Cyber crime: ಲಿಂಕ್ ಕಳುಹಿಸಿ ವೈದ್ಯನಿಗೆ ಲಕ್ಷ ರೂಪಾಯಿ ವಂಚನೆ: ಸೈಬರ್ ಠಾಣೆಯಲ್ಲಿ ದಾಖಲಾಯ್ತು ದೂರು

| Updated By: ಸಾಧು ಶ್ರೀನಾಥ್​

Updated on: Jan 22, 2022 | 12:37 PM

ನೆಟ್ ಬ್ಯಾಂಕಿಂಗ್ ಬಂದ್ ಆಗಬಹುದು ಎಂದು ಗಾಬರಿಗೊಂಡ ಡಾ. ಸಮಗಾರ ಅವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ಮೊಬೈಲ್‌ ಫೋನ್‌ಗೆ ಬಂದ ಒಟಿಪಿ ಹಾಕಿ ಸಬ್‌ಮಿಟ್ ಮಾಡಿದ್ದರು. ಬಳಿಕ ಹಂತ ಹಂತವಾಗಿ ಡಾ. ಸಮಗಾರ ಅವರ ಖಾತೆಯಿಂದ ವಂಚಕರು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

Cyber crime: ಲಿಂಕ್ ಕಳುಹಿಸಿ ವೈದ್ಯನಿಗೆ ಲಕ್ಷ ರೂಪಾಯಿ ವಂಚನೆ: ಸೈಬರ್ ಠಾಣೆಯಲ್ಲಿ ದಾಖಲಾಯ್ತು ದೂರು
ಪ್ರಾತಿನಿಧಿಕ ಚಿತ್ರ
Follow us on

ಧಾರವಾಡ: ‘ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಸರಿಪಡಿಸಿಕೊಳ್ಳಿ’ ಎಂದು ಅಪರಿಚಿತನೊಬ್ಬ ಧಾರವಾಡದ ವೈದ್ಯರೊಬ್ಬರಿಗೆ ಸಂದೇಶ ಕಳುಹಿಸಿ ಅವರ ಖಾತೆಯಿಂದ 1.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಧಾರವಾಡದ ಕೆಲಗೇರಿ ರಸ್ತೆ ಗ್ರೀನ್ ವೀವ್ ಲೇಔಟ್ ನಿವಾಸಿ ಡಾ. ಎಸ್.ವಿ. ಸಮಗಾರ ವಂಚನೆಗೀಡಾದವರು. ಡಾ. ಸಮಗಾರ ಅವರ ಮೊಬೈಲ್‌ಗೆ ಅಪರಿಚಿತರಿಂದ ಗುರುವಾರ ಸಂದೇಶ ಬಂದಿತ್ತು. ‘ಪ್ರಿಯ ಗ್ರಾಹಕರೇ, ಇಂದು ನಿಮ್ಮ ಎಸ್‌ಬಿಐ ಯೋನೊ ಅಕೌಂಟ್ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಪಾನ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ’ ಎಂದು ಲಿಂಕ್ ಕಳುಹಿಸಿದ್ದರು (cyber crime).

ನೆಟ್ ಬ್ಯಾಂಕಿಂಗ್ ಬಂದ್ ಆಗಬಹುದು ಎಂದು ಗಾಬರಿಗೊಂಡ ಡಾ. ಸಮಗಾರ ಅವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ಮೊಬೈಲ್‌ ಫೋನ್‌ಗೆ ಬಂದ ಒಟಿಪಿ ಹಾಕಿ ಸಬ್‌ಮಿಟ್ ಮಾಡಿದ್ದರು. ಬಳಿಕ ಹಂತ ಹಂತವಾಗಿ ಡಾ. ಸಮಗಾರ ಅವರ ಖಾತೆಯಿಂದ ವಂಚಕರು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಆ ಇಬ್ಬರೂ ಕಾನ್ಸ್​ಟೇಬಲ್​ ಪಾರ್ಟ್​ನರ್ಸ್​ ಇನ್​ ಕ್ರೈಂ!
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆಯೇ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರು ಯುವ ಪೊಲೀಸ್ ಕಾನ್ಸ್​ಟೇಬಲ್​​ಗಳ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಪ್ರಕರಣ ಹಳೆಯದೇ ಆದರೂ ಮಾದಕ ವಸ್ತು ಅಪರಾಧದಲ್ಲಿ ಈ ಹಿಂದೆಯೂ ಇವರ ಹಸ್ತಕ್ಷೇಪ ಇರುವುದು ಪ್ರಧಾನವಾಗಿ ಬೆಳಕಿಗೆ ಬಂದಿದೆ. ಸಿಎಂ ನಿವಾಸದ ಬಳಿ ಗಾಂಜಾ ಡೀಲ್ ಕುದುರಿಸುವ ಕೇಸ್ ನಲ್ಲಿ ಜಾಮೀನು ಪಡೆದಿದ್ದ ಆರೋಪಿಗಳಾದ ಶಿವಕುಮಾರ ಹಾಗೂ ಸಂತೋಷ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ಇದೀಗ ಬೆದರಿಕೆ ಪ್ರಕರಣ ದಾಖಲಾಗಿದೆ. ಆರ್ ಟಿ ನಗರ ಠಾಣೆಯಲ್ಲಿ ಬಂಧನವಾಗಿದ್ದ ಪೊಲೀಸ್ ಕಾನ್ಸ್​ಟೇಬಲ್​​ಗಳಾದ ಶಿವಕುಮಾರ್ ಹಾಗೂ ಸಂತೋಷ್ ನೋವ್ಕಾರ್ ಕೋರಮಂಗಲ ಠಾಣೆಯ ಪೊಲೀಸ್ ಸಿಬ್ಬಂದಿ. ಗಾಂಜಾ ಪ್ರಕರಣದಲ್ಲಿ ಅಖಿಲ್ ರಾಜ್ ಹಾಗೂ ಅಮ್ಜದ್ ಜೊತೆ ಈ ಇಬ್ಬರು ಪೊಲೀಸ್ ಸಿಬ್ಬಂದಿ ಅರೆಸ್ಟ್ ಆಗಿದ್ದರು. ಇದೀಗ ಇದೇ ಪೊಲೀಸ್ ಸಿಬ್ಬಂದಿಯ ಹಳೇ ಕ್ರಿಮಿನಲ್ ಕರಾಳ ಚರಿತ್ರೆ ಕೂಡ ಬಯಲಿಗೆ ಬಂದಿದೆ.

ಮಾದಕ ಅಪರಾಧದಲ್ಲಿ ಈ ಹಿಂದೆಯೂ ಕಾನ್ಸ್​ಟೇಬಲ್​​ಗಳ ಹಸ್ತಕ್ಷೇಪ ಪತ್ತೆ!:
ಆಡುಗೋಡಿ ನಿವಾಸಿ ಆಟೋ ಚಾಲಕ ಇಲಿಯಾಸ್ ರಿಂದ ಕೋರಮಂಗಲ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ದೂರು ನೀಡಲಾಗಿದೆ. ಕಳೆದ ಅಕ್ಟೋಬರ್ 25 ನೇ ತಾರೀಕು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಇಲಿಯಾಸ್ ಹಾಗೂ ಆತನ ಸ್ನೇಹಿತ ಸೈಯದ್ ಗಾಂಜಾ ಸೇವನೆ ಮಾಡ್ತಿದ್ದರು. ಆ ವೇಳೆ ಕೋರಮಂಗಲ ಪೊಲೀಸ್ ಸಿಬ್ಬಂದಿಯಾದ ಶಿವಕುಮಾರ್ ಹಾಗೂ ಸಂತೋಷ್ ಅವರಿಬ್ಬರೂ ಆಟೋ ಚಾಲಕ ಇಲಿಯಾಸ್ ನನ್ನು ಹಿಡಿದಿದ್ದರು. ಗಾಂಜಾ ತುಂಬಿದ್ದ ಮೂರು ಸಿಗರೇಟನ್ನ ವಶಕ್ಕೆ ತೆಗೆದುಕೊಂಡಿದ್ದ ಇವರಿಬ್ಬರೂ ಬರೋಬ್ಬರಿ ಒಂದು ಲಕ್ಷ ರೂಪಾಯಿ ಲಂಚಕ್ಕೆ ಡಿಮಾಂಡ್ ಮಾಡಿದ್ದರು. ಇಲ್ಲದಿದ್ದರೆ ಗಾಂಜಾ ಮಾರಾಟದ ಕೇಸ್ ದಾಖಲಿಸೋದಾಗಿ ಬೆದರಿಕೆ ಒಡ್ಡಿದ್ದರು!

ಪ್ರಕರಣದಲ್ಲಿ ಬೆದರಿದ ಆಟೋ ಚಾಲಕ ಇಲಿಯಾಸ್​, ನನ್ನ ಕೈಲಿ ಒಂದು ಲಕ್ಷ ಕೊಡುವುದಕ್ಕೆ ಆಗಲಿಲ್ಲ. ಹಾಗಾಗಿ 5 ಸಾವಿರ ರೂ ಕೊಟ್ಟು ಸುಮ್ಮನಾಗಿದ್ದೆ. ಇದೀಗ ಶಿವಕುಮಾರ್ ಹಾಗೂ ಸಂತೋಷ್ ಅರೆಸ್ಟ್ ಆಗಿರೋ ವಿಚಾರ ಮಾಧ್ಯಮಗಳ ಮೂಲಕ ತಿಳಿದುಬಂತು ಎಂದು ಹೇಳಿದ್ದಾರೆ. ಸದ್ಯ ಇಲಿಯಾಸ್​ ಗಾಂಜಾ ಸಿಗರೇಟ್​ ಪ್ರಕರಣ ಸಂಬಂಧ ಕೋರಮಂಗಲ ಠಾಣೆಯಲ್ಲಿ FIR ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

Also Read:

ಮದುವೆಗೆ ಬರಬೇಡಿ ಎಂದು ಮನವಿ ಮಾಡಿದ ವಧು! ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Published On - 11:15 am, Sat, 22 January 22