ವಿಜಯಪುರ: ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲೇ ಸ್ನೇಹಿತನ ಜೊತೆ ಜೆಇ ಎಣ್ಣೆ ಪಾರ್ಟಿ, ಸ್ಥಳೀಯರ ಆಕ್ರೋಶ

ನಿನ್ನೆ ರಾತ್ರಿ ಹೆಸ್ಕಾಂ ಜೆಇ ಗೊಲ್ಲಾಳಪ್ಪ ಪಾಟೀಲ ಅವರು ಹಿರೇಮಸಳ್ಳಿ ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲೇ ಸ್ನೇಹಿತನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕಚೇರಿ ಆವರಣದಲ್ಲಿ ಕುಳಿತು ಮದ್ಯ ಸೇವಿಸಿದ್ದು ಜೆಇ ನಡೆಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ವಿಜಯಪುರ: ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲೇ ಸ್ನೇಹಿತನ ಜೊತೆ ಜೆಇ ಎಣ್ಣೆ ಪಾರ್ಟಿ, ಸ್ಥಳೀಯರ ಆಕ್ರೋಶ
ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲೇ ಜೆಇ ಎಣ್ಣೆ ಪಾರ್ಟಿ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಆಯೇಷಾ ಬಾನು

Updated on: May 20, 2024 | 12:13 PM

ವಿಜಯಪುರ, ಮೇ.20: ಸರ್ಕಾರಿ ಅಧಿಕಾರಿಗಳೇ ತಮ್ಮ ಕಛೇರಿ ಆವರಣದಲ್ಲಿ ಸ್ನೇಹಿತರಿಗೆ ಎಣ್ಣೆ ಪಾರ್ಟಿ (Drinks Party) ಮಾಡಿಸಿದ ಘಟನೆ ನಡೆದಿದೆ. ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳ್ಳಿ ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲೇ ಸ್ನೇಹಿತನೊಂದಿಗೆ ಹೆಸ್ಕಾಂ ಅಧಿಕಾರಿ ಎಣ್ಣೆ ಪಾರ್ಟಿ ಮಾಡಿದ್ದಾರೆ.

ಹೆಸ್ಕಾಂ ಜೆಇ ಗೊಲ್ಲಾಳಪ್ಪ ಪಾಟೀಲ ಅವರು ತಮ್ಮ ಸ್ನೇಹಿತನ ಜೊತೆ ನಿನ್ನೆ ರಾತ್ರಿ ಮದ್ಯ ಸೇವನೆ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಕಚೇರಿಯ ಆವರಣದಲ್ಲೇ ಮದ್ಯ ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ. ಹೆಸ್ಕಾಂ ಜೆಇ ಗೊಲ್ಲಾಳಪ್ಪ ಪಾಟೀಲ ಅವರ ನಡೆಯ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದ್ದು ತಾನು ಏನೂ ತಪ್ಪು ಮಾಡಿಲ್ಲ ಎಂದು ಜೆಇ ಸಾಹೇಬ್ರು ವಾದ ಮಾಡಿದ್ದಾರೆ. ನಮ್ಮ ಕಚೇರಿ ಆವರಣದಲ್ಲಿ ಮದ್ಯ ಸೇವನೆಗೆ ಅವಕಾಶವಿದೆ ಎಂದಿದ್ದಾರೆ. ಇಂತ ಆಧಿಕಾರಿ ವಿರುದ್ದ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.

ದೇವರ ಹಸುಗೆ ಮೆರವಣಿಗೆ ಮಾಡಿ ಅಂತ್ಯಕ್ರಿಯೆ

ಅನಾರೋಗ್ಯದಿಂದ ಮೃತಪಟ್ಟ ದೇವರ ಹಸುವನ್ನು ಭವ್ಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂದೆಯೇ ಅಂತ್ಯಕ್ರಿಯೆ ಮಾಡಿರುವ ಅಪರೂಪದ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ನಡೆದಿದೆ. ಗ್ರಾಮದ ಆರಾಧ್ಯ ದೈವ ಶ್ರೀ ರೇವಣಸಿದ್ಧೇಶ್ವರ ದೇವರಿಗಾಗಿ ಕಳೆದ 15 ವರ್ಷಗಳ ಹಿಂದೆ ಹಸುವನ್ನು ಬಿಡಲಾಗಿತ್ತು. ಯಾವಾಗಲೂ ಗುಡಿಯ ಮುಂದೆಯೇ ಇರುತ್ತಿದ್ದ ಹಸುವಿಗೆ ನಿತ್ಯ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರು ಗೋಮಾತೆ ಎಂದು ಭಕ್ತಿಯಿಂದ ಪೂಜಿಸುತ್ತಿದ್ದರು. ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ ಗ್ರಾಮಸ್ಥರೆಲ್ಲ ಸೇರಿ ಟ್ರ್ಯಾಕ್ಟರ್ ನಲ್ಲಿ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಗ್ರಾಮದ ಹಳೆಯ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಗ್ರಾಮಸ್ಥರ ದೈವಿಭಕ್ತಿಗೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕ ಮಹಾಂತೇಶ ಕೌಜಲಗಿ ಕಾರು ಅಪಘಾತ

ಕುಡಿಯುವ ನೀರಿಗಾಗಿ ಹಾಹಾಕಾರ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಗ್ರಾಮದ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ವಾರ್ಡ್‌ ನಂಬರ್‌ 6 ರಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ, ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸ್ವಲ್ಪ ವ್ಯತ್ಯಯ ಆಗಿದೆ ಎಂದು ಹೇಳಿ ಹಾರಿಕೆ ಉತ್ತರ ನೀಡುತ್ತಾರೆ. ಇಂಡಿ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ಸರಬರಾಜು ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನಾವು ತಡವಲಗಾ ಗ್ರಾಮಕ್ಕೆ ಗುಗಿಹಾಳ ಕೆರೆಯಿಂದ ದಿನಕ್ಕೆ ಹತ್ತು ತಾಸುಗಳಲ್ಲಿ ಸುಮಾರು ಐದು ಲಕ್ಷ ಲೀಟರ್ ನೀರು ಸರಬರಾಜು ಮಾಡುತ್ತೇವೆ ಎನ್ನುತ್ತಾರೆ. ಆದರೆ ಗ್ರಾಮದಲ್ಲಿ ಕುಡಿಯೋ ನೀರಿನ ಸರಬರಾಜು ಸರಿಯಾಗಿ ಆಗುತ್ತಿಲ್ಲಾ ಎಂದು ಜನರು ಆಕ್ರೋಶವನ್ನು ಹೊರ ಹಾಕಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕೂಡಲೇ ನೀರು ಸರಬರಾಜು ಮಾಡಿಸಬೇಕು. ಇಲ್ಲವಾದರೆ ಜನರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ