ಧಾರವಾಡ: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 11, 2023 | 9:36 PM

ಅನ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಧಾರವಾಡದ ಮೂರನೇ ಅಧಿಕ ಜಿಲ್ಲಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2021ರ ಆಗಸ್ಟ್ 11 ರಂದು ಪತ್ನಿಯನ್ನು ಬಳ್ಳಾರಿಯನ್ನು ಕೊಲೆಗೈಯಲಾಗಿತ್ತು. ಈ‌ ಬಗ್ಗೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಧಾರವಾಡ: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ
ಗಣೇಶ ಬಳ್ಳಾರಿ
Follow us on

ಧಾರವಾಡ, ಸೆಪ್ಟೆಂಬರ್​ 11: ಪತ್ನಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ಧಾರವಾಡದ ಮೂರನೇ ಅಧಿಕ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ನೀಡಿದೆ. ಗಣೇಶ ಬಳ್ಳಾರಿ ಶಿಕ್ಷೆಗೊಳಗಾದ ಅಪರಾಧಿ. ಗಣೇಶ, ಧಾರವಾಡದ ರಾಜೀವ ಗಾಂಧಿ ನಗರ ನಿವಾಸಿಯಾಗಿದ್ದು, 2021ರ ಆಗಸ್ಟ್ 11 ರಂದು ಪತ್ನಿ ಶಿಲ್ಪಾ ಬಳ್ಳಾರಿಯನ್ನು ಕೊಲೆಗೈಯ್ದಿದ್ದ. ಅನ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಗಣೇಶನನ್ನು ಪ್ರಶ್ನಿಸಿದ್ದ ಪತ್ನಿ ಶಿಲ್ಪಾ ವಿರುದ್ಧ ಗಣೇಶ ಸಿಟ್ಟಿಗೆದ್ದಿದ್ದ. ಅನ್ಯ ಮಹಿಳೆಯೊಂದಿಗೆ ಇದ್ದಾಗಲೇ ಸಿಕ್ಕಿ ಬಿದ್ದಿದ್ದ ಗಣೇಶ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ತಾನು ಹೊಸದಾಗಿ ಕಟ್ಟಿಸುತ್ತಿದ್ದ‌ ಮನೆಯಲ್ಲಿ ಪತ್ನಿಯನ್ನು ಸಲಿಕೆಯಿಂದ ಹೊಡೆದು ಕೊಂದಿದ್ದ.

ಈ‌ ಬಗ್ಗೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ‌ ವಿಚಾರಣೆ ನಡೆಸಿ‌ದ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಸರ್ಕಾರದ ಪರ ಪ್ರಶಾಂತ ತೊರಗಲ್ ವಾದ ಮಂಡಿಸಿದ್ದರು.

ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ: 2,80,000 ಮೌಲ್ಯ ಬೆಲೆಬಾಳುವ ಮೂರು ಬೈಕ್​ ವಶಕ್ಕೆ

ಬೆಂಗಳೂರು: ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್​ಗಳ ಲಾಕ್​ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು  ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಾ, ಮೊಹಮ್ಮದ್ ಆಜಾದ್ ಖಾನ್ ಬಂಧಿತರು.  ಬಂಧಿತ ಆರೋಪಿಗಳು ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್​ಗಳನ್ನೆ ಟಾರ್ಗೆಟ್ ಮಾಡುತ್ತಿದ್ದು, ರಾತ್ರಿ ವೇಳೆ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 2,80,000 ಮೌಲ್ಯ ಬೆಲೆಬಾಳುವ ಮೂರು ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಆನೇಕಲ್​ನಲ್ಲಿ ಮಿತಿಮೀರಿದ ಸರಣಿ ಕಳ್ಳತನ: 1 ವಾರದಲ್ಲಿ 6 ಮನೆಗಳಿಗೆ ಕನ್ನ: 13 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

ಮತ್ತೊಂದು ಪ್ರಕರಣದಲ್ಲಿ ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ರೋಹಿತ್ ಅರೆಸ್ಟ್​ ಆದ ಆರೋಪಿ. ಬಂಧಿತನ ಬಳಿ ಇದ್ದ 45 ಗ್ರಾಂ ಚಿನ್ನದ ಸರ ಹಾಗೂ ಉಂಗುರ ವಶಕ್ಕೆ ಪಡೆಯಲಾಗಿದೆ. ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಗದಗ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಇನ್ನೋರ್ವನಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. 26 ವರ್ಷದ ಸುರೇಶ್ ಮೃತಪಟ್ಟಿದ್ದು, ಹಿಂಬದಿ ಸವಾರ ಸಂತೋಷಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಬ್ಬರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ನಿವಾಸಿಗಳು. ಗ್ರಾಮದ ಬಸವೇಶ್ವರ ಜಾತ್ರೆ ನಿಮಿತ್ತ ಡ್ರೆಸ್ ತರಲು ನರಗುಂದಕ್ಕೆ ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಮರಳಿ ತಡಹಾಳ ಗ್ರಾಮಕ್ಕೆ ಬರುವಾಗ ದುರ್ಘಟನೆ ಸಂಭವಿಸಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:35 pm, Mon, 11 September 23