Mayor Election: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ, ಕಾಂಗ್ರೆಸ್​ಗೆ ಮುಖಭಂಗ

|

Updated on: Jun 20, 2023 | 3:05 PM

ತೀವ್ರ ಕುತೂಃಲ ಮೂಡಿಸಿದ್ದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್-ಉಪಮೇಯರ್​ ಚುನಾವಣೆ ಮುಗಿದ್ದು, ಕಾಂಗ್ರೆಸ್​ಗೆ ಮುಖಭಂಗವಾಗಿದೆ,.

Mayor Election: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ, ಕಾಂಗ್ರೆಸ್​ಗೆ ಮುಖಭಂಗ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
Follow us on

ಹುಬ್ಬಳ್ಳಿ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(as Hubballi Dharwad municipal corporation )ಕೊನೆಗೂ ಬಿಜೆಪಿ ಪಾಲಾಗಿದೆ. ಇಂದು ನಡೆದ ಚುನಾವಣೆಯಲ್ಲಿ ಮೇಯರ್(Mayor Election) ​ ಆಗಿ ಬಿಜೆಪಿಯ ವೀಣಾ ಬಾರದ್ವಾಡ್​ ಆಯ್ಕೆಯಾಗಿದ್ದರೆ, ಉಪ ಮೇಯರ್​ ಆಗಿ ಬಿಜೆಪಿಯ ಸತೀಶ್ ಹಾನಗಲ್ ಆಯ್ಕೆಯಾದರು. ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ(BJP) ವೀಣಾ ಬಾರದ್ವಾಡ್ ಪರ 46 ಮತ ಚಲಾವಣೆಗೊಂಡಿದ್ದರೆ, ಕಾಂಗ್ರೆಸ್​​ ಪಕ್ಷದ ಸುವರ್ಣ ಪರ 37 ಮತ ಚಲಾವಣೆಗೊಂಡಿವೆ. ಇದರೊಂದಿಗೆ ಬೆಂಗಳೂರು ನಂತರದ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರ ಚುಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಹು-ಧಾ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ: ಬಿಜೆಪಿಗೆ 1 ಮತ ಪ್ಲಸ್-ಕಾಂಗ್ರೆಸ್‌ಗೆ ಬಿಗ್ ಶಾಕ್

ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನದ ಚುನಾವಣೆಗೆ ಬಿಜೆಪಿಯಿಂದ ವೀಣಾ ಬರದ್ವಾಡ್ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್​ನಿಂದ ಸುವರ್ಣ ಅವರು ನಾಮಪತ್ರ ಸಲ್ಲಿಸಿದ್ದರು. ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ್ ಅವರು ಈ ಚುನಾವಣೆ ನಡೆಸಿಕೊಟ್ಟಿದ್ದು, ಅಂತಿಮವಾಗಿ ಬಿಜೆಪಿಯ ವೀಣಾ ಬರದ್ವಾಡ್ ಅವರು ಒಟ್ಟು 46 ಮತಗಳೊಂದಿಗೆ ಮೇಯರ್​ ಆಗಿ ಆಯ್ಕೆಯಾದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು 82 ಸದಸ್ಯರ ಬಲ ಹೊಂದಿದ್ದು, ಅಧಿಕಾರ ಹಿಡಿಯಲು 46 ಮತಗಳು ಬೇಕಿತ್ತು. ಬಿಜೆಪಿ ಕಾರ್ಪೊರೇಟರ್​ಗಳ ಸಂಖ್ಯೆ 39 ಇದ್ದು, ಕಾಂಗ್ರೆಸ್​​​​ 33, ಪಕ್ಷೇತರ 6, AIMIM 3, ಜೆಡಿಎಸ್ 1 ಸ್ಥಾನ ಹೊಂದಿದೆ. ಇನ್ನು 8 ಜನಪ್ರತಿನಿಧಿಗಳು, 4 ಶಾಸಕರು, 1 ಸಂಸದ, 3 ಎಂಎಲ್​ಸಿ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಸೇರಿಸಿ ಒಟ್ಟು 90 ಮತಗಳಿದ್ದವು, ಇದರಲ್ಲಿ ಬಿಜೆಪಿ ಮೇಯರ್ ಅಭ್ಯರ್ಥಿ ಪರ 46 ಮತಗಳು ಚಲಾವಣೆಯಾಗಿದ್ದರೆ, ಕಾಂಗ್ರೆಸ್​ನ ಸುವರ್ಣ ಅವರು 37 ಮತ ಪಡೆಯುವುರೊಂದಿಗೆ ಸೋಲು ಕಂಡರು.

ಹಲವಾರು ವರ್ಷಗಳಿಂದ ಆಡಳಿತ ಬಿಜೆಪಿ ಕೈಯಲ್ಲಿದೆ. ಈ ಸಲವೂ ಬಿಜೆಪಿಯ ಈರೇಶ ಅಂಚಟಗೇರಿ ಮೇಯರ್ ಹಾಗೂ ಉಮಾ ಮುಕ್ಕುಂದ ಉಪಮೇಯರ್ ಆಗಿದ್ದರು. ಇವರಿಬ್ಬರ ಅವಧಿ ಇದೇ ಮೇ 27ಕ್ಕೆ ಮುಕ್ತಾಯಗೊಂಡಿತ್ತು. ಈ ಬಾರಿಯೂ ಸಹ ಬಿಜೆಪಿ ಅಧಿಕಾರಕ್ಕೇರುವ ಎಲ್ಲಾ ನಿರೀಕ್ಷೆಗಳಿದ್ದವು. ಆದರೂ ಕೇಸರಿ ಪಡೆಗೆ ಅಡ್ಡಮತದಾನ ಭೀತಿ ಇತ್ತು. ಇದಕ್ಕಾಗಿ ಬಿಜೆಪಿ ಅಧಿಕಾರವನ್ನ ಉಳಿಸಿಕೊಳ್ಳಲು ವಿವಿಧ ತಂತ್ರಗಾರಿಕೆಗೆ ಮೊರೆ ಹೋಗಿತ್ತು, ಕಾಂಗ್ರೆಸ್ ಏನೂ ಹಿಂದೆ ಬಿದ್ದಿರಲಿಲ್ಲ.ಶತಾಯಗತಾಯವಾಗಿ ಗದ್ದುಗೆಗೆ ಏರಬೇಕೆಂದು ರಣತಂತ್ರ ಹೆಣೆದಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:36 pm, Tue, 20 June 23