ಧಾರವಾಡ, ಮೇ.23: ನೇಹಾ ಮತ್ತು ಅಂಜಲಿ ಹತ್ಯೆಯಂತಹ ಎರಡು ದೊಡ್ಡ ಪ್ರಕರಣಗಳು ನಡೆದರೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಹಿಳೆಯರಿಗೆ ಸುರಕ್ಷತೆಯೇ (Women Safety) ಇಲ್ಲದಂತಾಗಿದೆ. ಕರ್ನಾಟಕ ವಿವಿ ಕ್ಯಾಂಪಸ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಏಕೆಂದರೆ ಬೈಕ್ನಲ್ಲಿ ಬಂದು ವಿದ್ಯಾರ್ಥಿನಿ (Student) ಮೇಲೆ ದುಷ್ಕರ್ಮಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕ್ಯಾಂಪಸ್ನಲ್ಲಿ ಓಡಾಡ್ತಿದ್ದ ವಿದ್ಯಾರ್ಥಿನಿಯ ಮೇಲೆ ಬೈಕ್ನಲ್ಲಿ ಬಂದು ಭುಜಕ್ಕೆ ಹೊಡೆದು ಕಿರಾತಕ ಎಸ್ಕೇಪ್ ಆಗಿದ್ದಾನೆ. ಆದರೆ ಇದುವರೆಗೂ ಕರ್ನಾಟಕ ವಿವಿ ಯಾವುದೇ ಕ್ರಮ ಕೈಗೊಂಡಿಲ್ಲ.
ಮೇ 14ರಂದು ಕವಿವಿ ಅಮರ ಜವಾನ್ ಸರ್ಕಲ್ ನಲ್ಲಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಾಗ ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿ ವಿದ್ಯಾರ್ಥಿನಿ ಭುಜಕ್ಕೆ ಹೊಡೆದು ಮುಂದೆ ಹೋಗಿ ನಿಂತಿದ್ದಾನೆ. ಇದೇ ಯುವಕನಿಂದ ಕ್ಯಾಂಪಸ್ ನಲ್ಲಿ ಸರಗಳ್ಳತನಕ್ಕೂ ಯತ್ನ ನಡೆದಿತ್ತು. ಕವಿವಿ ಕ್ಯಾಂಪಸ್ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಆರೋಪಿ ಗುರುತು ಹಿಡಿಯೋದೆ ಕಷ್ಟವಾಗಿದೆ. ಸದ್ಯ ಕವಿವಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ವಿದ್ಯಾರ್ಥಿನಿಯರೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆ ನಡೆದು ಒಂದು ವಾರವಾದರೂ ಕವಿವಿ ಆಡಳಿತ ಮಂಡಲಿ ಸುಮ್ಮನಿದೆ.
ಈ ಘಟನೆ ಎಬಿವಿಪಿ ಗಮನಕ್ಕೆ ಬಂದಿದ್ದು ವಿದ್ಯಾರ್ಥಿನಿಗೆ ಆತ್ಮಸ್ಥೈರ್ಯ ತುಂಬಿ ದೂರು ದಾಖಲಿಸುವಂತೆ ಮಾಡಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ಕಾಲೇಜು ಆಡಳಿತ ಮಂಡಳಿ ಯತ್ನಿಸುತ್ತಿದೆ ಎಂದು ಎಬಿವಿಪಿ ಕವಿವಿ ಮೇಲೆ ಆರೋಪ ಮಾಡಿದೆ. ಮೇ 14ರಂದು ಘಟನೆ ನಡೆದರೂ ಮೇ 21ಕ್ಕೆ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್ ಸಿಬಿಐಗೆ ಕೊಡಲ್ಲ: ಗೃಹ ಸಚಿವ ಪರಮೇಶ್ವರ್
ನೇಹಾ ಮಾದರಿಯಲ್ಲಿ ನಡೆದ ಅಂಜಲಿ ಹತ್ಯೆ ಕೇಸ್ ತನಿಖೆ ಚುರುಕುಗೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಸರ್ಕಾರ ಅಂಜಲಿ ಕೊಲೆ ಕೇಸ್ ಸಿಐಡಿಗೆ ಹಸ್ತಾಂತರ ಮಾಡಿತ್ತು. ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ ವಿಚಾರಣೆ ಆರಂಭಿಸಿದೆ. ಒಟ್ಟು 9 ಜನರ ಸಿಐಡಿ ಅಧಿಕಾರಿಗಳ ಟೀಮ್ ವಿಚಾರಣೆ ಆರಂಭಿಸಿದ್ದು, ವಿಚಾರಣೆಯಲ್ಲಿ ಅಂಜಲಿ ಹಂತಕ ಕೆಲ ಸತ್ಯ ಬಾಯ್ಬಿಟ್ಟಿದ್ದಾನೆ.
ಅಂಜಲಿ ಹತ್ಯೆಗೆ 1000 ಹಣವೇ ಕಾರಣ ಅಂತ ವಿಶ್ವ ಒಪ್ಪಿಕೊಂಡಿದ್ದಾನೆ.. ಮೈಸೂರಿಗೆ ಬಾ ಅಂತ ಅಂಜಲಿಯನ್ನ ಗಿರೀಶ್ ಕರೆದಿದ್ದು, ಇದಕ್ಕೆ ಒಪ್ಪಿರಲಿಲ್ವಂತೆ. ಅಲ್ಲದೆ, ಹತ್ಯೆಗೂ ಹಿಂದಿನ ದಿನ ಅಂಜಲಿಗೆ ವಿಶ್ವ, 1000 ರೂಪಾಯಿ ಫೋನ್ ಪೇ ಮಾಡಿದ್ನಂತೆ. ಹಣ ಪಡೆದ ಬಳಿಕ ಆತನ ನಂಬರ್ ಅನ್ನ ಅಂಜಲಿ ಬ್ಲಾಕ್ ಮಾಡಿದ್ಳಂತೆ. ಇದ್ರಿಂದ ಕೋಪಗೊಂಡ ಕ್ರಿಮಿ, ಮೈಸೂರಿಗೆ ಹುಬ್ಬಳ್ಳಿಗೆ ಬಂದು ಅಂಜಲಿ ಹತ್ಯೆಗೈದೆ ಅಂತೇಳಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:11 pm, Thu, 23 May 24