ಧಾರವಾಡ: ಭೂಸ್ವಾಧೀನ ಹಣ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಕಚೇರಿ ಜಪ್ತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 13, 2022 | 2:41 PM

ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಆದೇಶನ್ವಯ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್​​ ಕಚೇರಿಯನ್ನು ಜಪ್ತಿ ಮಾಡಲಾಗಿದೆ.

ಧಾರವಾಡ: ಭೂಸ್ವಾಧೀನ ಹಣ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಕಚೇರಿ ಜಪ್ತಿ
ಧಾರವಾಡ ಜಿಲ್ಲಾ ಪಂಚಾಯತ್​
Follow us on

ಧಾರವಾಡ: ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಆದೇಶನ್ವಯ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್​​ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ವಿರೂಪಾಕ್ಷಪ್ಪ ಎಂಬ ರೈತನ ಜಮೀನನ್ನು ಕುಡಿಯುವ ನೀರಿನ ಯೋಜನೆ ಸಲುವಾಗಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು. 2012-13ರಲ್ಲಿ 6 ಎಕರೆ, 30 ಗುಂಟೆ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸರ್ಕಾರ 78 ಲಕ್ಷ ರೂ. ಪರಿಹಾರ ಮೊತ್ತ ನಿಗದಿ ಮಾಡಿತ್ತು.

ಆದರೆ ರೈತ ವಿರೂಪಾಕ್ಷಪ್ಪ ಹೆಚ್ಚುವರಿ ಪರಿಹಾರಕ್ಕಾಗಿ ಕೋರ್ಟ್​ ಮೊರೆ ಹೋಗಿದ್ದರು. ಆಗ ನ್ಯಾಯಾಲಯ 2.64 ಕೋಟಿ ಪರಿಹಾರ ನೀಡುವಂತೆ ​ ಆದೇಶಿಸಿತ್ತು. ಆದರೆ ಆದೇಶ ನೀಡಿ 1 ವರ್ಷವಾದರೂ ಪರಿಹಾರ ನೀಡದ ಹಿನ್ನೆಲೆ ಇಂಜಿನಿಯರ್​ ಕಚೇರಿ ಜಪ್ತಿ ಮಾಡಲು ಕೋರ್ಟ್​ ಆದೇಶ ನೀಡಿದೆ. ಕಚೇರಿಯ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣ ಜಪ್ತಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:40 pm, Tue, 13 September 22