AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watermelon or muskmelon: ಕಲ್ಲಂಗಡಿ ಅಥವಾ ಕರಬೂಜ, ಬೇಸಿಗೆಗೆ ಯಾವ ಹಣ್ಣು ಒಳ್ಳೆಯದು

ಈ ಋತುಮಾನದಲ್ಲಿ ದೊರಕುವ ಹಣ್ಣುಗಳು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಬೆರ್ರಿಗಳು, ದ್ರಾಕ್ಷಿ, ಲಿಚಿ ಮತ್ತು ಮಾವಿನಹಣ್ಣಿನ ಹೊರತಾಗಿ, ಕಲ್ಲಂಗಡಿ ಮತ್ತು ಕರಬೂಜ (ಮಸ್ಕ್‌ಮೆಲನ್) ಕೂಡ ನಿಮ್ಮ ಬೇಸಿಗೆಯ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ. ಆದರೆ ಇವೆರಡರಲ್ಲಿ ಬೇಸಿಗೆಯಲ್ಲಿ ತಿನ್ನುವುದಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ.

Watermelon or muskmelon: ಕಲ್ಲಂಗಡಿ ಅಥವಾ ಕರಬೂಜ, ಬೇಸಿಗೆಗೆ ಯಾವ ಹಣ್ಣು ಒಳ್ಳೆಯದು
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 30, 2024 | 5:57 PM

Share

ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅಲ್ಲದೆ ಈ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆ ಹೆಚ್ಚಾಗಿರುವುದರಿಂದ ಸಾಕಷ್ಟು ನೀರನ್ನು ಕುಡಿಯುವುದರ ಜೊತೆಗೆ ನೀರಿನಂಶ ಹೆಚ್ಚಿರುವ ಹಣ್ಣನ್ನು ಸೇವಿಸಬೇಕು. ಈ ಋತುಮಾನದಲ್ಲಿ ದೊರಕುವ ಹಣ್ಣುಗಳು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಬೆರ್ರಿಗಳು, ದ್ರಾಕ್ಷಿ, ಲಿಚಿ ಮತ್ತು ಮಾವಿನಹಣ್ಣಿನ ಹೊರತಾಗಿ, ಕಲ್ಲಂಗಡಿ ಮತ್ತು ಕರಬೂಜ (ಮಸ್ಕ್‌ಮೆಲನ್) ಕೂಡ ನಿಮ್ಮ ಬೇಸಿಗೆಯ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ. ಆದರೆ ಇವೆರಡರಲ್ಲಿ ಬೇಸಿಗೆಯಲ್ಲಿ ತಿನ್ನುವುದಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ.

ಕಲ್ಲಂಗಡಿಯ ಆರೋಗ್ಯ ಪ್ರಯೋಜನಗಳು;

ಈ ಹಣ್ಣು ಅದರ ಬಣ್ಣದಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ ಆದರೆ ಇದರ ಹೊರತಾಗಿ ಇದರಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ಶೇ. 92 ರಷ್ಟು ನೀರಿನ ಅಂಶವಿದ್ದು, ವಿಟಮಿನ್ ಎ, ಬಿ 6 ಮತ್ತು ಸಿ, ಜೊತೆಗೆ ಲೈಕೋಪೀನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಕೆಲವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲೊರಿಗಳಿವೆ ಮತ್ತು ಸಿಟ್ರುಲೈನ್ ಎಂಬ ಅಮೈನೋ ಆಮ್ಲವಿದೆ, ಇದು ರಕ್ತದ ಹರಿವನ್ನು ಸುಧಾರಿಸಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞೆ ನೀಲಂ ಭೀಸ್ಟ್ ಹೇಳುತ್ತಾರೆ.

ಈ ಹಣ್ಣನ್ನು ಶುಷ್ಕ ಋತುಗಳಲ್ಲಿ ಸೇವನೆ ಮಾಡಲಾಗುತ್ತದೆ. ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದಾದ ಸ್ಮೂಥಿ, ಸಲಾಡ್, ಐಸ್ ಕ್ರೀಮ್ ಮತ್ತು ಕಾಕ್‌ಟೇಲ್‌ಗಳು ಮತ್ತು ಮಾಕ್‌ಟೇಲ್‌ಗಳಂತಹ ಪಾನೀಯಗಳಿಗೆ ಉತ್ತಮವಾಗಿದೆ. ಕಲ್ಲಂಗಡಿಯಲ್ಲಿರುವ ವಿಟಮಿನ್ ಎ ಮತ್ತು ಫೈಬರ್ ಅಂಶವು ಉತ್ತಮ ರೋಗನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ ಜೊತೆಗೆ ಚರ್ಮಕ್ಕೆ ಹೆಚ್ಚಿನ ಕಾಂತಿಯನ್ನು ನೀಡುತ್ತದೆ.

ಕರಬೂಜ ಹಣ್ಣಿನ ಆರೋಗ್ಯ ಪ್ರಯೋಜನಗಳು;

ಈ ಹಣ್ಣು, ಪೌಷ್ಠಿಕಾಂಶದ ವಿಷಯಕ್ಕೆ ಬಂದರೆ ಯಾವುದಕ್ಕೂ ಕಡಿಮೆಯಿಲ್ಲ. ಸುಮಾರು 90 ಪ್ರತಿಶತದಷ್ಟು ನೀರಿನ ಅಂಶವನ್ನು ಹೊಂದಿದ್ದು ಇದನ್ನು ಜ್ಯೂಸ್, ಶೇಕ್ಸ್ ಮತ್ತು ಪುಡ್ಡಿಂಗ್ ಹೀಗೆ ವಿವಿಧ ರೂಪಗಳಲ್ಲಿ ರುಚಿ ರುಚಿಯಾಗಿ ಬಳಸಬಹುದು. ಕರಬೂಜ ಹಣ್ಣು ವಿಟಮಿನ್ ಎ ಮತ್ತು ಸಿ, ಜೊತೆಗೆ ಪೊಟ್ಯಾಸಿಯಮ್ ಮತ್ತು ಫೈಬರ್ನಿಂದ ಸಮೃದ್ಧವಾಗಿದೆ, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ಗಳನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಚರ್ಮ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಅದರಲ್ಲಿರುವ ಪೊಟ್ಯಾಸಿಯಮ್ ಅಂಶ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಣ್ಣಿನ ಸಮಸ್ಯೆಗೆ ರಾಮಬಾಣ ಗೋಡಂಬಿ, ಇದನ್ನು ಪ್ರತಿದಿನ ತಿನ್ನುವುದರಿಂದ ಆರೋಗ್ಯ ಲಾಭ

ಕಲ್ಲಂಗಡಿ ಮತ್ತು ಕರಬೂಜ, ಇವೆರಡರಲ್ಲಿ ಯಾವ ಹಣ್ಣು ಉತ್ತಮ?

ಈ ಎರಡೂ ಹಣ್ಣಿನಲ್ಲಿಯೂ ಕೂಡ ಹೆಚ್ಚಿನ ನೀರಿನ ಅಂಶವಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಆದರೆ ಕರಬೂಜಕ್ಕೆ ಹೋಲಿಸಿದರೆ ಕಲ್ಲಂಗಡಿ ಸ್ವಲ್ಪ ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ. ರುಚಿ ಅಥವಾ ಆದ್ಯತೆಯ ಪ್ರಕಾರ ಕಲ್ಲಂಗಡಿ ಹಣ್ಣುಗಳನ್ನು ಸೇವಿಸಬಹುದು. ಆದರೆ ಇವೆರಡು ಹಣ್ಣುಗಳನ್ನು ಒಟ್ಟಿಗೆ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕಲ್ಲಂಗಡಿ ಹಣ್ಣಿನಲ್ಲಿ ಜೀರ್ಣ ಶಕ್ತಿ ಇತರ ಹಣ್ಣುಗಳಿಗಿಂತ ವೇಗವಾಗಿರುತ್ತದೆ.

ಎರಡೂ ಹಣ್ಣುಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಆರೋಗ್ಯಕರ ಆಯ್ಕೆಯು ವೈಯಕ್ತಿಕ ಆದ್ಯತೆಗಳು ಮತ್ತು ಪೌಷ್ಠಿಕಾಂಶದ ಅಗತ್ಯಗಳನ್ನು ಅವಲಂಬಿಸಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Tue, 30 April 24