Defamation case: ಜೆಡಿಎಸ್ ಶಾಸಕ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

| Updated By: ಸಾಧು ಶ್ರೀನಾಥ್​

Updated on: Feb 07, 2023 | 10:30 PM

Pralhad Joshi: ಇಂತಹ ಆಧಾರರಹಿತ ಆರೋಪಗಳನ್ನು ಗಂಭೀರವಾಗಿ ಎದುರಿಸಲಾಗುವುದು. ನನ್ನ ವ್ಯಕ್ತಿತ್ವದ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ - ಪ್ರಲ್ಹಾದ ಜೋಶಿ

Defamation case: ಜೆಡಿಎಸ್ ಶಾಸಕ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು
ಭೋಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ಪ್ರಲ್ಹಾದ ಜೋಶಿ ತಿರುಗೇಟು
Follow us on

ಬೆಂಗಳೂರು: ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ (JDS MLC) ಎಸ್.ಎಲ್. ಭೋಜೇಗೌಡರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು (Pralhad Joshi) ಪ್ರತಿಕ್ರಿಯಿಸಿದ್ದು, ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ (Defamation case) ಹೂಡುವುದಾಗಿ ಹೇಳಿದ್ದಾರೆ.

‘ಭೋಜೇಗೌಡರು ಪ್ರದರ್ಶಿಸಿರುವ ಪತ್ರ ವೈದ್ಯರೊಬ್ಬರಿಗೆ ಬರೆದಿರುವುದು, ನಾನು ವೈದ್ಯ ಅಲ್ಲ, ಹೀಗಾಗಿ ಅದು ನನಗೆ ಬರೆದ ಪತ್ರವಲ್ಲ, ಇನ್ನು ಅವರು ಆರೋಪಿಸಿದ ಹೆಸರಿನ ವ್ಯಕ್ತಿ ನನ್ನ ಕಚೇರಿಯಲ್ಲೂ ಇಲ್ಲ. ಅವರಿಗೆ ದಾಖಲೆಯ ಮೇಲೆ ವಿಶ್ವಾಸವಿದ್ದರೆ ಹೆಸರನ್ನು ಏಕೆ ಅಡಗಿಸುತ್ತಿದ್ದಾರೆ?’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಇಂತಹ ಆಧಾರರಹಿತ ಆರೋಪಗಳನ್ನು ಗಂಭೀರವಾಗಿ ಎದುರಿಸಲಾಗುವುದು. ನನ್ನ ವ್ಯಕ್ತಿತ್ವದ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದಿರುವ ಪ್ರಲ್ಹಾದ ಜೋಶಿಯವರು, ಈ ಹಿಂದೆ ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರು ಡಾ. ಬಿ.ಡಿ. ಪಾಂಡೆ ಎಂಬುವವರಿಗೆ ಬರೆದಿದ್ದ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಭೋಜೇಗೌಡರ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಕ್ಕ ತಿರುಗೇಟು ನೀಡಿದ್ದಾರೆ.