ಮುಂದಿನ ಕೊರೊನಾ ರೂಪಾಂತರಿ ವೈರಸ್ ಹೆಚ್ಚು ಮಾರಕ, ಸಾಂಕ್ರಾಮಿಕವಾಗಿರಲಿದೆ; ಆಕ್ಸ್​ಫರ್ಡ್​ ವಿಜ್ಞಾನಿ ಎಚ್ಚರಿಕೆ

ಮುಂದಿನ ಕೊರೊನಾ ರೂಪಾಂತರಿ ವೈರಸ್ ಹೆಚ್ಚು ಮಾರಕ, ಸಾಂಕ್ರಾಮಿಕವಾಗಿರಲಿದೆ; ಆಕ್ಸ್​ಫರ್ಡ್​ ವಿಜ್ಞಾನಿ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ

ಒಮಿಕ್ರಾನ್ ವೈರಸ್​ಗಿಂತಲೂ ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಕೊವಿಡ್ ರೂಪಾಂತರಿಗಳಿಂದ ಜನರ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮಗಳಾಗಬಹುದು. ಕೊವಿಡ್ ರೂಪಾಂತರಿ ವೈರಸ್ ಹೆಚ್ಚು ಸಾಂಕ್ರಾಮಿಕ ಅಥವಾ ಹೆಚ್ಚು ಮಾರಣಾಂತಿಕವಾಗಬಹುದು ಎಂದು ಪ್ರೊ. ಗಿಲ್ಬರ್ಟ್ ಹೇಳಿದ್ದಾರೆ.

TV9kannada Web Team

| Edited By: Sushma Chakre

Dec 07, 2021 | 1:51 PM

ನವದೆಹಲಿ: ವಿಶ್ವಾದ್ಯಂತ ಕೊರೊನಾ (Coronavirus) ರೂಪಾಂತರಿಯಾದ ಒಮಿಕ್ರಾನ್ ವೈರಸ್​ (Omicron Virus) ವ್ಯಾಪಿಸುತ್ತಿದ್ದು, ಮತ್ತೊಮ್ಮೆ ಪ್ರಾಣಭೀತಿ ಎದುರಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿದೆ. ಈಗಾಗಲೇ ಕೊರೊನಾವೈರಸ್​ನ ಅನೇಕ ರೂಪಾಂತರಿ ವೈರಸ್​ಗಳು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳು ಈಗಿನ ಕೊವಿಡ್ ಬಿಕ್ಕಟ್ಟಿಗಿಂತ ಮಾನವಕುಲಕ್ಕೆ ಹೆಚ್ಚು ಮಾರಕವಾಗಬಹುದು ಎಂದು ಆಕ್ಸ್‌ಫರ್ಡ್ ವಿಜ್ಞಾನಿ (Oxford Scientist) ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್​ನಿಂದ ರಕ್ಷಿಸಲು ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ನಿರ್ವಹಿಸಲಾಗುತ್ತದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೆನ್ನರ್ ಇನ್‌ಸ್ಟಿಟ್ಯೂಟ್‌ನ ವ್ಯಾಕ್ಸಿನಾಲಜಿಯ ಪ್ರಾಧ್ಯಾಪಕ ಪ್ರೊಫೆಸರ್ ಸಾರಾ ಗಿಲ್ಬರ್ಟ್ ಅವರು ಹೊಸ ಒಮಿಕ್ರಾನ್ ರೂಪಾಂತರದ ವಿರುದ್ಧ ಲಸಿಕೆಗಳು ಕಡಿಮೆ ಪರಿಣಾಮಕಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಕೊವಿಡ್ ವೈರಸ್ ನಮ್ಮ ಜೀವಕ್ಕೆ ಬೆದರಿಕೆಯೊಡ್ಡುವ ಕೊನೆಯ ಸಮಯ ಇದಲ್ಲ. ಒಮಿಕ್ರಾನ್ ವೈರಸ್​ಗಿಂತಲೂ ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಕೊವಿಡ್ ರೂಪಾಂತರಿಗಳಿಂದ ಜನರ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮಗಳಾಗಬಹುದು. ಕೊವಿಡ್ ರೂಪಾಂತರಿ ವೈರಸ್ ಹೆಚ್ಚು ಸಾಂಕ್ರಾಮಿಕ ಅಥವಾ ಹೆಚ್ಚು ಮಾರಣಾಂತಿಕವಾಗಬಹುದು ಎಂದು ಪ್ರೊ. ಗಿಲ್ಬರ್ಟ್ ಹೇಳಿದ್ದಾರೆ.

ಕೊವಿಡ್​ಗಿಂತ ಮೊದಲು ಗಿಲ್ಬರ್ಟ್ ಅವರು ಮಲೇರಿಯಾ ಮತ್ತು ಇನ್​ಫ್ಲುಯೆನ್ಸ ಆ್ಯಂಟಿಜೆನ್ಸ್​ ಅನ್ನು ಬಳಸಿಕೊಂಡು 10 ವರ್ಷಗಳಿಗೂ ಹೆಚ್ಚು ಕಾಲ ಲಸಿಕೆಗಳ ಬಗ್ಗೆ ಅಧ್ಯಯನ ನಡೆಸಿದ್ದರು. 59 ವರ್ಷ ವಯಸ್ಸಿನ ತಜ್ಞರು BBCಯ 44ನೇ ರಿಚರ್ಡ್ ಡಿಂಬಲ್ಬಿ ಉಪನ್ಯಾಸವನ್ನು ನೀಡುತ್ತಿದ್ದರು. ಹಿರಿಯ ಬ್ರಿಟಿಷ್ ಪತ್ರಕರ್ತ ಮತ್ತು ಪ್ರಸಾರಕರ ಗೌರವಾರ್ಥವಾಗಿ ಹೆಸರಿಸಲಾಗಿದೆ.

ಭಾನುವಾರ ಇಂಗ್ಲೆಂಡ್​ನಲ್ಲಿ ಹೊಸ ಒಮಿಕ್ರಾನ್ ರೂಪಾಂತರದ 86 ಪ್ರಕರಣಗಳು ವರದಿಯಾಗಿದೆ. ಒಮಿಕ್ರಾನ್ ಸೋಂಕು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಯಿತು. ಈ ಮೂಲಕ ಒಮಿಕ್ರಾನ್ ಸೋಂಕಿನ ಸಂಖ್ಯೆ 246ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಒಟ್ಟು 43,992 ಕೊವಿಡ್ ಪ್ರಕರಣಗಳು ಮತ್ತು 54 ಸಾವುಗಳು ದಾಖಲಾಗಿವೆ.

ಇದನ್ನೂ ಓದಿ: ಒಮಿಕ್ರಾನ್​​ನಿಂದ ಭಾರತದಲ್ಲಿ ಕೊವಿಡ್​ 19 ಮೂರನೇ ಅಲೆ ಆತಂಕ; ಐಎಂಎಯಿಂದ ಎಚ್ಚರಿಕೆ

ದಕ್ಷಿಣ ಆಫ್ರಿಕಾದಷ್ಟು ಭಾರತದ ಮಕ್ಕಳ ಮೇಲೆ ಒಮಿಕ್ರಾನ್ ಪ್ರಭಾವ ಬೀರದು; ವಿಜ್ಞಾನಿಗಳಿಂದ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada