ಹಿಂಗಾರು ಮಳೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ: ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ ಸ್ವಾಮೀಜಿ ಹೇಳಿಕೆ

ಕರ್ನಾಟಕ ಈ ಬಾರಿ ಬರದ ಬರೆಗೆ ಸಿಲುಕಿದೆ. ಮಳೆ ಇಲ್ಲದ ಕಾರಣ ಬೆಳೆ ಬೆಳೆಯಲಾಗಿದೆ ರೈತರು ಕಂಗಾಲಾಗಿದ್ದು, ಬರೋಬ್ಬರಿ 226 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಇನ್ನೊಂದೆಡೆ ರೈತರು ಹಿಂಗಾರು ಮಳೆಯಾದರೂ ಸಪರ್ಕವಾಗಿ ಆಗಲಿದೆ ಎನ್ನುವ ಆಶಾಭಾವನೆ ಇಟ್ಟುಕೊಂಡಿದ್ದು, ಇದರ ಮಧ್ಯೆ ಆಯುಧ ಪೂಜೆ ದಿನದಂದು ಕೋಡಿಶ್ರೀ ಹಿಂಗಾರು ಮಳೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಹಿಂಗಾರು ಮಳೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ: ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ ಸ್ವಾಮೀಜಿ ಹೇಳಿಕೆ
ಕೋಡಿಶ್ರೀ
Edited By:

Updated on: Oct 20, 2026 | 4:59 PM

ಮುಖ್ಯಾಂಶಗಳು

  • ಹಿಂಗಾರು ಮಳೆ ಬಗ್ಗೆ ಧಾರವಾಡದಲ್ಲಿ ಕೋಡಿ ಶ್ರೀಗಳ ಭವಿಷ್ಯ
  • ಸದ್ಯಕ್ಕೆ ಹಿಂಗಾರು ಮಳೆ ಆಗುತ್ತೆ, ಜನರಿಗೆ ಸುಭೀಕ್ಷೆ ಆಗುತ್ತೆ ಎಂದ ಕೋಡಿಶ್ರೀ
  • ನೆಮ್ಮದಿ ಸಿಗುತ್ತೆ. ಜಲಚರಗಳಿಗೆ ಒಳ್ಳೆಯದಾಗುತ್ತೆ ಎಂದು ಭವಿಷ್ಯ ನುಡಿದ ಸ್ವಾಮೀಜಿ

ಧಾರವಾಡ, (ಅಕ್ಟೋಬರ್ 20): ಈ ಬಾರಿ ಮುಂಗಾರು ಮಳೆ ಆಗುವುದಿಲ್ಲ. ಅನ್ನಕ್ಕೆ ಕೊರತೆ ಆಗುತ್ತೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಅದರಂತೆ ಮಂಗಾರು ಮಳೆ ಕೈಕೊಟ್ಟಿದ್ದು, ಎಲ್ಲೆಡೆ ನೀರಿಗಾಗಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಮೂಲಕ ಅಂದು ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜವಾಗಿದೆ. ಇದೀಗ ಹಿಂಗಾರು ಮಳೆ ಬಗ್ಗೆ ಭವಿಷ್ಯ ನುಡಿದಿದ್ದು, ಸದ್ಯಕ್ಕೆ ಹಿಂಗಾರು ಮಳೆ ಆಗುತ್ತೆ. ಜನರಿಗೆ ಸುಭೀಕ್ಷೆ ಆಗುತ್ತೆ. ನೆಮ್ಮದಿ ಸಿಗುತ್ತೆ. ಜಲಚರಗಳಿಗೆ ಒಳ್ಳೆಯದಾಗುತ್ತೆ ಎಂದಿದ್ದಾರೆ.

ರೈತರಲ್ಲಿ ಆಶಾಭಾವನೆ ಮೂಡಿಸಿದ ಕೋಡಿಶ್ರೀ ಭವಿಷ್ಯ

ಧಾರವಾಡದಲ್ಲಿ ಮಾತನಾಡಿರುವ ಕೋಡಿಶ್ರೀ, ಮುಂಗಾರು ಮಳೆ ಆಗುವುದಿಲ್ಲ, ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ವಿಪರೀತವಾದ ಭೂಕಂಪ ಆಗುತ್ತದೆ ಎಂದು ಈ ಹಿಂದೆ ಹೇಳಿದ್ದೆ.ಅದೇ ಪ್ರಕಾರ ಆಗಿದೆ. ಆದರೆ, ಈ ಬಾರಿ ಹಿಂಗಾರು ಮಳೆಯಾಗಲಿದೆ. ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಶ್ರೀಗಳ ಹೇಳಿಕೆಯೊಂದಿಗೆ ಬರದಿಂದ ಕಂಗೆಟ್ಟಿರುವ ರೈತರಲ್ಲಿ ಆಶಾಭಾವನೆ ಮೂಡಿದೆ.

ಇದನ್ನೂ ನೋಡಿ: ಡಿಕೆಶಿಗೆ ಸಿಎಂ ಯೋಗ: ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಅಂದು ಸ್ವಾಮೀಜಿ ಹೇಳಿದ್ದೇನು?

ಜಂಬೂ ಸವಾರಿಗಳು ಏಕತಾ ಮನೋಭಾವದ ಸಂದೇಶ

ಅಖಂಡ ಕರ್ನಾಟಕ ಒಂದಾಗಿ ಹೋಗಬೇಕು. ಇದು ಆಗಬೇಕಾದರೆ ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಗಟ್ಟು, ಜನ ಜೀವನ, ಮಳೆ, ಬೆಳೆ ಚೆನ್ನಾಗಿ ಆಗಬೇಕು. ಆ ದೃಷ್ಟಿಯಿಂದ ಇಂದು ಧಾರವಾಡ ಜಂಬೂ ಸವಾರಿ ನಡೆಯುತ್ತಿದೆ. ಇದು ಅಖಂಡ ರಾಜ್ಯದ ಸಂಸ್ಕೃತಿಯ ಪ್ರತೀಕ. ಮೈಸೂರಿನಲ್ಲಿ ಒಂದು ಹಾಗೂ ಉತ್ತರ ಕರ್ನಾಟಕದಲ್ಲಿ ಈ ಜಂಬೂ ಸವಾರಿಗಳು ಏಕತಾ ಮನೋಭಾವದ ಸಂದೇಶ ನೀಡುತ್ತಿವೆ. ವರ್ಷದಿಂದ ವರ್ಷಕ್ಕೆ ಮನುಷ್ಯನ ಜೀವನ ಉಚ್ಛವಾಗಿದೆ. ಮನುಷ್ಯ ಮನುಷ್ಯನಾಗಿ ಬಾಳಬೇಕಾದರೆ ನಮ್ಮ ಹಿರಿಯರ ಆದರ್ಶ ಮುಖ್ಯವಾದದ್ದು. ಆ ಆದರ್ಶದ ಸಂಕೇತವೇ ಈ ದಸರಾ ಕಾರ್ಯಕ್ರಮ ಎಂದು ಹೇಳಿದರು.Kodi Mutt Swamiji: ಮಳೆಯ ಬಗ್ಗೆ ನಾನು ಮೊದಲೇ ಹೇಳಿದ್ದೆ ಎಂದ ಕೋಡಿಮಠದ ಶ್ರೀಗಳು| #TV9D

ರಾಜ್ಯ ರಾಜಕಾರಣದ ಬಗ್ಗೆ ಹೇಳಿದ್ದಿಷ್ಟು

ಇನ್ನು ಇದೇ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅದರ ಬಗ್ಗೆ ನನಗಿಂತ ನಿಮಗೇ (ಮಾಧ್ಯಮ) ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ. ದೈವ ಕೃಪೆ ಎಲ್ಲರಿಗೂ ಆಗಲಿ. ನಮಗೆ ಬೇಕಾಗಿದ್ದು ಮಳೆ ಬೆಳೆ. ರೋಗ ರುಜಿನಗಳು ದೂರಾಗಿ ಮನುಷ್ಯನಿಗೆ ನೆಮ್ಮದಿ ಬರಬೇಕು, ಶಾಂತಿ ಬರಬೇಕು ಎಂದು ನುಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us