ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ(Gram Panchayat Member Murder) ಪ್ರಕರಣಕ್ಕೆ ಸಂಬಂಧಿಸಿ ಇದೀಗ, ಕೊಲೆ ನಡೆದ ಮೂರು ತಿಂಗಳ ಬಳಿಕ ಆಡಿಯೋವೊಂದು ಹೊರಬಿದ್ದಿದೆ. ಈ ಆಡಿಯೋ ಪೊಲೀಸರತ್ತಲೇ ಅನೇಕ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.
ಹುಬ್ಬಳ್ಳಿ ತಾಲೂಕಿನ ಗಂಗಿನಾಳ ನಿವಾಸಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ದೀಪಕ್ ಪಟದಾರಿ, ರಾಜಕೀಯ ನಾಯಕರ ಜೊತೆ ಸಂಪರ್ಕ ಹೊಂದಿದ್ರು. ಆದ್ರೆ, ಕೆಲ ಹಂತಕರು ಕಳೆದ ಜುಲೈನಲ್ಲಿ ದೀಪಕ್ನನ್ನ ಭೀಕರವಾಗಿ ಹತ್ಯೆ ಮಾಡಿದ್ರು. ರಾತ್ರಿ ಹೊತ್ತಲ್ಲಿ ಆಯುಧದಿಂದ ಕೊಚ್ಚಿಕೊಂದಿದ್ರು. ಇದೀಗ, ದೀಪಕ್ ಸಾವಿನ ಹತ್ಯೆ ಹತ್ತಾರು ಸಂಶಯಗಳು ಮೂಡಿವೆ. ಅದ್ರಲ್ಲೂ, ಪೊಲೀಸರತ್ತಲೇ ನೇರಾನೇರಾ ಆರೋಪ ಕೇಳಿ ಬಂದಿದೆ.
ನ್ಯೂಟ್ರಲ್ ಆಗಿ ಇದ್ಬಿಡು. ಸೈಲೆಂಟಾಗಿ ಇದ್ದಷ್ಟು ನಿನಗೂ ಒಳ್ಳೆಯದು ಅಂತ ವಾರ್ನಿಂಗ್ ಕೊಟ್ಟ ಆಡಿಯೋ ಬಿಡುಗಡೆಯಾಗಿದೆ. ಹತ್ಯೆಯಾಗಿರುವ ದೀಪಕ್ಗೆ ಕರೆ ಮಾಡಿ ಫೋನ್ಕಾಲ್ನಲ್ಲೇ ವಾರ್ನಿಂಗ್ ಕೊಟ್ಟಿದ್ದಾರೆ ಎಂಬಲಾದ ಆಡಿಯೋ ಹೊರ ಬಿದ್ದಿದೆ. ಆದ್ರೆ, ದೀಪಕ್ಗೆ ಹೀಗೆ ಧಮ್ಕಿ ಹಾಕಿದ್ದು ಪೊಲೀಸರು ಅಂತ ಆರೋಪ ಕೇಳಿ ಬಂದಿದೆ. ದೀಪಕ್ ಹತ್ಯೆಗೂ 15 ದಿನ ಮುಂಚೆ ಹಳೇ ಹುಬ್ಬಳ್ಳಿ ಠಾಣೆಯ ಎಎಸ್ಐ ಪರಶುರಾಮ್ ಕಾಳೆ ದೀಪಕ್ಗೆ ಕರೆ ಮಾಡಿ, ಸೈಲೆಂಟಾಗಿರುವ ಅಂತ ಎಚ್ಚರಿಕೆ ಕೊಟ್ಟಿದ್ರಂತೆ. ವಾಟ್ಸಾಪ್ನಲ್ಲೂ ವಾರ್ನಿಂಗ್ ಮಾಡಿದ್ದಾರೆ ಅಂತ ದೀಪಕ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ನಾಯಿಯನ್ನು ಮನೆಯಲ್ಲಿಡುವ ವಿಚಾರಕ್ಕೆ ಜಗಳ: ತಾಯಿ-ಮಗಳು ನೇಣಿಗೆ ಶರಣು
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪರಶುರಾಮ್ ಕಾಳೆ ಹಾಗೂ ನಾಗರಾಜ್ ಕೆಂಚಮ್ಮನ್ನವರ ಎಂಬ ಸಿಬ್ಬಂದಿ ಮೇಲೆ, ದೀಪಕ್ ಕುಟುಂಬಸ್ಥರು ಹತ್ತಾರು ಆರೋಪ ಮಾಡಿದ್ದಾರೆ. ರಾಜಕೀಯವಾಗಿ ದೀಪಕ್ ಬೆಳೆಯುತ್ತಿದ್ದ ಅಂತಲೇ ಅವರ ಹತ್ಯೆ ನಡೆದಿದೆ. ಆದ್ರೆ, ಪೊಲೀಸ್ ಅಧಿಕಾರಿಗಳು ಆರೋಪಿಗಳ ಬೆನ್ನಲುಬಾಗಿ ನಿಂತಿದ್ದು, ಸಾಕ್ಷಿ ನಾಶ ಮಾಡಿದ್ದಾರೆ ಅಂತ, ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇನ್ನು, ಪತಿಯ ಹತ್ಯೆಯಿಂದ ಕಂಗಾಲಾಗಿರುವ ಗರ್ಭಿಣಿ ಪತ್ನಿ, ನ್ಯಾಯಕ್ಕಾಗಿ ಕಣ್ಣೀರು ಹಾಕ್ತೀದಾರೆ.
ಒಟ್ಟಾರೆ ಗ್ರಾಪಂ ಸದಸ್ಯನ ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಆಡಿಯೋ ಹಾಗೂ ವಾಟ್ಸಪ್ ಮೆಸೆಜ್ ನೋಡಿದ್ರೆ ಪೊಲೀಸರ ಕೈವಾಡದ ಶಂಕೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳು ಇದ್ರತ್ತ ಯಾವ ರೀತಿ ಗಮನ ವಹಿಸ್ತಾರೆ ನೋಡ್ಬೆಕು.
ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:19 am, Thu, 15 September 22