ಹುಬ್ಬಳ್ಳಿಯಲ್ಲಿ ಆನೆ ಅಂಬಾರಿ ಸಮೇತ ಸ್ವಾಮೀಜಿಗೆ 5555 ಕೆಜಿ ನಾಣ್ಯಗಳ ತುಲಾಭಾರ

| Updated By: ಸಾಧು ಶ್ರೀನಾಥ್​

Updated on: Feb 02, 2024 | 2:55 PM

Grand Jumbo Tulabhara: ಒಂದು ಕಡೆ ಆನೆ ಮೇಲೆ ಅಂಬಾರಿ.. ಇನ್ನೊಂದು ಕಡೆ ಅಂಬಾರಿಯೊಳಗೆ ಫಕ್ಕೀರ ಸಿದ್ದರಾಮ ಮಾಹಾಸ್ವಾಮಿಗಳು.. ಮತ್ತೊಂದು ಕಡೆ 5555 ಕೆಜಿ ನಾಣ್ಯಗಳ ತುಲಾಭಾರ.. ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.

ಹುಬ್ಬಳ್ಳಿಯಲ್ಲಿ ಆನೆ ಅಂಬಾರಿ ಸಮೇತ ಸ್ವಾಮೀಜಿಗೆ 5555 ಕೆಜಿ ನಾಣ್ಯಗಳ ತುಲಾಭಾರ
ಹುಬ್ಬಳ್ಳಿಯಲ್ಲಿ ಆನೆ ಅಂಬಾರಿ ಸಮೇತ ಸ್ವಾಮೀಜಿಗೆ 5555 ಕೆಜಿ ನಾಣ್ಯಗಳ ತುಲಾಭಾರ
Follow us on

ಸಾಮಾನ್ಯವಾಗಿ ನಾವು ಬಂಗಾರ ಬೆಳ್ಳಿ ತುಲಾಭಾರ ನೋಡಿದ್ದೇವೆ ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಆನೆ ಅಂಬಾರಿ ಸಮೇತ ಸ್ವಾಮೀಜಿಗಳ ತುಲಾಭಾರ (Tulabhara) ಮಾಡಲಾಯ್ತು.ಅದು 5555 ಕೆಜಿ ನಾಣ್ಯಗಳ ಮೂಲಕ.. ಭಾವೈಕ್ಯೆತೆಗೆ ಹೆಸರಾದ ಆ ಮಠದ ಸ್ವಾಮೀಜಿಗೆ ಇವತ್ತು ಆನೆ ಅಂಬಾರಿ ಸಮೇತ 10 ರೂಪಾಯಿಯ 5555 ಕೆಜಿ ನಾಣ್ಯಗಳ (Coins) ತುಲಾಭಾರ ಮಾಡಲಾಯ್ತು. ಅಷ್ಟಕ್ಕೂ ಆ ಸ್ವಾಮೀಜಿ ಯಾರು, ಏನಿದು‌ ನಾಣ್ಯಗಳ ತುಲಾಭಾರ ಅಂತೀರಾ? ಈ ಸ್ಟೋರಿ ನೋಡಿ.  ಹುಬ್ಬಳ್ಳಿ  (Hubballi) ನೆಹರೂ ಮೈದಾನ ಇವತ್ತು ವಿಶೇಷ ತುಲಾಭಾರ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು. ಬಹುಶಃ ಪ್ರಪಂಚದಲ್ಲಿ ಮೊದಲ ಬಾರಿಗೆ ಸ್ವಾಮೀಜಿಯೊಬ್ಬರಿಗೆ 5555 ಕೆಜಿ ನಾಣ್ಯಗಳ ತುಲಾಭಾರ ನಡೆದಿದ್ದು ಇದೇ ಮೊದಲು. ಗದಗ ಜಿಲ್ಲೆಯ ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿಗಳ (Fakir Siddarama Swamiji) ಅಮೃತ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ತುಲಭಾರ ಕಾರ್ಯಕ್ರಮಕ್ಕೂ ಮುನ್ನ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಭವ್ಯವಾದ ಶೋಭಾಯಾತ್ರೆ ಮಾಡಲಾಯಿತು. ಐದು ಆನೆ, ಐದು ಒಂಟೆ, ಐದು ಕುದುರೆಗಳು ಸೇರಿದಂತೆ ವಿವಿಧ ಕಲಾತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವು. ಫಕೀರ ಸಿದ್ದರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಮೂರು ಸಾವಿರ ಮಠದ ಮೂಜಗು ಸ್ವಾಮೀಜಿಗಳನ್ನು ತೆರೆದ ವಾಹನದಲ್ಲಿ ಕೂರಿಸಿ ಭವ್ಯ ಮೆರವಣಿಗೆ ಮಾಡಲಾಯಿತು. ಭಾವೈಕ್ಯತಾ ರಥಯಾತ್ರೆಯಲ್ಲಿ ನೂರಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು. ಆನೆಯ ಮೇಲೆ ಅಂಬಾರಿ ಇರಿಸಿ ಫಕೀರ ಸಿದ್ದರಾಮ ಸ್ವಾಮೀಜಿಯವರನ್ನು ಕೂರಿಸಿ ತುಲಾಭಾರ ಮಾಡಲಾಯಿತು.

Also Read: ಆನೇಕಲ್​ ನಲ್ಲಿ ಫಲವತ್ತಾದ ಪಿತ್ರಾರ್ಜಿತ ಜಮೀನು 2005ರಲ್ಲಿ ನೋಟಿಫಿಕೇಶನ್​​: ಪ್ರಭಾವಿಗಳಿಗೆ ನೀಡಲು ಕೆಐಎಡಿಬಿ ಹುನ್ನಾರ ಆರೋಪ

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿಶೇಷವಾಗಿ ಸಿದ್ದಪಡಿಸಲಾದ ಬೃಹತ್ ತಕ್ಕಡಿಯಲ್ಲಿ 5555 ಕೆಜಿ ತೂಕದ ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಗಣ್ಯರು ನಗಾರಿ ಬಾರಿಸಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಪ್ರಲ್ಹಾದ್ ಜೋಶಿ, ಬಸವರಾಜ ಹೊರಟ್ಟಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಬಿ.ವೈ. ವಿಜಯೇಂದ್ರ, ಎಮ್‌.ಬಿ. ಪಾಟೀಲ್, ಎಚ್‌.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಅರವಿಂದ ಬೆಲ್ಲದ್, ಶ್ರೀನಿವಾಸ ಮಾನೆ, ಸಲೀಮ್ ಅಹ್ಮದ್, ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಹುಬ್ಬಳ್ಳಿಯ ಭಕ್ತರು ಫಕೀರ ಸಿದ್ದರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಮೂರು ಕೆಜಿ ಬಂಗಾರವನ್ನು ಕಾಣಿಕೆ ನೀಡಿದ್ರು.‌ಇನ್ನು ಇದೇ ವೇಳೆ ಇಂಗ್ಲಿಷ್ ಹಾಗೂ ‌ಕನ್ನಡ ಜೀವನ‌ ದರ್ಶನ ಗ್ರಂಥ‌ ಬಿಡುಗಡೆ ‌ಮಾಡಲಾಯ್ತು.ಇನ್ನು‌ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ‌ಪಕ್ಷಾತೀತವಾಗಿ ರಾಜಕೀಯ‌ ನಾಯಕರು ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಮಠದ ಸೇವಾ ಕಾರ್ಯವನ್ನು ಕೊಂಡಾಡಿದ್ರು.

ಇದನ್ನೂ ಓದಿ: ಮಣ್ಣಿನ ಮೋಹಕ್ಕೆ ಹೊಲದಲ್ಲಿ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ‌ ಹೊಡಿತೀನಿ ಎಂದಿದ್ದ ಹಂತಕ! ಯಾಕೆ?

ಒಟ್ಟಾರೆ ಇಂದು ನೆಹರು ಮೈದಾನ ವಿಶೇಷ ತುಲಾಭಾರಕ್ಕೆ ಸಾಕ್ಷಿಯಾಯ್ತು.ಇನ್ನು‌ ಶಿರಹಟ್ಟಿ ಮಠದ ಅಮೃತ ಮಹತ್ಸೋವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ 5555 ಕೆಜಿ ನಾಣ್ಯಗಳ ತುಲಾಭಾರ ಕಣ್ತುಂಬಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ