ಪೋನ್ ಟ್ಯಾಪಿಂಗ್, ಸಿಡಿ ಎಲ್ಲವನ್ನೂ ಬಿಜೆಪಿ ನಾಯಕರೇ ಮಾಡಿಸಿ ಬೇರೆಯವರ ಮೇಲೆ ಆರೋಪ ಹೊರಿಸುತ್ತಾರೆ: ಈಶ್ವರ್ ಖಂಡ್ರೆ
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ತನಿಖೆಗೆ ಒಪ್ಪಿಸಿಯಾಗಿದೆ, ಇನ್ನು ಯಾರದ್ದಾದರೂ ಪರ ವಹಿಸಿಕೊಂಡು ಮಾತಾಡುವ ಅಗತ್ಯವೇನಿದೆ, ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಜಾಯಮಾನ ಬಿಜೆಪಿ ನಾಯಕರದ್ದು, ಇವರ ಸುಳ್ಳುಗಳಿಂದ ಜನ ಸಹ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ, ಜೂನ್ 4 ರಂದು ಅವರಿಗದು ಗೊತ್ತಾಗಲಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು
ಬೆಂಗಳೂರು: ಸಾಮಾನ್ಯವಾಗಿ ಅರಣ್ಯಖಾತೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಆಯ್ದ ಸಂದರ್ಭಗಳಲ್ಲಿ ಮಾತ್ರ ಮಾಧ್ಯಮ ಗೋಷ್ಠಿ ನಡೆಸುತ್ತಾರೆ. ಇವತ್ತು ನಗರದ ತಮ್ಮ ಕಚೇರಿಯಲ್ಲಿ ಪರ್ತಕರ್ತರೊಂದಿಗೆ ಮಾತಾಡಿದ ಅವರು ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ (phone tapping) ಆರೋಪ ಮಾಡುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು (R Ashoka) ತರಾಟೆಗೆ ತೆಗೆದುಕೊಂಡರು. ಬೇಕಾಬಿಟ್ಟಿ ಆರೋಪಗಳನ್ನು ಮಾಡೋದು ಇವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಬಿಜೆಪಿಯವರಿಗಂತೂ ಮಾನ ಮರ್ಯಾದೆ ಯಾವುದೂ ಇಲ್ಲ, ಫೋನ್ ಟ್ಯಾಪ್ ಮಾಡಿಸೋದು ಅವರ ಚಾಳಿ, ಸಿಡಿಗಳನ್ನು ಸಹ ಅವರೇ ಮಾಡಿಸುತ್ತಾರೆ, ತನಿಖೆಯನ್ನೂ ಮಾಡುತ್ತಾರೆ ಮತ್ತು ಕೊನೆಗೆ ತೀರ್ಪನ್ನು ಸಹ ಅವರೇ ನೀಡುತ್ತಾರೆ ಎಂದು ಖಂಡ್ರೆ ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ತನಿಖೆಗೆ ಒಪ್ಪಿಸಿಯಾಗಿದೆ, ಇನ್ನು ಯಾರದ್ದಾದರೂ ಪರ ವಹಿಸಿಕೊಂಡು ಮಾತಾಡುವ ಅಗತ್ಯವೇನಿದೆ, ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಜಾಯಮಾನ ಬಿಜೆಪಿ ನಾಯಕರದ್ದು, ಇವರ ಸುಳ್ಳುಗಳಿಂದ ಜನ ಸಹ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ, ಜೂನ್ 4 ರಂದು ಅವರಿಗದು ಗೊತ್ತಾಗಲಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ; ಸಚಿವ ಈಶ್ವರ್ ಖಂಡ್ರೆ ಸಮರ್ಥನೆ ಹೀಗಿದೆ