡ್ತಿದೆ. ಅದೇ ಗ್ರಾಮದ ಮಹಿಳೆ ಜೊತೆ ಪುನೀತ್ ಸಲುಗೆಯಿಂದ ಇದ್ದು ಆಕೆಯನ್ನ ಪೀಡಿಸುತ್ತಿದಿದ್ದೇ ಈ ಎಲ್ಲಾ ಘಟನೆಗಳಿಗೆ ಸಾಕ್ಷಿ ಅಂತಾ ಸಾಮಾಜಿಕ ಜಾಣತಾಣಗಳಲ್ಲಿ ಚರ್ಚೆ ಶುರುವಾಗಿದೆ. ಪುನೀತ್ ಮಾಡಿರೋ ಗಂಭೀರ ಆರೋಪವನ್ನ ಪರಿಗಣಿಸಿ ಪಿಎಸ್ಐ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತಾ ಒಂದೆಡೆ ದನಿ ಜೋರಾಗಿದ್ರೆ, ಇನ್ನೊಂದೆಡೆ ಪುನೀತ್ ಮಾಡಿರೋ ಆರೋಪಕ್ಕೆ ಯಾವುದೇ ಸಾಕ್ಷಿಯಿಲ್ಲ ಅಂತಿದ್ದಾರೆ. ಅಲ್ಲದೇ ಆತ ವಿವಾಹಿತ ಮಹಿಳೆಯನ್ನ ಪೀಡಿಸುತ್ತಿದ್ದ ಬಗ್ಗೆ ಆಡಿಯೋ ವೈರಲ್ ಆಗಿರೋ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಇದೇ ಬೆನ್ನಲ್ಲೆ ಮಹಿಳೆ ಈಗ ಪುನೀತ್ ವಿರುದ್ಧ ದೂರ ದಾಖಲಿಸಿದ್ದು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ; ಪಿಎಸ್​ಐ ಅರ್ಜುನ್ ಅಮಾನತು

ತಾಜಾ ಸುದ್ದಿ

Related Stories

Click on your DTH Provider to Add TV9 Kannada