ಬೆಂಗಳೂರಿನಲ್ಲಿ ಸರಣಿ ಅಪಘಾತ: ಕಾರು, ಎರಡು ಆಟೋ, ಮಿನಿ ಲಾರಿ ನಡುವೆ ಡಿಕ್ಕಿ; ಓರ್ವ ಸಾವು
Bengaluru News: ಕಾರು, ಎರಡು ಆಟೋ, ಮಿನಿ ಲಾರಿ ನಡುವೆ ಡಿಕ್ಕಿ ಆಗಿದೆ. ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಹಲಸೂರು ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ನಗರದಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿನ ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಕಾರು, ಎರಡು ಆಟೋ, ಮಿನಿ ಲಾರಿ ನಡುವೆ ಡಿಕ್ಕಿ ಆಗಿದೆ. ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಹಲಸೂರು ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಂದಿತಾ ಚೌಂದ್ರಿ ಎಂಬುವವರಿಗೆ ಸೇರಿದ್ದ ಬೆನ್ಜ್ ಕಾರಿನಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಬೆನ್ಜ್ ಕಾರಿನ ಚಾಲಕನ ಅತಿ ವೇಗದಿಂದಲೇ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮೃತರ ಮಾಹಿತಿ ಲಭ್ಯ ಅಗಿಲ್ಲ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಸ್ಥಳಕ್ಕೆ ಇಂದಿರಾನಗರ ಪೊಲೀಸರು ದೌಡಾಯಿಸಿದ್ದಾರೆ.
ಬೈಕ್ ಬಿಎಂಟಿಸಿ ಬಸ್ ಡಿಕ್ಕಿ; ಸವಾರ ಸಾವು ಬೆಂಗಳೂರಲ್ಲಿ ಬೈಕ್ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಓಕಳಿಪುರಂನ ಲೂಲೂ ಮಾರ್ಟ್ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸವಾರ ವಿಶ್ವ(25) ಎಂಬವರು ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಾಟರ್ ಟ್ಯಾಂಕರ್ ಹರಿದು ಸವಾರ ಸಾವು ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಹರಿದು ಸವಾರ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಹೆಚ್ಎಸ್ಆರ್ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ವಾಟರ್ ಟ್ಯಾಂಕ್ ಪಕ್ಕದಲ್ಲೇ ತೆರಳುತ್ತಿದ್ದ ಬೈಕ್ ಸವಾರ, ಈ ವೇಳೆ ಟ್ಯಾಂಕರ್ ಚಾಲಕ ದಿಢೀರ್ ಎಡಕ್ಕೆ ತಿರುಗಿಸಿದ್ದಾನೆ. ಟ್ಯಾಂಕರ್ ಟಚ್ ಆಗಿ ಫುಟ್ಪಾತ್ಗೆ ತಾಗಿ ಬಿದ್ದ ಸವಾರ ಟ್ಯಾಂಕರ್ ಚಕ್ರ ತಲೆ ಮೇಲೆ ಹರಿದು ಸಾವನ್ನಪ್ಪಿದ್ದಾನೆ.
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಪುಂಡರಿಂದ ಹಲ್ಲೆ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಪುಂಡರಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಬೆಟ್ಟಹಳ್ಳಿಯಲ್ಲಿ ಸೋಮವಾರ ನಡೆದಿದೆ. ಸಬ್‌ಇನ್ಸ್‌ಪೆಕ್ಟರ್ ಸೇರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಪುಂಡರು ಪೊಲೀಸರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಗುಂಡಿ ಬಿದ್ದಿದ್ದರಿಂದ ಒಂದು ಕಡೆ ರಸ್ತೆ ಬ್ಲಾಕ್ ಮಾಡಿದ್ದರು. ಹೀಗಾಗಿ ಒನ್ ವೇನಲ್ಲಿ ಬಂದಿದ್ದ ಬೈಕ್ ಸವಾರರನ್ನು ನೈಟ್ ರೌಂಡ್ಸ್‌ನಲ್ಲಿದ್ದ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಪೊಲೀಸರು, ವ್ಯಕ್ತಿಯ ನಡುವೆ ಮಾತುಕತೆ ನಡೆದು ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಪಿಎಸ್‌ಐ ಶ್ರೀಶೈಲರಿಂದ ದೂರು ಸಲ್ಲಿಸಲಾಗಿದೆ. ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆರೆ ಏರಿಗೆ ಶಾಲಾ ವಾಹನ ಡಿಕ್ಕಿ; 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ಇದನ್ನೂ ಓದಿ: ಚಿಕ್ಕಮಗಳೂರು: ಸಿದ್ದರಾಮಯ್ಯ ಬೆಂಗಾವಾಲು ವಾಹನ ಅಪಘಾತ
Published On - 4:10 pm, Tue, 7 December 21