ಏರ್‌ಪೋರ್ಟ್‌ಗಳಲ್ಲಿ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿಪಡಿಸಿ ಆದೇಶ; ವಿವರ ಇಲ್ಲಿದೆ

Coronavirus Test: ICMR ಪ್ರಮಾಣಿತ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ದರ ನಿಗದಿಗೊಳಿಸಿ ಆರೋಗ್ಯ ಇಲಾಖೆಯಿಂದ ಆದೇಶ ನೀಡಲಾಗಿದೆ.

ಏರ್‌ಪೋರ್ಟ್‌ಗಳಲ್ಲಿ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿಪಡಿಸಿ ಆದೇಶ; ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಏರ್‌ಪೋರ್ಟ್‌ಗಳಲ್ಲಿ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿ ಮಾಡಲಾಗಿದೆ. ICMR ಪ್ರಮಾಣಿತ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ದರ ನಿಗದಿಗೊಳಿಸಿ ಆರೋಗ್ಯ ಇಲಾಖೆಯಿಂದ ಆದೇಶ ನೀಡಲಾಗಿದೆ. ಆರ್‌ಟಿಪಿಸಿಆರ್ ಟೆಸ್ಟ್‌ಗೆ 500 ರೂಪಾಯಿ ನಿಗದಿ ಮಾಡಲಾಗಿದ್ದು, ಅಬಾಟ್ ಐಡಿ ಟೆಸ್ಟ್‌ಗೆ 3,000 ರೂಪಾಯಿ ನಿಗದಿ ಮಾಡಲಾಗಿದೆ. ಥರ್ಮೋ ಫಿಶರ್ ಅಕ್ಯುಲಾ ಟೆಸ್ಟ್‌ಗೆ 1,500 ರೂಪಾಯಿ, ಟಾಟಾ ಎಂಡಿ3 ಜೆನ್ ಫಾಸ್ಟ್‌ ಟೆಸ್ಟ್‌ಗೆ 1,200 ರೂಪಾಯಿ ಹಾಗೂ ಸೆಫೀಡ್ಸ್‌ಜೀನ್ ಎಕ್ಸ್‌ಪರ್ಟ್ ಟೆಸ್ಟ್‌ಗೆ 2,750 ರೂಪಾಯಿ ನಿಗದಿಪಡಿಸಲಾಗಿದೆ.

ಕರ್ನಾಟಕ ಕೊರೊನಾ ಪ್ರಕರಣಗಳ ವಿವರ ಕರ್ನಾಟಕ ರಾಜ್ಯದಲ್ಲಿ ಇಂದು (ಡಿಸೆಂಬರ್ 7) ಹೊಸದಾಗಿ 299 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,98,699 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,53,327 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,243 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,100 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 215 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,57,875 ಕ್ಕೆ ಏರಿಕೆಯಾಗಿದೆ. 12,57,875 ಸೋಂಕಿತರ ಪೈಕಿ 12,36,229 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 3 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,351 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 5,294 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಾಗಲಕೋಟೆ 0, ಬಳ್ಳಾರಿ 3, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 215, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 4, ಚಿತ್ರದುರ್ಗ 0, ದಕ್ಷಿಣ ಕನ್ನಡ 14, ದಾವಣಗೆರೆ 0, ಧಾರವಾಡ 6, ಗದಗ 0, ಹಾಸನ 6, ಹಾವೇರಿ 0, ಕಲಬುರಗಿ 1, ಕೊಡಗು 12, ಕೋಲಾರ 2, ಕೊಪ್ಪಳ 0, ಮಂಡ್ಯ 2, ಮೈಸೂರು 11, ರಾಯಚೂರು 0, ರಾಮನಗರ 0, ಶಿವಮೊಗ್ಗ 4, ತುಮಕೂರು 4, ಉಡುಪಿ 3, ಉತ್ತರ ಕನ್ನಡ 5, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಮುಂದಿನ ಕೊರೊನಾ ರೂಪಾಂತರಿ ವೈರಸ್ ಹೆಚ್ಚು ಮಾರಕ, ಸಾಂಕ್ರಾಮಿಕವಾಗಿರಲಿದೆ; ಆಕ್ಸ್​ಫರ್ಡ್​ ವಿಜ್ಞಾನಿ ಎಚ್ಚರಿಕೆ

ಇದನ್ನೂ ಓದಿ: ವಾರದಿಂದ ವಾರಕ್ಕೆ ತನ್ನ ಓಟ ಹೆಚ್ಚಿಸಿದ ಮಹಾಮಾರಿ; ಕೊರೊನಾಗೆ ಈ ಬಾರಿ ಮಕ್ಕಳೇ ಹೆಚ್ಚು ಟಾರ್ಗೆಟ್

Published On - 7:09 pm, Tue, 7 December 21

Click on your DTH Provider to Add TV9 Kannada