Hubballi Idga maidan: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ‌ ಗಣೇಶೋತ್ಸವಕ್ಕೆ ಪಾಲಿಕೆಯಿಂದ ಅನುಮತಿಯ ತೀರ್ಮಾನ – ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Aug 12, 2022 | 2:42 PM

Pralhad Joshi: ಮುಸ್ಲಿಂ ಬಾಂದವರಿಗೆ ಪ್ರಾರ್ಥನೆಗೆ ಎರಡು ದಿನ ಎರಡು ಮೂರು ಗಂಟೆಗೆ ಅವಕಾಶ ಕೊಡಬೇಕು ಬಿಟ್ಟರೆ ಉಳಿದ ವರ್ಷದ ಪೂರ್ತಿ ಮೈದಾನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುತ್ತದೆ. ಹೀಗಾಗಿ ಇದರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾರ್ಮಿಕವಾಗಿ ಹೇಳಿದ್ದಾರೆ.

Hubballi Idga maidan: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ‌ ಗಣೇಶೋತ್ಸವಕ್ಕೆ ಪಾಲಿಕೆಯಿಂದ ಅನುಮತಿಯ ತೀರ್ಮಾನ - ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ‌ ಗಣೇಶೋತ್ಸವಕ್ಕೆ ಅನುಮತಿ ಪಾಲಿಕೆಯಿಂದ ತೀರ್ಮಾನ - ಪ್ರಲ್ಹಾದ್ ಜೋಶಿ
Follow us on

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ (Hubballi Idga maidan) ಗಣೇಶೋತ್ಸವ (Ganeshotsav) ನಡೆಸಲು ಅನುಮತಿ ನೀಡುವ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubli-Dharwad Municipal Corporation) ನಿರ್ಧರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈದ್ಗಾ ಮೈದಾನ ಅಥವಾ ರಾಣಿ ಚೆನ್ನಮ್ಮ ಮೈದಾನ ನಮ್ಮ ಮಹಾನಗರ ಪಾಲಿಕೆಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದೆ. ಹೀಗಿರುವಾಗ ಈದ್ಗಾ ಮೈದಾನದಲ್ಲಿ ಯಾವ ಕಾರ್ಯಕ್ರಮ ನಡೆಯಬೇಕು, ಯಾವುದಕ್ಕೆ ಅನುಮತಿ‌ ನೀಡಬೇಕು ಎಂಬುದನ್ನ ನಿರ್ಧರಿಸುವ ಅಧಿಕಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇದೆ. ಗಣೇಶೋತ್ಸವ ವಿಚಾರವಾಗಿಯೂ ತೀರ್ಮಾನಿಸಲಿದೆ ಎಂದರು.

ಮುಸ್ಲಿಂ ಬಾಂದವರಿಗೆ ಪ್ರಾರ್ಥನೆಗೆ ಎರಡು ದಿನ ಎರಡು ಮೂರು ಗಂಟೆಗೆ ಅವಕಾಶ ಕೊಡಬೇಕು ಬಿಟ್ಟರೆ ಉಳಿದ ವರ್ಷದ ಪೂರ್ತಿ ಮೈದಾನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುತ್ತದೆ. ಹೀಗಾಗಿ ಇದರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾರ್ಮಿಕವಾಗಿ ಹೇಳಿದ್ದಾರೆ.

ಹುಬ್ಬಳ್ಳಿಯ ಈದ್ಗಾ ವಿವಾದ ದಶಕಗಳ ಕಾಲ ಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು. ಹುಬ್ಬಳ್ಳಿಯ ಈದ್ಧಾ ಮೈದಾನದ ಹೋರಾಟ ರಣ ರೋಚಕ ಇತಿಹಾಸವನ್ನು ಹೊಂದಿದೆ.

ಆದರೆ ದಶಕದ ಹಿಂದೆಯೇ ಹುಬ್ಬಳ್ಳಿಯ ಈದ್ದಾ ವಿವಾದಕ್ಕೆ ಅಂತ್ಯ ಹಾಡಲಾಗಿದೆ. ಆದರೆ ಇತ್ತೀಚೆಗೆ ನಡೆದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ ಬಳಿಕ, ಮತ್ತೆ ಹುಬ್ಬಳ್ಳಿಯ ಈದ್ಗಾ ಮೈದಾನ ವಿಚಾರ ಚರ್ಚೆಗೆ ಈಡಾಗಿತ್ತು. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಕೋರಿ ಗಜಾನನ ಮಂಡಳಿಯೊಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು.