AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸೌತ್ ವೆಸ್ಟರ್ನ್ ರೈಲು ವಿಭಾಗ ನವೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ 2 ಕೋಟಿ ರೂ.! ಇಲ್ಲಿದೆ ವಿವರ

Indian Railway: ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 6,910 ಪ್ರಕರಣ ದಾಖಲಿಸಿದ್ದ ಇಲಾಖೆ 44,93,765 ರೂಪಾಯಿ ದಂಡ ಸಂಗ್ರಹಿಸಿತ್ತು. ಈ ಬಾರಿ, ಏಪ್ರೀಲ್ ಬಳಿಕ ನವೆಂಬರ್ ತಿಂಗಳ ವರೆಗೆ ಇಲಾಖೆ ಒಟ್ಟು 1,66,983 ಪ್ರಕರಣ ದಾಖಲು ಮಾಡಿ 9,33,42,980 ರೂಪಾಯಿ ದಂಡ ಸಂಗ್ರಹಿಸಿದೆ.

ಬೆಂಗಳೂರು ಸೌತ್ ವೆಸ್ಟರ್ನ್ ರೈಲು ವಿಭಾಗ ನವೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ 2 ಕೋಟಿ ರೂ.! ಇಲ್ಲಿದೆ ವಿವರ
ಸಂಗ್ರಹ ಚಿತ್ರ
TV9 Web
| Edited By: |

Updated on: Dec 07, 2021 | 5:52 PM

Share

ಬೆಂಗಳೂರು: ಇಲ್ಲಿನ ಸೌತ್ ವೆಸ್ಟರ್ನ್ ರೈಲು ವಿಭಾಗ ಟಿಕೆಟ್ ರಹಿತ ಪ್ರಯಾಣಕ್ಕೆ ಸಂಬಂಧಿಸಿ ನವೆಂಬರ್ ತಿಂಗಳು ಒಂದರಲ್ಲೇ ಒಟ್ಟು 38,479 ಪ್ರಕರಣಗಳನ್ನು ದಾಖಲಿಸಿದೆ. ಹಾಗೂ ಆ ಮೂಲಕ, 2,18,73,555 ರೂಪಾಯಿ ಮೊತ್ತದ ದಂಡ ಸಂಗ್ರಹಿಸಿದೆ. ಈ ಬಾರಿಯ ಹಣಕಾಸು ವರ್ಷದಲ್ಲಿ ಇದು ಮೊದಲ ಬಾರಿಗೆ ಈ ರೈಲ್ವೇ ವಿಭಾಗ 2 ಕೋಟಿಗೂ ಅಧಿಕ ದಂಡ ಸಂಗ್ರಹಿಸಿರುವುದಾಗಿದೆ.

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 6,910 ಪ್ರಕರಣ ದಾಖಲಿಸಿದ್ದ ಇಲಾಖೆ 44,93,765 ರೂಪಾಯಿ ದಂಡ ಸಂಗ್ರಹಿಸಿತ್ತು. ಈ ಬಾರಿ, ಏಪ್ರೀಲ್ ಬಳಿಕ ನವೆಂಬರ್ ತಿಂಗಳ ವರೆಗೆ ಇಲಾಖೆ ಒಟ್ಟು 1,66,983 ಪ್ರಕರಣ ದಾಖಲು ಮಾಡಿ 9,33,42,980 ರೂಪಾಯಿ ದಂಡ ಸಂಗ್ರಹಿಸಿದೆ.

ರೈಲ್ವೇ ಆಕ್ಟ್ 1989 ರ ಸೆಕ್ಷನ್ 138 ರ ಪ್ರಕಾರ, ಅಗತ್ಯ ಟಿಕೆಟ್ ಅಥವಾ ಪಾಸ್ ಇಲ್ಲದೆ ಯಾವುದೇ ಪ್ರಯಾಣಿಕ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಅಪರಾಧ ಆಗಿದೆ. ಅದಕ್ಕೆ ಸುಮಾರು 250 ರೂಪಾಯಿಗಳಂತೆ ದಂಡ ಹಾಕಲಾಗುತ್ತದೆ. ಜೊತೆಗೆ, ಈ ಬಾರಿ ಮಾಸ್ಕ್ ಧರಿಸದ ಕಾರಣ 214 ಪ್ರಕರಣ ದಾಖಲಿಸಿಕೊಂಡು 57,750 ರೂಪಾಯಿ, ರೈಲು ನಿಲ್ದಾಣದಲ್ಲಿ ಧೂಮಪಾನ ಮಾಡಿರುವುದಕ್ಕೆ 3 ಪ್ರಕರಣ ದಾಖಲಿಸಿ 600 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಕಸ ಹಾಕಿರುವುದಕ್ಕೆ 35 ಪ್ರಕರಣ ದಾಖಲಿಸಿ 9,200 ರೂಪಾಯಿ ದಂಡ ಸಂಗ್ರಹಿಸಲಾಗಿದೆ.

Railway Fine Collection details

ದಂಡದ ವಿವರ ಇಲ್ಲಿದೆ

ಇದನ್ನೂ ಓದಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯ ಸಾಧಕ ಬಾಧಕ ಬಗ್ಗೆ ಮೌಲ್ಯಮಾಪನಕ್ಕೆ ಹೈಕೋರ್ಟ್ ಸೂಚನೆ

ಇದನ್ನೂ ಓದಿ: Cyclone Jawad: ಜವಾದ್ ಚಂಡಮಾರುತದ ಭೀತಿ; ಕರ್ನಾಟಕದ 12 ರೈಲುಗಳ ಸೇವೆ ಸ್ಥಗಿತ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ