Mangaluru fine collection: ದಂಡ ಪಾವತಿಸಲು 50% ರಿಯಾಯಿತಿ; ಮಂಗಳೂರಿನಲ್ಲಿ ಎರಡು ದಿನದಲ್ಲಿ 4.69 ಲಕ್ಷ ರೂ. ದಂಡ ಸಂಗ್ರಹ

ಮಂಗಳೂರು ಭಾಗದಲ್ಲೂ 50 ರಷ್ಟು ರಿಯಾಯಿತಿಯನ್ನು ಪಡೆದಿದ್ದು, 4, 69, 050ಗಳಷ್ಟು ದಂಡವನ್ನು ಸಂಗ್ರಹಿಸಿದ್ದಾರೆ ಮತ್ತು 1929 ಪ್ರಕರಣಗಳನ್ನು ತೆರವುಗೊಳಿಸಿದ್ದಾರೆ ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.

Mangaluru fine collection: ದಂಡ ಪಾವತಿಸಲು 50% ರಿಯಾಯಿತಿ; ಮಂಗಳೂರಿನಲ್ಲಿ ಎರಡು ದಿನದಲ್ಲಿ 4.69 ಲಕ್ಷ ರೂ. ದಂಡ ಸಂಗ್ರಹ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 07, 2023 | 7:01 PM

ಮಂಗಳೂರು: ಬಾಕಿ ಉಳಿದಿರುವ ಟ್ರಾಫಿಕ್ ದಂಡದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಘೋಷಿಸಿದ ನಾಲ್ಕು ದಿನಗಳಲ್ಲಿ ಬೆಂಗಳೂರು ಸಂಚಾರಿ ಪೊಲೀಸರು 25.42 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ ಮತ್ತು 7,41,048 ಪ್ರಕರಣಗಳನ್ನು ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮಂಗಳೂರು ಭಾಗದಲ್ಲೂ 50 ರಷ್ಟು ರಿಯಾಯಿತಿಯನ್ನು ಪಡೆದಿದ್ದು, 4, 69, 050ಗಳಷ್ಟು ದಂಡವನ್ನು ಸಂಗ್ರಹಿಸಿದ್ದಾರೆ ಮತ್ತು 1929 ಪ್ರಕರಣಗಳನ್ನು ತೆರವುಗೊಳಿಸಿದ್ದಾರೆ ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.

ಮೈಸೂರು ಭಾಗದಲ್ಲಿ 47 ಲಕ್ಷದಷ್ಟು ಈ ಹಿಂದೆ ಸಂಗ್ರಹ ಮಾಡಲಾಗಿದೆ ಹಾಗೂ 22,362 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ. ಮಂಗಳೂರಿನಲ್ಲಿ ಎರಡು ದಿನದಲ್ಲಿ ಒಟ್ಟು 4.69ಲಕ್ಷ ರೂ. ದಂಡ ಸಂಗ್ರಹವಾಗಿದೆ. ಫೆ.5ರಂದು ಮಂಗಳೂರಿನ ಸಂಚಾರ ಪೂರ್ವ ಭಾಗದಲ್ಲಿ ಒಟ್ಟು 145 ಪ್ರಕರಣಗಳನ್ನು ತೆರವು ಮಾಡಲಾಗಿದೆ 39,700 ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ. ಇನ್ನೂ ಸಂಚಾರ ಪಶ್ಚಿಮ ಭಾಗದಲ್ಲಿ 42 ಕೇಸ್​ಗಳನ್ನು ತೆರವು ಮಾಡಲಾಗಿದೆ. 10,500 ರೂ. ದಂಡ ಸಂಗ್ರಹವಾಗಿದೆ. ಸಂಚಾರ ಉತ್ತರ ಭಾಗದಲ್ಲಿ 74 ಪ್ರಕರಣಗಳನ್ನು ಖುಲಾಸೆ ಮಾಡಲಾಗಿದ್ದು, 38,800 ರೂ ದಂಡ ವಸೂಲಿಯಾಗಿದೆ. ಸಂಚಾರ ದಕ್ಷಿಣ ಭಾಗದಲ್ಲಿ 201 ಪ್ರಕರಣಗಳನ್ನು ತೆಗೆದು ಹಾಕಲಾಗಿದೆ. ಇದರ ಜೊತೆಗೆ 58,800 ದಂಡವನ್ನು ಸಂಗ್ರಹಿಸಲಾಗಿದೆ. ಒಟ್ಟು ಒಂದೇ ದಿನದಲ್ಲಿ 1.71ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಂಗಳೂರು ಸಂಚಾರಿ ಪೊಲೀಸ್ ಇಲಾಖೆ ತಿಳಿಸಿದೆ.

ಇನ್ನೂ ಫೆ.6ರಂದು ಮಂಗಳೂರಿನ ಸಂಚಾರ ಪೂರ್ವ ಭಾಗದಲ್ಲಿ ಒಟ್ಟು 459 ಪ್ರಕರಣಗಳನ್ನು ತೆರವು ಮಾಡಲಾಗಿದೆ 1,23,850ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ. ಇನ್ನೂ ಸಂಚಾರ ಪಶ್ಚಿಮ ಭಾಗದಲ್ಲಿ 300 ಕೇಸ್​ಗಳನ್ನು ತೆರವು ಮಾಡಲಾಗಿದೆ. 76,500ರೂ. ದಂಡ ಸಂಗ್ರಹವಾಗಿದೆ. ಸಂಚಾರ ಉತ್ತರ ಭಾಗದಲ್ಲಿ 348 ಪ್ರಕರಣಗಳನ್ನು ಖುಲಾಸೆ ಮಾಡಲಾಗಿದ್ದು, 88,050ರೂ ದಂಡ ವಸೂಲಿಯಾಗಿದೆ. ಸಂಚಾರ ದಕ್ಷಿಣ ಭಾಗದಲ್ಲಿ 316 ಪ್ರಕರಣಗಳನ್ನು ತೆಗೆದು ಹಾಕಲಾಗಿದೆ. ಇದರ ಜೊತೆಗೆ 86,350 ದಂಡವನ್ನು ಸಂಗ್ರಹಿಸಲಾಗಿದೆ. ಒಟ್ಟು ಒಂದೇ ದಿನದಲ್ಲಿ 4.58 ಲಕ್ಷ ರೂ. ಸಂಗ್ರಹವಾಗಿದೆ.

ಇದನ್ನೂ ಓದಿ: ಟ್ರಾಫಿಕ್ ದಂಡ ಪಾವತಿಗೆ 50% ರಿಯಾಯಿತಿ, ನಾಲ್ಕು ದಿನದಲ್ಲಿ 25 ಕೋಟಿ ದಂಡ ಪಾವತಿ

Traffic East PS 319 cases – ₹ 88,100

Traffic West PS 375 cases – ₹ 92950

Traffic North PS 384 cases – ₹ 79750

Traffic South PS 654 cases – ₹158300

ACP Traffic 36 cases – ₹ 8450

Mangaluru One 161 cases – ₹ 41500

Total 1929 cases – ₹ 4, 69, 050

ಮಂಗಳೂರಿನಲ್ಲಿ 50%ದಷ್ಟು ದಂಡವನ್ನು ಸಂಗ್ರಹ ಮಾಡಲಾಗಿದ್ದು, ಇದೀಗ ಜನ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ, ಒಟ್ಟು 4.69 ಲಕ್ಷ ರೂ.ಗಳು ಸಂಗ್ರಹವಾಗಿದೆ. ಇದೀಗ ಇನ್ನೂ ಜನರು ಬಂದು ದಂಡವನ್ನು ಪಾವತಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

2022 ರಲ್ಲಿ ಹೈದರಾಬಾದ್ ಟ್ರಾಫಿಕ್ ಪೊಲೀಸರು ಇದೇ ರೀತಿಯ ರಿಯಾಯಿತಿ ಕೊಡುಗೆಯನ್ನು ನೀಡಿದ್ದರು ಮತ್ತು ಇದು ಸಂಚಾರ ನಿಯಮ ಉಲ್ಲಂಘಿಸುವವರಿಂದ ಬಾಕಿ ಉಳಿದಿರುವ ದಂಡವನ್ನು ಸಂಗ್ರಹಿಸುವಲ್ಲಿ ಭಾರಿ ಯಶಸ್ಸನ್ನು ಕಂಡಿತ್ತು. ಇದೀಗ ಬೆಂಗಳೂರಿನಲ್ಲೂ ಈ ಅಸ್ತ್ರವನ್ನು ಪ್ರಯೋಗಿಸಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ರಿಯಾಯಿತಿ ಮೇಲೆ ದಂಡ ಪಾವತಿಸಲು ಫೆ.11ರವರೆಗೆ ಕಾಲವಕಾಶ ಇದ್ದು, ಒಟ್ಟು ಎಷ್ಟು ಸಂಗ್ರಹವಾಗಲಿದೆ ಎಂಬುದನ್ನು ನೋಡಬೇಕಿದೆ.

Published On - 7:01 pm, Tue, 7 February 23

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ