AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಜಲಿ ಹತ್ಯೆ: ಅಕ್ಕನ ಕೊಲೆ ಬಗ್ಗೆ ಸಿಐಡಿ ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಸಹೋದರಿ ಯಶೋಧಾ

ಕಳೆದ ಎರಡು ದಿನಗಳ ಹಿಂದೆ ಸರ್ಕಾರ ಅಂಜಲಿ ಕೊಲೆ ಕೇಸ್ ಸಿಐಡಿಗೆ ಹಸ್ತಾಂತರ ಮಾಡಿದ ಬೆನ್ನೆಲ್ಲೇ ಕೇಸ್ ತನಿಖೆ ಚುರುಕುಗೊಂಡಿದೆ. ನಿನ್ನೆ ಸಂಜೆ ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ ಇಂದು ವಿಚಾರಣೆ ಆರಂಭಿಸಿದೆ. ಅಂಜಲಿ ಅಂಬಿಗೇರ ಮನೆಗೆ ಮೂವರು ಸಿಐಡಿ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅಂಜಲಿ ಸಹೋದರಿ, ಸಿಐಡಿ ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ.

ಅಂಜಲಿ ಹತ್ಯೆ: ಅಕ್ಕನ ಕೊಲೆ ಬಗ್ಗೆ ಸಿಐಡಿ ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಸಹೋದರಿ ಯಶೋಧಾ
ಅಂಜಲಿ ಹತ್ಯೆ: ಅಕ್ಕನ ಕೊಲೆ ಬಗ್ಗೆ ಸಿಐಡಿ ಮುಂದೆ ಸ್ಫೋಟ ವಿಚಾರ ಬಿಚ್ಚಿಟ್ಟ ಸಹೋದರಿ ಯಶೋಧಾ
ಶಿವಕುಮಾರ್ ಪತ್ತಾರ್
| Edited By: |

Updated on: May 23, 2024 | 4:40 PM

Share

ಹುಬ್ಬಳ್ಳಿ, ಮೇ 23: ನಗರದಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ (Anjali Ambigera Murder Case) ತನಿಖೆಯನ್ನು ಸಿಐಡಿ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಆರೋಪಿ ಗಿರೀಶ್​ ವಿಚಾರಣೆಯನ್ನು ಸಿಐಡಿ (CID) ಟೀಂ ಮುಂದುವರಿಸಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಿಂದ ಕರೆತಂದು ವಿಚಾರಣೆ ಮಾಡಿದ್ದಾರೆ. ಕೊಲೆಯಾದ ಯುವತಿ ಅಂಜಲಿ ಮನೆ ಬಳಿ ಕೆಲವರ ವಿಚಾರಣೆ ಮಾಡಿದ್ದಾರೆ. ಜೊತೆಗೆ ಅಂಜಲಿ ಅಂಬಿಗೇರ ಮನೆಗೆ ಮೂವರು ಸಿಐಡಿ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ.

ಅಧಿಕಾರಿಗಳ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಂಜಲಿ ಅಂಬಿಗೇರ ಸಹೋದರಿ ಯಶೋಧಾ, ಮೂವರು ಸಿಐಡಿ ಅಧಿಕಾರಿಗಳು ಮನೆಗೆ ಬಂದು ವಿಚಾರಣೆ ಮಾಡಿದರು. ಕೊಲೆ ಹೇಗಾಯ್ತು, ಚಾಕು ಎಲ್ಲಿದೆ ಎಂದು ಮಾಹಿತಿ ಕೇಳಿದರು. ಸಿಐಡಿ ಅಧಿಕಾರಿಗಳಿಗೆ ಎಲ್ಲಾ ಮಾಹಿತಿ ನೀಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂಜಲಿ ಹತ್ಯೆ ಪ್ರಕರಣ; ಆರೋಪಿ ವಿಶ್ವ 8 ದಿನ ಸಿಐಡಿ ವಶಕ್ಕೆ ನೀಡಿದ ಕೋರ್ಟ್​

ವಿಶ್ವನನ್ನು ಎನ್​ಕೌಂಟರ್ ಮಾಡಬೇಕು ಇಲ್ಲ ಗಲ್ಲುಶಿಕ್ಷೆ ಆಗಲಿ. ಆರೋಪಿ ಗಿರೀಶ್​ನ ಹಿಂದೆ ಯಾರೋ ಇದ್ದಾರೆ. ಅಂಜಲಿ ಮದುವೆ ಆಗುತ್ತೇನೆ ಅಂದಿದ್ದ, ನಾವು ಬೇಡ ಎಂದಿದ್ದೆವು. ಆ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ಸಿಐಡಿಗೆ ಹೇಳಿದ್ದೇವೆ. ಸುಳ್ಳು ಹೇಳಬೇಡಿ ಎಂದರು, ನಾವು ಸುಳ್ಳು ಹೇಳಲ್ಲ ಎಂದು ಹೇಳಿದ್ದಾರೆ.

ಹೊಸ ಬಾಂಬ್​ ಹಾಕಿದ ಅಂಜಲಿ ಸಹೋದರಿ ಯಶೋಧಾ

ಈ ಹಿಂದೆ ನಮ್ಮ ಅಕ್ಕ 17 ವರ್ಷ ಇದ್ದಾಗ ವಿಜಯ್​ ಎನ್ನುವ ಯುವಕ ಲವ್ ಮಾಡುತ್ತಿದ್ದ. ಅದು‌ ಕಂಪ್ಲೇಟ್ ಅಗಿತ್ತು. ನಾವು ಹೊಡೆದು ಬುದ್ದಿ ಹೇಳಿದ್ದೇವು. ಅವಾಗ ಅಕ್ಕ ಬಿಟ್ಟಿದ್ದರು‌. ಆದರೆ ಇದೀಗ ನಮ್ಮಕ್ಕನ‌ ಕೊಲೆಯಾಗಿದೆ. ಕೊಲೆಯಾದ ದಿನದಿಂದ ಅವನು ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ: ಸಿಐಡಿ ಅಧಿಕಾರಿಗಳ ಬಳಿ ಹತ್ಯೆ ರಹಸ್ಯ ಬಾಯ್ಬಿಟ್ಟ ಹಂತಕ ವಿಶ್ವ

ಈರಣ್ಣ ಅಲಿಯಾಸ್ ವಿಜಯ್ ಮೊದಲು ದಿನ ಇಲ್ಲೇ ಓಡುತ್ತಿದ್ದ. ಆದರೆ ಇದೀಗ ವಿಜಯ್ ನಾಪತ್ತೆಯಾಗಿದ್ದಾನೆ. ಅವನನ್ನು ಕೂಡ ಅರೆಸ್ಟ್ ಮಾಡಬೇಕು. ನಮಗೆ ಆತನ ಮೇಲೆ ಅನುಮಾನ ಇದೆ ಎಂದು ಅಂಜಲಿ ಸಹೋದರಿ ಯಶೋಧಾ ಹೊಸ ಬಾಂಬ್ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.