Hubballi: ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲಕ್ಕೆ ಆರ್ಥಿಕ‌ ಸಂಕಷ್ಟ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ‌

| Updated By: ಸಾಧು ಶ್ರೀನಾಥ್​

Updated on: Aug 31, 2023 | 12:40 PM

CM ಸಿದ್ದರಾಮಯ್ಯಗೆ ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ಬರೆದಿರುವ ಪತ್ರದ ಸಾರಾಂಶ ಹೀಗಿದೆ: ಕಳೆದ 12 ವರ್ಷದಲ್ಲಿ ಅಧ್ಯಕ್ಷರಾದ ಪ್ರಾದೇಶಿಕ ಆಯುಕ್ತರು ಸಭೆ ಕರೆಯದಿರುವುದು ಶೋಚನೀಯ. ಗುರುಕುಲಕ್ಕೆ ಸರ್ಕಾರ ಪ್ರತಿ ವರ್ಷ 1 ಕೋಟಿ 25 ಲಕ್ಷ ಅನುದಾನ ನೀಡುತ್ತಿತ್ತು. ಆದ್ರೆ 2023-24 ರಲ್ಲಿ ಕೇವಲ 25 ಲಕ್ಷ ಅನುದಾನ ಬಂದಿದೆ. ಹೀಗಾಗಿ ಗುರುಕುಲದ ನಿತ್ಯ ಚಟುವಟಿಕೆ ನಡೆಸಲು ಕಷ್ಟವಾಗಿದೆ ಎಂದಿದ್ದಾರೆ.

Hubballi: ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲಕ್ಕೆ ಆರ್ಥಿಕ‌ ಸಂಕಷ್ಟ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ‌
ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ‌
Follow us on

ಹುಬ್ಬಳ್ಳಿ, ಆಗಸ್ಟ್​ 31: ಗಂಗೂಬಾಯಿ ಹಾನಗಲ್ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ (Dr.Gangubai Hangal Gurukul) ಆರ್ಥಿಕ‌ ಸಂಕಷ್ಟದಲ್ಲಿದೆ. ಕಳೆದ ನಾಲ್ಕು ತಿಂಗಳಿಂದ ಗುರುಕುಲದ ಗುರುಗಳಿಗೆ ಗೌರವ ಧನಕ್ಕೆ ಕೊಕ್ಕೆ ಬಿದ್ದಿದೆ. ಗುರುಗಳು ಹಾಗೂ ತಬಲಾ ಸಾರಥಿಗಳಿಗೆ ಕಳೆದ ನಾಲ್ಕು ತಿಂಗಳಿಂದ ಗೌರವ ಧನ ಬಂದಿಲ್ಲ. ಹಾಗಾಗಿ ಗುರುಕುಲದ ಗುರುಗಳಿಗೆ ಗೌರವ ಧನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (CM Siddaramaiah) ಮೇಲ್ಮನೆ ಸದಸ್ಯ, ಕಾಂಗ್ರೆಸ್ ಪಕ್ಷದ ಜಗದೀಶ್ ಶೆಟ್ಟರ್ ‌(Congress MLC Jagadish Shettar) ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ಬರೆದಿರುವ ಪತ್ರದ ಸಾರಾಂಶ ಹೀಗಿದೆ:

ಗುರುಕುಲದ ಸರ್ವತೋಮುಖ ಅಭಿವೃದ್ಧಿಗೂ ಅನುದಾನ‌ ಬಿಡುಗಡೆ ಮಾಡುವಂತೆ ಜಗದೀಶ್ ಶೆಟ್ಟರ್ ಪತ್ರದಲ್ಲಿ ಕೋರಿದ್ದಾರೆ. ಕಳೆದ 12 ವರ್ಷದಲ್ಲಿ ಅಧ್ಯಕ್ಷರಾದ ಪ್ರಾದೇಶಿಕ ಆಯುಕ್ತರು ಸಭೆ ಕರೆಯದಿರುವುದು ಶೋಚನೀಯ ಸಂಗತಿಯಾಗಿದೆ‌. ಗುರುಕುಲಕ್ಕೆ ಸರ್ಕಾರ ಪ್ರತಿ ವರ್ಷ 1 ಕೋಟಿ 25 ಲಕ್ಷ ರೂಪಾಯಿ ಅನುದಾನ ನೀಡುತ್ತಿತ್ತು. ಆದ್ರೆ 2023-24 ರಲ್ಲಿ ಕೇವಲ 25 ಲಕ್ಷ ರೂಪಾಯಿ ಅನುದಾನ ಬಂದಿದೆ. ಗುರುಕುಲದ ಸರ್ಕಾರಿ ಆಡಳಿತ ವರ್ಗ ಹೊರತು ಪಡಿಸಿ 25 ಲಕ್ಷ ರೂ ಅನುದಾನ ಬಂದಿದೆ.

ಇದನ್ನೂ ಓದಿ:  ಲಿಂಗಸುಗೂರು ಪುರಸಭೆಯಲ್ಲಿ ಲ್ಯಾಂಡ್ ಮಾಫಿಯಾ -ಸಿಗ್ನೇಚರ್ ಇಲ್ಲದೆಯೇ ವೈಟ್ನರ್ ಹಚ್ಚಿ ದಾಖಲೆ ಸೃಷ್ಟಿ!

ಹೀಗಾಗಿ ಗುರುಕುಲದ ನಿತ್ಯ ಚಟುವಟಿಕೆ ನಡೆಸಲು ಕಷ್ಟವಾಗಿದೆ. ಗುರುಕುಲದಲ್ಲಿ 5 ಗುರುಗಳು, 4 ತಬಲಾ ಸಾರಥಿಗಳು ಕೆಲಸ ಮಾಡುತ್ತಿದ್ದಾರೆ. ಆದ್ರೆ ಕಳೆದ ನಾಲ್ಕು ತಿಂಗಳಿಂದ ಅವರಿಗೆ ಗೌರವಧನ ಬಂದಿಲ್ಲ ಎಂದು ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ಅವರು ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾರೆ.

ಹುಬ್ಬಳ್ಳಿ ಕುರಿತಾದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ