ನೀತಿಸಂಹಿತೆ ಮಧ್ಯೆ ಸರಕಾರಿ ಐಬಿಯಲ್ಲೇ ಅಧಿಕಾರಿಗಳಿಂದ ಎಣ್ಣೆ ಪಾರ್ಟಿ; ವಿಡಿಯೋ ವೈರಲ್
ಜಮಖಂಡಿ ವಿಭಾಗದ ಜಿಲ್ಲಾ ಪಂಚಾಯತಿ ಇಂಜಿನಿಯರ್ಗಳು ಕಚೇರಿಗೆ ಚಕ್ಕರ್ ಹೊಡೆದು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಹಾಡಹಗಲೇ ಮದ್ಯಸೇವಿಸಿ ಮೋಜು ಮಸ್ತಿ ಮಾಡಿದ ಘಟನೆ ನಿನ್ನೆ(ಮೇ.22) ಮದ್ಯಾಹ್ನ 3 ಗಂಟೆಯ ಸುಮಾರಿಗೆ ಜಮಖಂಡಿ ಸರಕಾರಿ ಐಬಿ ರಮಾ ನಿವಾಸದಲ್ಲಿ ನಡೆದಿದೆ.
ಬಾಗಲಕೋಟೆ, ಮೇ.23: ನೀತಿಸಂಹಿತೆ ಮಧ್ಯೆ ಜಮಖಂಡಿ ಸರಕಾರಿ ಐಬಿ(Jamkhandi Government IB)ಯಲ್ಲೇ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿದ ಘಟನೆ ನಡೆದಿದೆ. ಜಮಖಂಡಿ ವಿಭಾಗದ ಜಿಲ್ಲಾ ಪಂಚಾಯತಿ ಇಂಜಿನಿಯರ್ಗಳು ಕಚೇರಿಗೆ ಚಕ್ಕರ್ ಹೊಡೆದು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಹಾಡಹಗಲೇ ಮದ್ಯಸೇವಿಸಿ ಮೋಜು ಮಸ್ತಿ ಮಾಡಿದ್ದಾರೆ. ನಿನ್ನೆ(ಮೇ.22) ಮದ್ಯಾಹ್ನ 3 ಗಂಟೆಯ ಸುಮಾರಿಗೆ ಸರಕಾರಿ ಐಬಿ ರಮಾ ನಿವಾಸದಲ್ಲಿ ಜಿಲ್ಲಾ ಪಂಚಾಯತಿ ವಿಭಾಗ ಜಮಖಂಡಿ ಎಇಇ ಎಮ್ಎಸ್ ನಾಯಕ, ಇಂಜಿನಿಯರ್ಗಳಾದ ರಾಮಪ್ಪ ರಾಠೋಡ್, ಜಗದೀಶ್ ನಾಡಗೌಡ, ಗಜಾನನ ಪಾಟೀಲ್, ಶ್ರೀಶೈಲ್ ಹೂಗಾರ ಹಾಗೂ ಗುತ್ತಿಗೆದಾರರಾದ ಸಾಗರ, ಶೀತಲ ಹರಿಜನ ಸೇರಿದಂತೆ ಆರು ಜನ ಗುತ್ತಿಗೆದಾರರು ಸೇರಿಕೊಂಡು ಮದ್ಯಸೇವನೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos