AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋಶಿ ವಿರುದ್ಧದ ಹೇಳಿಕೆಯನ್ನು ಕುಮಾರಸ್ವಾಮಿ ವಾಪಸ್ ಪಡೆಯದಿದ್ರೆ ಉಗ್ರ ಹೋರಾಟದ ಎಚ್ಚರಿಕೆ

ಪ್ರಹ್ಲಾದ್​ ಜೋಶಿ ವಿರುದ್ದ ಮಾತನಾಡಿದ ಹೇಳಿಕೆಯನ್ನ ವಾಪಾಸ್​ ತೆಗೆದುಕೊಳ್ಳದಿದ್ದರೆ ಕುಮಾರಸ್ವಾಮಿಯವರ ಅಣುಕು ಶವಯಾತ್ರೆ ಮಾಡಲಾಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಂಯೋಜಕ ಶಿವಣ್ಣ ಮುತ್ತಣ್ಣವರ್​ ಎಚ್ಚರಿಕೆ ನೀಡಿದ್ದಾರೆ.

ಜೋಶಿ ವಿರುದ್ಧದ  ಹೇಳಿಕೆಯನ್ನು ಕುಮಾರಸ್ವಾಮಿ ವಾಪಸ್  ಪಡೆಯದಿದ್ರೆ ಉಗ್ರ ಹೋರಾಟದ ಎಚ್ಚರಿಕೆ
ಪ್ರಹ್ಲಾದ್​ ಜೋಶಿ ವಿರುದ್ದ ಹೇಳಿಕೆ ವಿಚಾರವಾಗಿ ಕ್ಷಮೆ ಕೇಳದಿದ್ದರೆ ಕುಮಾರಸ್ವಾಮಿಯವರ ಅಣುಕು ಶವಯಾತ್ರೆ ಮಾಡಲಾಗುವುದು ಎಂದ ಬಿಜೆಪಿ ನಾಯಕರು
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 07, 2023 | 7:25 PM

Share

ಹುಬ್ಬಳ್ಳಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷದ ನಾಯಕರು ಮಾತಿನ ಯುದ್ದಕ್ಕೆ ಇಳಿದಿದ್ದಾರೆ. ಅದರಂತೆ ಕುಮಾರಸ್ವಾಮಿಯವರು ಪ್ರಹ್ಲಾದ್​ ಜೋಶಿ(Pralhad Joshi) ವಿರುದ್ದ ನೀಡಿದ ಹೇಳಿಕೆ ಇದೀಗ ಬಾರಿ ವಿರೋಧಕ್ಕೆ ಕಾರಣವಾಗಿದೆ. ಪೇಶ್ವೆಗೆ ಜೋಶಿ ಅವರನ್ನು ಹೋಲಿಕೆ ಮಾಡಿದ್ದು ಬಹಳ ಖಂಡನೀಯ, ಪ್ರಹ್ಲಾದ್ ಜೋಶಿ ನವಗ್ರಹ ಯಾತ್ರೆ ಮಾಡಿ ಅಂತಾ ಹೇಳಿದ್ದು ಸತ್ಯ, ಆದರೆ ಅದು ಶನಿಗ್ರಹ ಯಾತ್ರೆ ಆಗಬೇಕಿತ್ತು. ಕೇಂದ್ರ ಸಚಿವ ಜೋಶಿ ಸರಿಯಾದ ರೀತಿಯಲ್ಲಿ‌ ಮಾತನಾಡಿದ್ದಾರೆ. H​.D.ಕುಮಾರಸ್ವಾಮಿ(HD Kumaraswamy) ಆರೋಪ ಮಾಡಿರೋದು ಅಕ್ಷಮ್ಯ ಅಪರಾಧ ಆ ಹೇಳಿಕೆಯನ್ನ 1 ವಾರದಲ್ಲಿ ವಾಪಸ್ ಪಡೆಯದಿದ್ರೆ ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ಅಣುಕು ಶವಯಾತ್ರೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಂಯೋಜಕ ಶಿವಣ್ಣ ಮುತ್ತಣ್ಣವರ್​ ಹುಬ್ಬಳ್ಳಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಹೆಚ್​ಡಿ ಕುಮಾರಸ್ವಾಮಿ ಅವರ ಮಾತು ದೊಡ್ಡ ಸುದ್ದಿಯಾಗುತ್ತಿದ್ದಂತೆ ತೆಪೆ ಹಚ್ಚುವ ಕೆಲಸ ನಡೆಯುತ್ತಿದೆ. ‘ನಾನು ಪ್ರಲ್ಹಾದ್ ಜೋಶಿ ವಿರೋಧಿ ಅಲ್ಲ. ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ಚುನಾವಣೆಗೆ ಮೊದಲೇ ಘೋಷಣೆ ಮಾಡಲಿ. ನಾನು ಯಾವುದೇ ಸಮುದಾಯದ ವಿರೋಧಿ ಅಲ್ಲ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯಾರೊಬ್ಬರು ಮುಖ್ಯಮಂತ್ರಿಯಾಗಲೂ ನನ್ನ ವಿರೋಧವಿಲ್ಲ. ಮುಖ್ಯಮಂತ್ರಿಯಾಗಲು ಅರ್ಹತೆ ಇರುವವರು ಬ್ರಾಹ್ಮಣರಲ್ಲೂ ಇದ್ದಾರೆ’ ಎಂದು ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಚುನಾವಣೆ ಮುಗಿದ ಮೇಲೆ ಪ್ರಲ್ಹಾದ್ ಜೋಶಿ ಸಿಎಂ ಆಗುತ್ತಾರೆಂಬ ಮಾಹಿತಿ ನನಗೆ ಸಿಕ್ಕಿದೆ. ಬಿಜೆಪಿ ಸರ್ಕಾರದಲ್ಲಿ 8 ಮಂದಿಯನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆಯೂ ಚರ್ಚೆಯಾಗಿದೆ. ಆ 8 ಜನ ಯಾರು ಎಂಬುದೂ ನನಗೆ ಗೊತ್ತಿದೆ ಎಂದರು.

ಇದನ್ನೂ ಓದಿ:ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಎಂದು ಹೇಳಿಲ್ಲ, ಅವರ ಹಿನ್ನೆಲೆ ಹೇಳಿದ್ದೇನೆ ಅಷ್ಟೇ: ಕುಮಾರಸ್ವಾಮಿ ಸ್ಪಷ್ಟನೆ

ನಾನು ಪ್ರಲ್ಹಾದ ಜೋಶಿ ಅವರ ಹೆಸರು ಪ್ರಸ್ತಾಪಿಸಲು ಮುಖ್ಯ ಕಾರಣ ಅವರು ಬ್ರಾಹ್ಮಣರು ಎಂಬುದಲ್ಲ. ಶೃಂಗೇರಿ ಮಠ ಒಡೆದ ಹಾಗೂ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ವರ್ಗದ ಡಿಎನ್​ಎ ಹೊಂದಿರುವ ಬ್ರಾಹ್ಮಣ ವಂಶಕ್ಕೆ ಸೇರಿದವರು ಅವರು. ನಮ್ಮ ಕರ್ನಾಟಕದ ಬ್ರಾಹ್ಮಣರು ಅತ್ಯಂತ ಸಂಸ್ಕೃತಿ ಹೊಂದಿದವರು. ನನಗೆ ಬಿಜೆಪಿ  ಇಕಟ್ಟಿಗೆ ಸಿಲುಕಿಸಬೇಕು ಅನ್ನೋದಲ್ಲ. ನಾಡಿನ ಜನರು ಇಕ್ಕಟ್ಟಿಗೆ ಸಿಲುಕಬಾರದು ಎಂಬುದು ಮುಖ್ಯ ಉದ್ದೇಶ’ ಎಂದು ಕುಮಾರಸ್ವಾಮಿ ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ