ಧಾರವಾಡ, ನ.23: ರಸ್ತೆಯೊಂದರಲ್ಲಿ ಯುವಕನೊಬ್ಬ ಬೈಕ್ ವ್ಹೀಲಿಂಗ್(Bike wheeling) ಹುಚ್ಚಾಟ ಮಾಡಿರೋ ವೀಡಿಯೋ ವೈರಲ್ ಆಗಿದೆ. ಜನನಿಬಿಡ ರಸ್ತೆಯಲ್ಲೇ ವ್ಹೀಲಿಂಗ್ ಮಾಡಿದ್ದಾನೆ. ನಂಬರ್ ಪ್ಲೇಟ್ ಇಲ್ಲದ ಬೈಕ್ ಇದಾಗಿದ್ದು, ಬೈಕ್ನಲ್ಲಿ ಕಿಮೀಗಟ್ಟಲೇ ವ್ಹೀಲಿಂಗ್ ಮಾಡಿದ್ದಾನೆ. ಧಾರವಾಡದ ಆಲೂರು ವೆಂಕಟರಾವ್ ವೃತ್ತದಿಂದ ವ್ಹೀಲಿಂಗ್ ಮಾಡುತ್ತಾ ನಗರದ ಶ್ರೀನಗರ ಕ್ರಾಸ್‌ವರೆಗೆ ಹೋಗಿದ್ದಾನೆ. ಗೆಳೆಯರೊಂದಿಗೆ ಪಂದ್ಯ ಕಟ್ಟಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಆತನನ್ನು ಪಂದ್ಯ ಕಟ್ಟಿದ್ದ ಗೆಳೆಯರು ಕಾರಿನಲ್ಲಿ ಹಿಂಬಾಲಿಸಿ ಶೂಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 7:58 pm, Thu, 23 November 23