ಅಂಜಲಿ ಹತ್ಯೆ ಪ್ರಕರಣ; ಆರೋಪಿ ವಿಶ್ವ 8 ದಿನ ಸಿಐಡಿ ವಶಕ್ಕೆ ನೀಡಿದ ಕೋರ್ಟ್​

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡವು ಇನ್ನೂ ಹೆಚ್ಚಿನ ವಿಚಾರಣೆಗಾಗಿ ಆರೋಪಿ ವಿಶ್ವವನನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದ್ದರು. ಅದರಂತೆ ಇಂದು ವಿಚಾರಣೆ ನಡೆಸಿದ ಕೋರ್ಟ್​ ಎಂಟು ದಿನಗಳ ಕಾಲ ಸಿಐಡಿಗೆ ವಶಕ್ಕೆ ನೀಡಿ ಆದೇಶಿಸಿದೆ.

ಅಂಜಲಿ ಹತ್ಯೆ ಪ್ರಕರಣ; ಆರೋಪಿ ವಿಶ್ವ 8 ದಿನ ಸಿಐಡಿ ವಶಕ್ಕೆ ನೀಡಿದ ಕೋರ್ಟ್​
ಅಂಜಲಿ ಕೊಲೆ ಪ್ರಕರಣದ ಆರೋಪಿ ವಿಶ್ವ ಎಂಟು ದಿನ ಸಿಐಡಿ ವಶಕ್ಕೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 23, 2024 | 2:46 PM

ಹುಬ್ಬಳ್ಳಿ, ಮೇ.23: ಮನೆಗೆ ನುಗ್ಗಿ ಅಂಜಲಿ ಅಂಬಿಗೇರ(Anjali Ambigera) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಶ್ವ​ನನ್ನು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಮೂರ್ತಿ ನಾಗೇಶ್ ನಾಯ್ಕ್​ ಅವರು ಆದೇಶಿಸಿದ್ದಾರೆ. ವಿಶ್ವ ಅಲಿಯಾಸ್​ ಗಿರೀಶ್​ನನ್ನು ಮತ್ತೆ 15 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ(CID) ಮನವಿ ಮಾಡಿತ್ತು. ಈ ಹಿನ್ನಲೆ ಇಂದು(ಮೇ.23) ಹುಬ್ಬಳ್ಳಿ ಒಂದನೇ ಸಿವಿಲ್‌ ನ್ಯಾಯಾಲಯ, ಜೆಎಂಎಫ್​ಸಿ ಕೋರ್ಟ್‌ ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾನೆ. ಇದಕ್ಕೆ ಹತ್ಯೆ ಮಾಡುವಾಗ ಗೊತ್ತಾಗಲಿಲ್ವಾ ಎಂದು ಜಡ್ಜ್ ಗದರಿದರು.

ಸಿಐಟಿ ಅಧಿಕಾರಿಗಳ ಮುಂದೆ ಕೊಲೆಯ ರಹಸ್ಯ ಬಾಯ್ಬಿಟ್ಟಿದ್ದ ಆರೋಪಿ

ಇನ್ನು ಘಟನೆಗೆ ಸಂಬಂಧಪಟ್ಟಂತೆ ರೈಲಿನಲ್ಲಿ ಕಿರಿಕ್ ಮಾಡಿ ತಪ್ಪಿಸಲು ಯತ್ನಿಸಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ವಿಶ್ವ ಪೊಲೀಸ್ ಬಲೆಗೆ ಬಿದ್ದಿದ್ದ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ತನಿಖೆಯ ಹೊಣೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಅದರಂತೆ, ನ್ಯಾಯಾಲಯದ ಅನುಮತಿ ಪಡೆದು ಸಿಐಡಿ ಎಸ್‌ಪಿ ವೆಂಕಟೇಶ್‌ ನೇತೃತ್ವದ ಅಧಿಕಾರಿಗಳ ತಂಡ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಆಗಮಿಸಿ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಇದೇ ವೇಳೆ, ಕೊಲೆಯ ರಹಸ್ಯದ ಬಗ್ಗೆ ವಿಶ್ವ ಬಾಯ್ಬಿಟ್ಟಿದ್ದ.

ಇದನ್ನೂ ಓದಿ:ಅಂಜಲಿ ಕೊಲೆ ಪ್ರಕರಣ: ಸಿಐಡಿ ಅಧಿಕಾರಿಗಳ ಬಳಿ ಹತ್ಯೆ ರಹಸ್ಯ ಬಾಯ್ಬಿಟ್ಟ ಹಂತಕ ವಿಶ್ವ

ಆರೋಪಿ ವಿಶ್ವ ಮಾತನಾಡಿ, ಅಂಜಲಿಯನ್ನು ನಾನು ಮೈಸೂರಿಗೆ ಬಾ ಎಂದು ಕರೆದಿದ್ದೆ. ಆಕೆ ಬರಲಿಲ್ಲ. ಹಾಗಾಗಿ ಕೊಲೆ ಮಾಡಿದೆ ಎಂದಿದ್ದಾನೆ. ಜೊತೆಗೆ ಅಂಜಲಿ ಕೊಲೆಯಾಗುವ ಹಿಂದಿನ ದಿನವೇ ಅಂಜಲಿಗೆ ವಿಶ್ವ 1000 ರೂಪಾಯಿ ಫೋನ್ ಪೇ ಕೂಡ ಮಾಡಿದ್ದ. 1000 ರೂ. ಹಣ ತೆಗೆದುಕೊಂಡು ನಂತರ ಆಕೆ ಆತನನ್ನು ಬ್ಲಾಕ್ ಮಾಡಿದ್ದಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದೇನೆ ಎಂದು ವಿಶ್ವ ಸಿಐಡಿ ಅಧಿಕಾರಿಗಳ ಬಳಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿತ್ತು. ಇದೀಗ ಇನ್ನು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಅದರಂತೆ ಎಂಟು ದಿನ ಸಿಐಡಿ ವಶಕ್ಕೆ ನೀಡಿ ಕೋರ್ಟ್​ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ