ಬೀದರ್​: ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ; ದರ ಕುಸಿತ, ಕಾಡುಹಂದಿ ಕಾಟದಿಂದ ರೈತ ಕಂಗಾಲು

ಮೂರು ತಿಂಗಳುಗಳ ಕಾಲ ಬೀದರ್​ ಜಿಲ್ಲೆಯ ಆ ರೈತ ಕಲ್ಲಂಗಡಿ ಬೆಳೆಯನ್ನ ಚೆನ್ನಾಗಿ ನೋಡಿಕೊಂಡಿದ್ದ. ಕಾಲ ಕಾಲಕ್ಕೆ ಔಷದೋಪಚಾರ, ಗೊಬ್ಬರ ಹಾಕಿ ಬೆಳೆ ಬೆಳೆಸಿದ್ದರು. ಆದರೆ, ಇನ್ನೇನು ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಕಾಡು ಪ್ರಾಣಿಗಳ ಕಾಟದ ಜೊತೆಗೆ ದರಕುಸಿತವಾಗಿದೆ. ಇದು ಸಹಜವಾಗಿಯೇ ಆ ರೈತನನ್ನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.

ಬೀದರ್​: ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ; ದರ ಕುಸಿತ, ಕಾಡುಹಂದಿ ಕಾಟದಿಂದ ರೈತ ಕಂಗಾಲು
ಕಲ್ಲಂಗಡಿ ಬೆಳೆಗಾರ
Follow us
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 23, 2024 | 3:43 PM

ಬೀದರ್​, ಮೇ.23: ಈ ವರ್ಷ ಬೀದರ್(Bidar) ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಲ್ಲಂಗಡಿ(Watermelon)ಯನ್ನ ರೈತರು ಬೆಳೆಸಿದ್ದರು. ಮಾರ್ಚ್, ಎಪ್ರಿಲ್ ಮತ್ತು ಮೇ ಎರಡನೇ ವಾರದ ತನಕ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿತ್ತು. ಆ ಸಮಯದಲ್ಲಿ ಕಟಾವಿಗೆ ಬಂದಿದ್ದ ಕಲ್ಲಂಗಡಿಯಿಂದ ರೈತರು ಉತ್ತಮವಾದ ಆದಾಯ ಗಳಿಸಿಕೊಂಡಿದ್ದರು. ಆದರೆ, ಈಗ ಕಲ್ಲಂಗಡಿ ಬೆಳೆಸಿದ ರೈತರು, ದರ ಕುಸಿತ ಹಾಗೂ ಕಾಡುಹಂದಿ ಕಾಟದಿಂದ ಆರ್ಥಿಕ ಸಂಕಷ್ಟಕ್ಕೆ  ಸಿಲುಕಿದ್ದಾರೆ.

ದರ ಕುಸಿತಕ್ಕೆ ಕಲ್ಲಂಗಡಿ ಬೆಳೆದ ರೈತ ಕಂಗಾಲು

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದ ರೈತ ಮಹಿಳೆ ಶಿಲ್ಪಾ ಚಂದ್ರಶೇಖರ್ ಮಾಲೀ ಪಾಟೀಲ್ ಅವರು ತಮ್ಮ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ಕಲ್ಲಂಗಡಿ ಬೆಳೆಸಿದ್ದಾರೆ. ಮಾರ್ಚ್​ನಲ್ಲಿ ಕಲ್ಲಂಗಡಿ ನಾಟಿ ಮಾಡಿದ್ದ ಇವರು, ಈಗ ಮೇ ಕೊನೆಯ ವಾರದಲ್ಲಿ ಕಲ್ಲಂಗಡಿ ಕಟಾವಿಗೆ ಬಂದಿದೆ. ಇನ್ನು ಕಲ್ಲಂಗಡಿ ಬೆಳೆ ನಾಟಿ ಮಾಡುವ ಮುನ್ನ ಹನಿ ನೀರಾವರಿ ಪದ್ದತಿಯಲ್ಲಿ ಬೆಳೆಸಲಾಗಿದೆ. ಕಳೆ ಬೆಳೆಯಬಾರದೆಂದು ಪ್ಲ್ಯಾಸ್ಟಿಕ್ ಮಲಚಿಂಗ್ ಪದ್ಧತಿಯಲ್ಲಿ ಕಲ್ಲಗಂಡಿ ಬೆಳೆಸಲಾಗಿದೆ. ಇದರಿಂದಾಗಿ ಬೆಳೆ ಉತ್ತಮವಾಗಿ ಬೆಳೆದಿದ್ದು, ಒಂದೊಂದು ಕಲ್ಲಂಗಡಿ ನಾಲ್ಕರಿಂದ ಐದು ಕೆ.ಜಿವರೆಗೆ ತೂಕ ಬರುತ್ತದೆ.

ಇದನ್ನೂ ಓದಿ:ಬಿಸಿಲಿಗೆ ಬಳಲಿದ್ದ ಗೋಶಾಲೆಯ ಗೋವುಗಳಿವೆ 3 ಸಾವಿರ ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟ ಯುವಕರ ತಂಡ

ಕಲ್ಲಂಗಡಿ ಕಟ್ ಮಾಡಿ ನೋಡಿದರೆ ಕೆಂಪು ಕೆಂಪಾಗಿದ್ದು, ತಿನ್ನಲೂ ಕೂಡ ರುಚಿಯಾಗಿದೆ. ಇಷ್ಟಾದರೂ ಕೂಡ ಕಲ್ಲಂಗಡಿಯನ್ನ ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಬಂದರೂ ಕೂಡ ಕೆ.ಜಿಗೆ ಐದು ರೂಪಾಯಿವರೆಗೆ ಕೇಳುತ್ತಿದ್ದು, ಐದು ರೂಪಾಯಿ ದರಕ್ಕೆ ಕಲ್ಲಂಗಡಿ ಮಾರಾಟ ಮಾಡಿದ್ರೆ, ಜಮೀನು, ಉಳುಮೆ, ಬಿತ್ತನೆ, ಔಷದೋಪಚಾರ ಮಾಡಿದ ಖರ್ಚು ಕೂಡ ಬರುವುದಿಲ್ಲ ಎಂದು ರೈತರು ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.

ದರ ಇಳಿತದ ನಡುವೆ ಕಾಡುಹಂದಿ ಕಾಟ

ಮೂರು ತಿಂಗಳುಗಳ ಕಾಲ ಕಷ್ಟಪಟ್ಟು ಕಲ್ಲಂಗಡಿಯನ್ನ ಬೆಳೆಸಿದ್ದೇವೆ. ಆದರೆ, ದರ ಕುಸಿತ ನಮ್ಮನ್ನು ಆರ್ಥಿಕ ನಷ್ಟಕ್ಕೆ ತಳ್ಳಿದೆ ಎಂದು ರೈತ ಮಹಿಳೆ ಹೇಳುತ್ತಿದ್ದಾರೆ.  ಇದರ ಜೊತೆಗೆ ಬೆಳೆದ ಕಲ್ಲಂಗಡಿಗೆ ಕಾಡು ಹಂದಿಗಳ ಕಾಟವೂ ಕೂಡ ಇದೆ. ಕಳೆದೊಂದು ತಿಂಗಳಿಂದ ಕಾಡು ಹಂದಿಗಳ ಕಾಟ ಇದ್ದು, ಕಲ್ಲಂಗಡಿ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಹೊಲದಲ್ಲಿಯೇ ಇದ್ದು ಬೆಳೆ ಉಳಿಕೊಂಡಿದ್ದೇವೆ. ಆದರೆ, ಕಳೆದೊಂದು ವಾರದಿಂದಾಗಿ ಹಂದಿಗಳ ಕಾಟ ವಿಫರಿತವಾಗಿದ್ದು, ಹಿಂಡು ಹಿಂಡಾಗಿ ನುಗ್ಗುವ ಹಂದಿಗಳು ಕಲ್ಲಂಗಡಿಯನ್ನ ತಿಂದು ನಾಶಮಾಡುತ್ತಿವೆಂದು ರೈತರು ಕಂಗಾಲಾಗಿದ್ದಾರೆ.

ಇದನ್ನೂ ಓದಿ:ಕಲ್ಲಂಗಡಿ ಅಥವಾ ಕರಬೂಜ, ಬೇಸಿಗೆಗೆ ಯಾವ ಹಣ್ಣು ಒಳ್ಳೆಯದು

ಹಿಂಡು ಹಿಂಡಾಗಿರುವ ಕಾಡುಹಂದಿಗಳನ್ನ ಹೊಡೆಯಲು ಹೋದ ರೈತರ ಮೇಲೆಯೇ ಕಾಡು ಹಂದಿಗಳು ದಾಳಿ ಮಾಡಿದ್ದು, ಹತ್ತಾರು ರೈತರಿಗೆ ಗಾಯಗಳಾಗಿವೆ. ಒಂದು ಕಡೆಗೆ ದರ ಕುಸಿತ, ಇನ್ನೊಂದು ಕಡೆಗೆ ಕಾಡು ಹಂದಿಗಳ ಕಾಟದಿಂದಾಗಿ ಕಲ್ಲಂಗಡಿ ಬೆಳೆಸಿದ ರೈತ ಮಹಿಳೆ ಕಂಗಾಲಾಗಿದ್ದಾಳೆ. ಕಳೆದ ಭಾರಿ ಬರದಿಂದಾಗಿ ನಷ್ಟ ಅನುಭವಿಸಿದ್ದ ರೈತ, ಬೇಸಿಗೆ ಬೆಳೆಯಾದ ಕಲ್ಲಂಗಡಿಯಲ್ಲಾದರೂ ಲಾಭ ಮಾಡಿಕೊಳ್ಳೋಣ ಎಂದರೆ, ದರ ಕುಸಿತ, ಕಾಡು ಪ್ರಾಣಿಗಳ ಹಾವಳಿಂದಾಗಿ ರೈತ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕಷ್ಟಪಟ್ಟು ಬೆಳೆದ ಕಲ್ಲಂಗಡಿಗೆ ದರ ಕುಸಿತ, ಕಾಡು ಪ್ರಾಣಿಗಳ ಹಾವಳಿಯಿಂದಾಗಿ ರೈತರನ್ನ ಮತ್ತಷ್ಟೂ ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಸಾಲ ಸೋಲ ಮಾಡಿ, ಬೆಳೆ ಬೆಳೆಸಿ ಕೈಗೆ ಬರುವಷ್ಠರಲ್ಲಿಯೇ ಕಲ್ಲಂಗಡಿಗೆ ದರ ಕುಸಿದಿದೆ. ಈ ಬೆಳೆ ಹಾನಿಗೆ ಸರಕಾರದಿಂದಲೂ ಯಾವುದೇ ಪರಿಹಾರವಿಲ್ಲ. ಹೀಗಾಗಿ ರೈತರು ಆತಂಕದಲ್ಲಿದ್ದು, ಸರಕಾರದಿಂದ ನಮಗೆ ಪರಿಹಾರ ಕೊಡಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್