AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯನ್ನು ಮನೆಯಲ್ಲಿಡುವ ವಿಚಾರಕ್ಕೆ ಜಗಳ: ತಾಯಿ-ಮಗಳು ನೇಣಿಗೆ ಶರಣು

ನಾಯಿ ಮನೆಯಲ್ಲಿ ಸಾಕುವ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳವಾಡಿ, ಅವರು ಒಪ್ಪದೇ ಇದ್ದಾಗ ಮನೆನೊಂದು ತಾಯಿ, ಮಗಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಯಿಯನ್ನು ಮನೆಯಲ್ಲಿಡುವ ವಿಚಾರಕ್ಕೆ ಜಗಳ: ತಾಯಿ-ಮಗಳು ನೇಣಿಗೆ ಶರಣು
ಸಾಂಧರ್ಬಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Sep 15, 2022 | 6:51 AM

Share

ಬೆಂಗಳೂರು: ನಾಯಿ(Dog) ವಿಚಾರಕ್ಕೆ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳವಾಗಿದ್ದು ಗಲಾಟೆ ಬಳಿಕ ದಿವ್ಯಾ ಎಂಬ ಮಹಿಳೆ ಮತ್ತು ಆಕೆಯ ಮಗಳು ನೇಣುಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಳೆದ 3 ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಿವ್ಯಾ, ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ರೆ ದಿವ್ಯಾ ಅತ್ತೆ ಹಾಗೂ ಮಾವ ಮನೆಯಲ್ಲಿ ನಾಯಿ ಸಾಕಿದ್ದರು. ನಾಯಿ ಇದ್ರೆ ಕಾಯಿಲೆ ವಾಸಿಯಾಗಲ್ಲ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಾಯಿಯನ್ನ ಯಾರಿಗಾದ್ರು ನೀಡಿ ಎಂದು ದಿವ್ಯಾ ಹಠ ಮಾಡಿದ್ದಾರೆ. ದಿವ್ಯಾರ ಮಾತಿಗೆ ಅತ್ತೆ ಮಾವ ಒಪ್ಪಿಲ್ಲ. ನಾಯಿಯನ್ನು ಮನೆಯಿಂದ ಕಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾ ಗಲಾಟೆ ಮಾಡಿಕೊಂಡು ಇದರಿಂದ ಮನನೊಂದು ದಿವ್ಯಾ ಹಾಗೂ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವಪತ್ತೆ

ಮೈಸೂರು: ಹುಣಸೂರು ತಾಲೂಕು ಕಳ್ಳಿಕೊಪ್ಲು ಗ್ರಾಮದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವಪತ್ತೆಯಾಗಿದೆ. ಅಕ್ಕಯ್ಯಮ್ಮ ಎಂಬುವವರ ಜಮೀನಿನ ಬೇವಿನ ಮರದಲ್ಲಿ ಶವ ಸಿಕ್ಕಿದ್ದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದು ಮೃತರಿಗೆ ಸುಮಾರು 55 ರಿಂದ 60 ವರ್ಷ ವಯಸ್ಸಾಗಿದೆ ಎನ್ನಲಾಗಿದೆ. ವ್ಯಕ್ತಿ ಕಪ್ಪುಬಣ್ಣದ ಸ್ವೆಟರ್, ತುಂಬುತೋಳಿನ ಆಕಾಶ ನೀಲಿ ಬಣ್ಣದ ಷರ್ಟ್, ನೀಲಿ ಬಣ್ಣದ ಲುಂಗಿ ಧರಿಸಿದ್ದಾರೆ.

ರೈಲ್ವೇ ಕಂಬಿಯ ಆನೆಯ ತಡೆಗೋಡೆ ಕುಸಿತ

ಮೈಸೂರು: ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ನಾಗರಹೊಳೆ ಕೋಣನಹೊಸಹಳ್ಳಿ ಬಳಿ ರೈಲ್ವೇ ಕಂಬಿಯ ಆನೆಯ ತಡೆಗೋಡೆ ಕುಸಿದಿದೆ. ನೀರಿನ ಪ್ರಮಾಣ ಹೆಚ್ಚಾದರೆ ಮತ್ತಷ್ಟು ಕುಸಿಯುವ ಭೀತಿ ಇದೆ. ಲಕ್ಷ್ಮಣ ತೀರ್ಥ ನದಿ ಅಂಚಿನಲ್ಲಿ ನಿರ್ಮಿಸಿದ್ದ ಸುಮಾರು 15 ಮೀಟರ್‌ನಷ್ಟು ಉದ್ದದ ರೈಲ್ವೆ ಕಂಬಿ ತಡೆಗೋಡೆ ಕುಸಿದಿದೆ. ಕೊಡಗು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸತತ ಮಳೆಯಾಗುತ್ತಿದ್ದು ತಡೆಗೋಡೆ ಕುಸಿದು ಬಿದ್ದಿದ್ದರಿಂದ ಕಾಡಾನೆಗಳು ಈ ಭಾಗದಿಂದ ಸರಾಗವಾಗಿ ಹೊರಬರುವ ಸಾಧ್ಯತೆ ಇದೆ. ಬೆಳೆಗಳನ್ನು ನಾಶಪಡಿಸುವ ಆತಂಕದಲ್ಲಿ ರೈತರಿದ್ದು ಶೀಘ್ರ ತಡೆಗೋಡೆ ಮರು ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:51 am, Thu, 15 September 22