ದಶಕದಿಂದ ಶಿವರಾತ್ರಿ ದಿನ- ಸಿದ್ದಾರೂಢ ಅಜ್ಜರ ಜಾತ್ರೆಗಾಗಿ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ! ವಿಶೇಷ ಏನು?

ಶಿವರಾತ್ರಿಯ ದಿನ ನಗರದ ರೈಲು ನಿಲ್ದಾಣ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹೊಸೂರು ಸರ್ಕಲ್, ರಸ್ತೆಯ ಅಕ್ಷಯ ಪಾರ್ಕ್​ನಿಂದ ಶ್ರೀ ಸಿದ್ಧಾರೂಢ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ ಕಲ್ಪಿಸುತ್ತಾ ಬಂದಿದ್ದಾರೆ. ಸಾವಿರಾರು ಭಕ್ತರು ಅದರ ಸೇವೆ ಪಡೆಯುತ್ತಿದ್ದಾರೆ.

ದಶಕದಿಂದ ಶಿವರಾತ್ರಿ ದಿನ- ಸಿದ್ದಾರೂಢ ಅಜ್ಜರ ಜಾತ್ರೆಗಾಗಿ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ! ವಿಶೇಷ ಏನು?
ಮಹಾಶಿವರಾತ್ರಿ ದಿನ- ಸಿದ್ದಾರೂಢ ಅಜ್ಜರ ಜಾತ್ರೆಗಾಗಿ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ!
Updated By: ಸಾಧು ಶ್ರೀನಾಥ್​

Updated on: Mar 01, 2022 | 1:42 PM

ಹುಬ್ಬಳ್ಳಿ: ಸೇವಾ ಮನೋಭಾವ ಇದ್ರೆ ಯಾವ ರೂಪದಲ್ಲಾದ್ರೂ ದೇವರಿಗೆ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬಹುದು ಎಂಬ ಮಾತಿದೆ. ಅದರಂತೆ ಹುಬ್ಬಳ್ಳಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಸಿದ್ಧಾರೂಡರ ಮಠಕ್ಕೆ ಉಚಿತ ಆಟೋ ಸೇವೆ ಕಲ್ಪಿಸುವ ಮೂಲಕ ಭಕ್ತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಭಕ್ತರಿಗೆ ಉಚಿತ ಆಟೋ ಸೇವೆ ನೀಡುತ್ತಿರುವ ಸಂಘಶ್ರೀ ಸಿದ್ಧಾರೂಢರ ಜಾತ್ರೆಗಾಗಿ ಉಚಿತ ಆಟೋ ಸೇವೆ (Hubballi Auto riksha) ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ 10 ವರ್ಷಗಳಿಂದ ಮಹಾಶಿವರಾತ್ರಿ ದಿನ ಹಾಗೂ ಶ್ರೀ ಸಿದ್ಧಾರೂಢ ಶ್ರೀಗಳ ರಥೋತ್ಸವದಂದು ಉಚಿತ ಆಟೋ ಸೇವೆಯನ್ನು ನಗರದ (Hubballi) ಆಟೋ ರಿಕ್ಷಾ ಚಾಲಕರು ಹಾಗೂ ಸಿದ್ಧರೂಢರ ಅಜ್ಜನವರ (siddaruda ajja fair) ಭಕ್ತರು ಮಾಡುತ್ತಾ ಬಂದಿದ್ದಾರೆ. ಅದರಂತೆ ಈ ವರ್ಷವೂ ಕೂಡ ಅದನ್ನು ಮುಂದುವರೆಸಿ ಶ್ರೀಗಳ ಕೃಪೆ ಜೊತೆಗೆ ಭಕ್ತರಿಗೆ ಸಹಾಯ ಮಾಡುತ್ತಿದ್ದಾರೆ (shivaratri)‌‌.

ಒಂದು ದಶಕದಿಂದ ಶಿವರಾತ್ರಿ ದಿನ ಮತ್ತು ಶ್ರೀ ಸಿದ್ಧಾರೂಢ ಶ್ರೀಗಳ ರಥೋತ್ಸವದಂದು ಉಚಿತ ಆಟೋ ಸೇವೆ: 

  1. ಶಿವರಾತ್ರಿಯ ದಿನ ನಗರದ ರೈಲು ನಿಲ್ದಾಣ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹೊಸೂರು ಸರ್ಕಲ್, ರಸ್ತೆಯ ಅಕ್ಷಯ ಪಾರ್ಕ್​ನಿಂದ ಶ್ರೀ ಸಿದ್ಧಾರೂಢ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ ಕಲ್ಪಿಸುತ್ತಾ ಬಂದಿದ್ದಾರೆ. ಸಾವಿರಾರು ಭಕ್ತರು ಅದರ ಸೇವೆ ಪಡೆಯುತ್ತಿದ್ದಾರೆ. ಶ್ರೀ ಸಿದ್ಧಾರೂಢ ಶ್ರೀಗಳ‌ ರಥೋತ್ಸವ ಹಾಗೂ ಜಾತ್ರೆ ಹಿನ್ನೆಲೆ ಸಾರ್ವಜನಿಕರು ಹಾಗೂ ಭಕ್ತರ ಅನುಕೂಲಕ್ಕಾಗಿ ಇಂದು ಕೂಡ ತಮ್ಮ ಸೇವೆ ನಿರಂತರವಾಗಿ ಮುಂದುವರೆಸಿದ್ದಾರೆ.
  2. ಸುಮಾರು 150ಕ್ಕೂ ಆಟೋಗಳು ಉಚಿತ ಸೇವೆಯನ್ನು ನೀಡುತ್ತಿವೆ. ಈ ಮೂಲಕ ಶ್ರೀಗಳಿಗೆ ತಮ್ಮ ಸೇವೆ ಸಮರ್ಪಿಸುವುದಷ್ಟೇ ಅಲ್ಲ, ಭಕ್ತರ ಪ್ರಶಂಸೆಗೂ ಆಟೋ ಚಾಲಕರು ಪಾತ್ರರಾಗಿದ್ದಾರೆ.‌ ಇದರ ಜೊತೆಗೆ ಬಂದ ಭಕ್ತರಿಗೆ ಉಪಹಾರ ನೀಡುತ್ತಿರುವುದು ವಿಶೇಷವಾಗಿದೆ.
  3. ಅಲ್ಲದೆ ಕಳೆದೆರಡೂ ವರ್ಷಗಳಿಂದ ಕೊರೊನಾ ಮಾಹಮಾರಿಯಿಂದ ಸಿದ್ಧಾರೂಢರ ಜಾತ್ರೆ ನಡೆದಿರಲಿಲ್ಲ. ಲಕ್ಷಾಂತರ ಜನ ಭಕ್ತರ ಆರಾಧ್ಯ ದೈವವಾಗಿದ್ಧ ಅಜ್ಜರ ದರ್ಶನ ಸಿಗದೇ ಸರಳ ಜಾತ್ರೆಯನ್ನ ಮಾಡಲಾಗಿತ್ತು. ಅಲ್ಲದೆ ಈ ಬಾರಿಯೂ ಕೊರೊನಾ ಮೂರನೇ ಅಲೆಯ ಆತಂಕ ಎದುರಾಗಿತ್ತು. ಆದ್ರೆ ಸದ್ಯಕ್ಕೆ ಕೊರೊನಾ ಆತಂಕ ದೂರವಾಗಿದ್ದು ಸಿದ್ದಾರೂಢ ಅಜ್ಜರ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ‌
  4. ಹೀಗಾಗೇ ನಿನ್ನೆಯಿಂದಲೇ ಹುಬ್ಬಳ್ಳಿಯತ್ತ ರಾಜ್ಯದ ನಾನಾ ಜಿಲ್ಲೆಗಳು ಹಾಗೂ ಹೊರ ರಾಜ್ಯದ ಭಕ್ತರು ಕೂಡಾ ಹುಬ್ಬಳ್ಳಿಯತ್ತ ಆಗಮಿಸುತ್ತಿದ್ದಾರೆ. ಅವರ ಅನೂಕುಲಕ್ಕಾಗಿಯೇ ಈ ತಂಡ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಹಾಗೂ ಚೆನ್ನಮ್ಮ ವೃತ್ತದ ಬಳಿಯಿಂದ ಸಿದ್ಧಾರೂಢರ ಮಠದವರೆಗೂ ಉಚಿತ ಆಟೋ ಸೇವೆ ನೀಡುತ್ತಿದೆ.‌ ಇದ್ರಿಂದ ಭಕ್ತರಿಗೆ ಕೂಡಾ ಖುಷಿ ಆಗುತ್ತಿದೆ. ಸರಿಯಾದ ಸಮಯಕ್ಕೆ ಉಚಿತವಾಗಿ ಮಠಕ್ಕೆ ಸುಮಾರು ನಾಲ್ಕರಿಂದ ಐದು ಕಿಲೋ ಮೀಟರ್ ಪ್ರಯಾಣವನ್ನ ಈ ತಂಡ ನೀಡುತ್ತಿದೆ. -ದತ್ತಾತ್ರೇಯ ಪಾಟೀಲ್

Published On - 1:42 pm, Tue, 1 March 22