ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕೆರೆ ಏರಿಗೆ ಶಾಲಾ ವಾಹನ ಡಿಕ್ಕಿ ಆದ ದುರ್ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ. ಶಾಲಾ ವಾಹನದಲ್ಲಿದ್ದ 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯವಾಗಿದೆ. ಮಕ್ಕಳನ್ನು ಶಾಲೆಯಿಂದ ವಾಪಸ್ ಕರೆದೊಯ್ಯುವಾಗ ಘಟನೆ ನಡೆದಿದೆ. ಗಾಯಾಳು ಮಕ್ಕಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಹರಿದು ಸವಾರ ಸಾವು ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಹರಿದು ಸವಾರ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಹೆಚ್ಎಸ್ಆರ್ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ವಾಟರ್ ಟ್ಯಾಂಕ್ ಪಕ್ಕದಲ್ಲೇ ತೆರಳುತ್ತಿದ್ದ ಬೈಕ್ ಸವಾರ, ಈ ವೇಳೆ ಟ್ಯಾಂಕರ್ ಚಾಲಕ ದಿಢೀರ್ ಎಡಕ್ಕೆ ತಿರುಗಿಸಿದ್ದಾನೆ. ಟ್ಯಾಂಕರ್ ಟಚ್ ಆಗಿ ಫುಟ್ಪಾತ್ಗೆ ತಾಗಿ ಬಿದ್ದ ಸವಾರ ಟ್ಯಾಂಕರ್ ಚಕ್ರ ತಲೆ ಮೇಲೆ ಹರಿದು ಸಾವನ್ನಪ್ಪಿದ್ದಾನೆ.
ಶಿವಮೊಗ್ಗ: ಕೌತಿ ಗ್ರಾಮದ ಬಳಿ ರೈಲಿಗೆ ಸಿಲುಕಿ ಯುವತಿ ಸಾವು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೌತಿ ಗ್ರಾಮದ ಬಳಿ ರೈಲಿಗೆ ಸಿಲುಕಿ ಯುವತಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಸಾಗರ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕೋಲಾರ: ಬೈಕ್‌ನಲ್ಲಿಟ್ಟಿದ್ದ ಎರಡೂವರೆ ಲಕ್ಷ ರೂಪಾಯಿ ಕಳ್ಳತನ ಬೈಕ್‌ನಲ್ಲಿಟ್ಟಿದ್ದ ಎರಡೂವರೆ ಲಕ್ಷ ರೂಪಾಯಿ ಕಳ್ಳತನ ಮಾಡಿದ ಘಟನೆ ಕೋಲಾರ ನಗರದ ಆಚಾರ್ ಪೇಟೆಯಲ್ಲಿ ನಡೆದಿದೆ. ಎಸ್‌ಬಿಐನಿಂದ ಹಣ ಡ್ರಾ ಮಾಡಿದ್ದ ಶಿವಕುಮಾರ್, ಬೈಕ್‌ನಲ್ಲಿ ಹಣವಿಟ್ಟು ತರಕಾರಿ ಖರೀದಿಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಬೈಕ್‌ನಲ್ಲಿದ್ದ ಹಣ ಎಗರಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಪುಂಡರಿಂದ ಹಲ್ಲೆ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಪುಂಡರಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಬೆಟ್ಟಹಳ್ಳಿಯಲ್ಲಿ ಸೋಮವಾರ ನಡೆದಿದೆ. ಸಬ್‌ಇನ್ಸ್‌ಪೆಕ್ಟರ್ ಸೇರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಪುಂಡರು ಪೊಲೀಸರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಗುಂಡಿ ಬಿದ್ದಿದ್ದರಿಂದ ಒಂದು ಕಡೆ ರಸ್ತೆ ಬ್ಲಾಕ್ ಮಾಡಿದ್ದರು. ಹೀಗಾಗಿ ಒನ್ ವೇನಲ್ಲಿ ಬಂದಿದ್ದ ಬೈಕ್ ಸವಾರರನ್ನು ನೈಟ್ ರೌಂಡ್ಸ್‌ನಲ್ಲಿದ್ದ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಪೊಲೀಸರು, ವ್ಯಕ್ತಿಯ ನಡುವೆ ಮಾತುಕತೆ ನಡೆದು ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಪಿಎಸ್‌ಐ ಶ್ರೀಶೈಲರಿಂದ ದೂರು ಸಲ್ಲಿಸಲಾಗಿದೆ. ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Andhra Pradesh: ತಿರುಪತಿ ಸಮೀಪ ಭೀಕರ ಅಪಘಾತ; ಶಿಶು ಸೇರಿ 6 ಮಂದಿ ದುರ್ಮರಣ
ಇದನ್ನೂ ಓದಿ: ಚಿಕ್ಕಮಗಳೂರು: ಸಿದ್ದರಾಮಯ್ಯ ಬೆಂಗಾವಾಲು ವಾಹನ ಅಪಘಾತ