ಧಾರವಾಡ: ಹಿಂದೂ ಎಂಬ ಕಾರಣಕ್ಕೆ ತರಕಾರಿ ಮಾರುವುದಕ್ಕೆ ಬಂದ ರೈತನ ಮೇಲೆ ಹಲ್ಲೆ
ಹಿಂದೂ ವ್ಯಾಪಾರಿ ಅನ್ನೋ ಕಾರಣಕ್ಕೆ ಧಾರವಾಡದ ಎಪಿಎಂಸಿಯಲ್ಲಿ ಲೋಕೂರ ಗ್ರಾಮದ ಈರಪ್ಪ ಉಡಿಕೇರಿ ಎಂಬ ರೈತನ ಮೇಲೆ ಐವರು ಮುಸ್ಲಿಂ ವ್ಯಾಪಾರಸ್ಥರು ಹಲ್ಲೆ ನಡೆಸಿದ್ದಾರೆ. ಈರಪ್ಪ ಅವರು ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಮಾರಾಟ ಮಾಡಲು ಬಂದಿದ್ದರು. ಈ ವೇಳೆ ಹಲ್ಲೆ ನಡೆದಿದೆ.
ಧಾರವಾಡ, ಫೆ.03: ತರಕಾರಿ ಮಾರುವುದಕ್ಕೆ ಬಂದ ರೈತನ ಮೇಲೆ ಹಲ್ಲೆ (Assault) ನಡೆದಿದೆ. ಧಾರವಾಡದ ಎಪಿಎಂಸಿಯಲ್ಲಿ (APMC Market) ಲೋಕೂರ ಗ್ರಾಮದ ಈರಪ್ಪ ಉಡಿಕೇರಿ ಎಂಬ ರೈತನ ಮೇಲೆ ಐವರು ಮುಸ್ಲಿಂ ವ್ಯಾಪಾರಸ್ಥರು ಹಲ್ಲೆ ನಡೆಸಿದ್ದಾರೆ. ರೈತ ಈರಪ್ಪ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆಗೊಳಗಾದ ಈರಪ್ಪ ಪ್ರತಿ ದಿನ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಲು ಬರುತ್ತಿದ್ದರು. ಆದರೆ ಇಂದು ಐವರು ಮುಸ್ಲಿಂ ವ್ಯಾಪಾರಸ್ಥರು ಹಲ್ಲೆ ನಡೆಸಿದ್ದಾರೆ.
ಹಿಂದೂ ವ್ಯಾಪಾರಿ ಅನ್ನೋ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಹಲ್ಲೆಗೊಳಗಾದ ರೈತ ಆರೋಪ ಮಾಡಿದ್ದಾರೆ. ಹಿಂದೂಗಳದ್ದು ಬಹಳ ಆಗಿದೆ ಅಂತಾ ಬೆದರಿಕೆ ಹಾಕಿದರು. ನಿಮ್ಮನ್ನು ದನ ಕಡಿದಂತೆ ಕಡೆಯುತ್ತೇವೆ. ನಿಮ್ಮನ್ನು ಬಿಡೋದಿಲ್ಲ ಅಂತಾ ಧಮ್ಕಿ ಹಾಕಿದ್ದಾರೆ ಎಂದು ರೈತ ಆರೋಪ ಮಾಡಿದ್ದಾರೆ. ಇನ್ನು ಈ ಮುಂಚೆಯೂ ಹಲ್ಲೆ ನಡೆದಿತ್ತು. ಎಂಟರಿಂದ ಹತ್ತು ಯುವಕರು ಹಲ್ಲೆ ನಡೆಸಿದ್ದರು ಎಂದು ಹಲ್ಲೆಗೊಳಗಾದ ರೈತ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ: ನಿರ್ದೇಶಕ ಅಗ್ನಿ ಶ್ರೀಧರ ಆರೋಪ
ಮೈಸೂರಿನ ವಿಜಯನಗರದಲ್ಲಿ ಕಳ್ಳರ ಹಾವಳಿ
ಇಲ್ನೋಡಿ ಖದೀಮರು ಹೇಗೆ ಹೊಂಚು ಹಾಕ್ತಿದ್ದಾರೆ. ಒಂದೇ ಬೈಕ್‌ನಲ್ಲಿ ಏರಿಯಾದಲ್ಲಿರೌಂಡ್ಸ್ ಹಾಕೋ ಇವ್ರು ಯಾವ ಮನೆ ಕಳ್ಳತನ ಮಾಡಬಹುದು ಅಂತಾ ಸ್ಕೆಚ್ ಹಾಕ್ತಿದ್ದಾರೆ. ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿಕಳ್ಳರ ಹಾವಳಿ ಹೆಚ್ಚಾಗಿದ್ದು, ಜನ ಬೇಸತ್ತುಹೋಗಿದ್ದಾರೆ. ರಾತ್ರಿವೇಳೆ ಪೊಲೀಸರು ರೌಂಡ್ಸ್ ಹಾಕ್ಬೇಕು ಅಂತಾ ಜನರು ಒತ್ತಾಯಿಸಿದ್ದಾರೆ.
ಬೆಂಗಳೂರಲ್ಲಿ ದರ್ಪ ತೋರಿದ ಆಟೋ ಚಾಲಕ
ಬೆಂಗಳೂರಿನ ಬೇಗೂರು ಮುಖ್ಯ ರಸ್ತೆಯ ಯಲ್ಲೇನಹಳ್ಳಿಯಲ್ಲಿ ಆಟೋ ಚಾಲಕ ದರ್ಪ ತೋರಿದ್ದಾನೆ. ರೈಟ್ ಸೈಡ್ ಇಂಡಿಕೇಟರ್ ಹಾಕಿ ಹಿಂದೆ ಬರ್ತಿದ್ದ ಕಾರು ಚಾಲಕನಿಗೆ ತೊಂದ್ರೆ ಕೊಟ್ಟಿದ್ದಾನೆ. ಈ ವೇಳೆ ಇಂಟಿಕೇಟರ್ ಆಫ್ ಮಾಡುವಂತೆ ಕಾರು ಚಾಲಕ ಹೇಳಿದಾಗ ಕಾರು ಅಡ್ಡಗಟ್ಟಿದ ಆಟೋ ಚಾಲಕ ಆವಾಜ್ ಹಾಕಿದ್ದಾನೆ. ಈ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಸೆರೆಯಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ