ಧಾರವಾಡ: ಬೆಳೆ ವಿಮೆ ಪರಿಹಾರ ನೀಡದ ಬ್ಯಾಂಕ್‌ಗೆ 2 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ
ದೇವರಹುಬ್ಬಳ್ಳಿಯ ಈರಪ್ಪ ಬಸವಣೆಪ್ಪ ಕುಂದಗೋಳ ಉಳಿತಾಯ ಖಾತೆಯಿಂದ ನಿಗದಿಯ ಕೆ.ವಿ.ಜಿ. ಬ್ಯಾಂಕಿನವರು ರೂ.3321.32 ಬೆಳೆ ವಿಮೆ ಪ್ರಿಮಿಯಮ್ಗಾಗಿ ಉಳಿತಾಯ ಖಾತೆಯಿಂದ ಕಡಿತಗೊಳಿಸಿದ್ದರು. ಆದರೆ ಕಡಿತಗೊಳಿಸಿದ ಪ್ರಿಮಿಯಮ್ ಹಣವನ್ನು ಕೆ.ವಿ.ಜಿ. ಬ್ಯಾಂಕಿನವರು ವಿಮಾ ಕಂಪನಿಗೆ ಕಳುಹಿಸಿರಲಿಲ್ಲ. ಹೀಗಾಗಿ ರೈತರಿಗೆ ಪ್ರಿಮಿಯಂ ಹಣ ಬಂದಿರಲಿಲ್ಲ. ಈ ಪ್ರಕರಣದಲ್ಲಿ ನ್ಯಾಯ ಕೋರಿ ರೈತ ಈರಪ್ಪ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಧಾರವಾಡ, ಡಿ.4: ಬೆಳೆ ವಿಮೆ ಪರಿಹಾರ ನೀಡದ ನಿಗದಿಯ ಕೆ.ವಿ.ಜಿ. ಬ್ಯಾಂಕಿಗೆ 2.59 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ (Dharwad) ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಅಲ್ಲದೆ, ದೂರುದಾರ ಈಶ್ವರಪ್ಪ ಬಸವಣೆಪ್ಪ ಕುಂದಗೋಳ ಅವರಿಗೆ ಪರಿಹಾರ ನೀಡುವಂತೆ ಸೂಚಿಸಿದೆ.
ದೇವರಹುಬ್ಬಳ್ಳಿಯ ಈರಪ್ಪ ಬಸವಣೆಪ್ಪ ಕುಂದಗೋಳ ಅವರು ನಿಗದಿಯ ಕೆವಿಜಿ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. 2016-17ನೇ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ಬ್ಯಾಂಕ್ ಮೂಲಕ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು. ಉಳಿತಾಯ ಖಾತೆಯಲ್ಲಿ ರೂ.1.35 ಗಿಂತ ಹೆಚ್ಚು ಹಣ ಜಮಾವಿತ್ತು.
2017ರ ಜುಲೈ 13ರಂದು ದೂರುದಾರರ ಉಳಿತಾಯ ಖಾತೆಯಿಂದ ನಿಗದಿಯ ಕೆ.ವಿ.ಜಿ. ಬ್ಯಾಂಕಿನವರು ರೂ.3321.32 ಬೆಳೆ ವಿಮೆ ಪ್ರಿಮಿಯಮ್ಗಾಗಿ ಉಳಿತಾಯ ಖಾತೆಯಿಂದ ಕಡಿತಗೊಳಿಸಿದ್ದರು. ಆದರೆ ಕಡಿತಗೊಳಿಸಿದ ಪ್ರಿಮಿಯಮ್ ಹಣವನ್ನು ಕೆ.ವಿ.ಜಿ. ಬ್ಯಾಂಕಿನವರು ವಿಮಾ ಕಂಪನಿಗೆ ಕಳುಹಿಸಿರಲಿಲ್ಲ. ಹೀಗಾಗಿ ರೈತರಿಗೆ ಪ್ರಿಮಿಯಂ ಹಣ ಬಂದಿರಲಿಲ್ಲ. ಈ ಪ್ರಕರಣದಲ್ಲಿ ನ್ಯಾಯ ಕೋರಿ ರೈತ ಈರಪ್ಪ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಧಾರವಾಡ ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳಿಗೆ ಪಿಡಿಒಗಳೇ ಇಲ್ಲ ! ಕಣ್ಮುಚ್ಚಿ ಕುಳಿತ ಸರ್ಕಾರ
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ವಿಮಾ ಪ್ರಿಮಿಯಂ ಬ್ಯಾಂಕಿನವರು ಕಡಿತಗೊಳಿಸಿದ್ದರೂ ಹಣವನ್ನು ಅವರು ವಿಮಾ ಕಂಪನಿಗೆ ಕಳುಹಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ದೂರುದಾರರು ತಮ್ಮ ಬೆಳೆಯ ಮೌಲ್ಯವನ್ನು ರೂ.1.64,937 ತೋರಿಸಿ ವಿಮೆ ಮಾಡಿಸಿದ್ದರು. ಆದ್ದರಿಂದ ರೈತರ ಈರಪ್ಪ ಅವರಿಗೆ ಬ್ಯಾಂಕಿನವರು ರೂ.1.50 ಬೆಳೆ ಪರಿಹಾರ ಮತ್ತು ಅದರ ಮೇಲೆ 2016 ರಿಂದ ಶೇ. 8ರಂತೆ ಬಡ್ಡಿ ರೂ. 49 ಸಾವಿರ ಒಟ್ಟು ರೂ.1.99 ಲಕ್ಷ ಪರಿಹಾರ ನೀಡುವಂತೆ ಕೆ.ವಿ.ಜಿ. ಬ್ಯಾಂಕಿಗೆ ನಿರ್ದೇಶಿಸಿದೆ.
ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ. 50 ಸಾವಿರ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚವೆಂದು ರೂ. 10 ಸಾವಿರಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಬ್ಯಾಂಕಿಗೆ ಆಯೋಗ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ