AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಹಾ, ಅಂಜಲಿ ಹತ್ಯೆ ನಂತರವೂ ಹೆಣ್ಮಕ್ಕಳಿಗಿಲ್ಲ ಸುರಕ್ಷತೆ; ಕವಿವಿ ಕ್ಯಾಂಪಸ್​ನಲ್ಲೇ ವಿದ್ಯಾರ್ಥಿನಿ ಭುಜಕ್ಕೆ ಹೊಡೆದು ಹೋದ ಯುವಕ

ನೇಹಾ ಹಿರೇಮಠ ಮತ್ತು ಅಂಜಲಿ ಹತ್ಯೆ ನಡೆದರೂ ಅವಳಿ ನಗರದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ. ಕರ್ನಾಟಕ ವಿವಿ ಕ್ಯಾಂಪಸ್​ನಲ್ಲಿ ಬೈಕ್​ನಲ್ಲಿ ಬಂದು ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿ ಹಲ್ಲೆ ನಡೆಸಿದ್ದಾನೆ. ಸದ್ಯ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೈಕ್​​ನಲ್ಲಿ ಬಂದು ವಿದ್ಯಾರ್ಥಿನಿ ಭುಜಕ್ಕೆ ಹೊಡೆದಿದ್ದ ದುರುಳ.

ನೇಹಾ, ಅಂಜಲಿ ಹತ್ಯೆ ನಂತರವೂ ಹೆಣ್ಮಕ್ಕಳಿಗಿಲ್ಲ ಸುರಕ್ಷತೆ; ಕವಿವಿ ಕ್ಯಾಂಪಸ್​ನಲ್ಲೇ ವಿದ್ಯಾರ್ಥಿನಿ ಭುಜಕ್ಕೆ ಹೊಡೆದು ಹೋದ ಯುವಕ
ಸಾಂದರ್ಭಿಕ ಚಿತ್ರ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:May 23, 2024 | 12:15 PM

Share

ಧಾರವಾಡ, ಮೇ.23: ನೇಹಾ ಮತ್ತು ಅಂಜಲಿ ಹತ್ಯೆಯಂತಹ ಎರಡು ದೊಡ್ಡ ಪ್ರಕರಣಗಳು ನಡೆದರೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಹಿಳೆಯರಿಗೆ ಸುರಕ್ಷತೆಯೇ (Women Safety) ಇಲ್ಲದಂತಾಗಿದೆ. ಕರ್ನಾಟಕ ವಿವಿ ಕ್ಯಾಂಪಸ್​ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಏಕೆಂದರೆ ಬೈಕ್​ನಲ್ಲಿ ಬಂದು ವಿದ್ಯಾರ್ಥಿನಿ (Student) ಮೇಲೆ ದುಷ್ಕರ್ಮಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕ್ಯಾಂಪಸ್​​ನಲ್ಲಿ ಓಡಾಡ್ತಿದ್ದ ವಿದ್ಯಾರ್ಥಿನಿಯ ಮೇಲೆ ಬೈಕ್​​ನಲ್ಲಿ ಬಂದು ಭುಜಕ್ಕೆ ಹೊಡೆದು ಕಿರಾತಕ ಎಸ್ಕೇಪ್ ಆಗಿದ್ದಾನೆ. ಆದರೆ ಇದುವರೆಗೂ ಕರ್ನಾಟಕ ವಿವಿ ಯಾವುದೇ ಕ್ರಮ ಕೈಗೊಂಡಿಲ್ಲ.

ಮೇ 14ರಂದು ಕವಿವಿ ಅಮರ ಜವಾನ್ ಸರ್ಕಲ್ ನಲ್ಲಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಾಗ ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿ ವಿದ್ಯಾರ್ಥಿನಿ ಭುಜಕ್ಕೆ ಹೊಡೆದು ಮುಂದೆ ಹೋಗಿ ನಿಂತಿದ್ದಾನೆ. ಇದೇ ಯುವಕನಿಂದ ಕ್ಯಾಂಪಸ್ ನಲ್ಲಿ ಸರಗಳ್ಳತನಕ್ಕೂ ಯತ್ನ ನಡೆದಿತ್ತು. ಕವಿವಿ ಕ್ಯಾಂಪಸ್ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಆರೋಪಿ ಗುರುತು ಹಿಡಿಯೋದೆ ಕಷ್ಟವಾಗಿದೆ. ಸದ್ಯ ಕವಿವಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ವಿದ್ಯಾರ್ಥಿನಿಯರೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆ ನಡೆದು ಒಂದು ವಾರವಾದರೂ ಕವಿವಿ ಆಡಳಿತ ಮಂಡಲಿ ಸುಮ್ಮನಿದೆ.

ಈ ಘಟನೆ ಎಬಿವಿಪಿ ಗಮನಕ್ಕೆ ಬಂದಿದ್ದು ವಿದ್ಯಾರ್ಥಿನಿಗೆ ಆತ್ಮಸ್ಥೈರ್ಯ ತುಂಬಿ ದೂರು ದಾಖಲಿಸುವಂತೆ ಮಾಡಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ಕಾಲೇಜು ಆಡಳಿತ ಮಂಡಳಿ ಯತ್ನಿಸುತ್ತಿದೆ ಎಂದು ಎಬಿವಿಪಿ ಕವಿವಿ ಮೇಲೆ ಆರೋಪ ಮಾಡಿದೆ. ಮೇ 14ರಂದು ಘಟನೆ ನಡೆದರೂ ಮೇ 21ಕ್ಕೆ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ ಪರಮೇಶ್ವರ್

ನೇಹಾ ಮಾದರಿಯಲ್ಲಿ ನಡೆದ ಅಂಜಲಿ ಹತ್ಯೆ ಕೇಸ್ ತನಿಖೆ ಚುರುಕುಗೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಸರ್ಕಾರ ಅಂಜಲಿ ಕೊಲೆ ಕೇಸ್ ಸಿಐಡಿಗೆ ಹಸ್ತಾಂತರ ಮಾಡಿತ್ತು. ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ ವಿಚಾರಣೆ ಆರಂಭಿಸಿದೆ. ಒಟ್ಟು 9 ಜನರ ಸಿಐಡಿ ಅಧಿಕಾರಿಗಳ ಟೀಮ್ ವಿಚಾರಣೆ ಆರಂಭಿಸಿದ್ದು, ವಿಚಾರಣೆಯಲ್ಲಿ ಅಂಜಲಿ ಹಂತಕ ಕೆಲ ಸತ್ಯ ಬಾಯ್ಬಿಟ್ಟಿದ್ದಾನೆ.

ಅಂಜಲಿ ಹತ್ಯೆಗೆ 1000 ಹಣವೇ ಕಾರಣ ಅಂತ ವಿಶ್ವ ಒಪ್ಪಿಕೊಂಡಿದ್ದಾನೆ.. ಮೈಸೂರಿಗೆ ಬಾ ಅಂತ ಅಂಜಲಿಯನ್ನ ಗಿರೀಶ್ ಕರೆದಿದ್ದು, ಇದಕ್ಕೆ ಒಪ್ಪಿರಲಿಲ್ವಂತೆ. ಅಲ್ಲದೆ, ಹತ್ಯೆಗೂ ಹಿಂದಿನ ದಿನ ಅಂಜಲಿಗೆ ವಿಶ್ವ, 1000 ರೂಪಾಯಿ ಫೋನ್ ಪೇ ಮಾಡಿದ್ನಂತೆ. ಹಣ ಪಡೆದ ಬಳಿಕ ಆತನ ನಂಬರ್​ ಅನ್ನ ಅಂಜಲಿ ಬ್ಲಾಕ್ ಮಾಡಿದ್ಳಂತೆ. ಇದ್ರಿಂದ ಕೋಪಗೊಂಡ ಕ್ರಿಮಿ, ಮೈಸೂರಿಗೆ ಹುಬ್ಬಳ್ಳಿಗೆ ಬಂದು ಅಂಜಲಿ ಹತ್ಯೆಗೈದೆ ಅಂತೇಳಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:11 pm, Thu, 23 May 24

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More