ವಾರದಿಂದ ವಾರಕ್ಕೆ ತನ್ನ ಓಟ ಹೆಚ್ಚಿಸಿದ ಮಹಾಮಾರಿ; ಕೊರೊನಾಗೆ ಈ ಬಾರಿ ಮಕ್ಕಳೇ ಹೆಚ್ಚು ಟಾರ್ಗೆಟ್
ಮಹಾಮಾರಿ ಕೊರೊನಾ ರಾಜ್ಯದಲ್ಲಿ ವಾರದಿಂದ ವಾರಕ್ಕೆ ತನ್ನ ಓಟ ಹೆಚ್ಚಿಸಿದೆ. ರಾಜ್ಯದಲ್ಲಿ ಮತ್ತೆ ಆರ್ಭಟದ ಮುನ್ಸೂಚನೆ ಕೊಟ್ಟಿರೋ ಕೊರೊನಾ ಶಾಲಾ-ಕಾಲೇಜುಗಳನ್ನೇ ಟಾರ್ಗೆಟ್ ಮಾಡಿ ಆಟ ಶುರುವಿಟ್ಟುಕೊಂಡಿದೆ.
ಬೆಂಗಳೂರು: ಒಂದ್ಕಡೆ ಒಮಿಕ್ರಾನ್ ಭಯ. ಇನ್ನೊಂದ್ಕಡೆ ಕೊರೊನಾ ಮೂರನೇ ಅಲೆ ಭೀತಿ. ಈ ಭಯ, ಭೀತಿ ನಡುವೆ ನಿಧಾನವಾಗಿ ಕೊರೊನಾ ಸೋಂಕಿನ ಅಬ್ಬರ ಶುರುವಾಗಿದೆ. ಅದ್ರಲ್ಲೂ ಶಾಲಾ ಕಾಲೇಜ್‌ಗಳನ್ನೇ ಟಾರ್ಗೆಟ್ ಮಾಡಿ ಕೊರೊನಾ ಸ್ಫೋಟವಾಗ್ತಿದೆ.
ಮಹಾಮಾರಿ ಕೊರೊನಾ ರಾಜ್ಯದಲ್ಲಿ ವಾರದಿಂದ ವಾರಕ್ಕೆ ತನ್ನ ಓಟ ಹೆಚ್ಚಿಸಿದೆ. ರಾಜ್ಯದಲ್ಲಿ ಮತ್ತೆ ಆರ್ಭಟದ ಮುನ್ಸೂಚನೆ ಕೊಟ್ಟಿರೋ ಕೊರೊನಾ ಶಾಲಾ-ಕಾಲೇಜುಗಳನ್ನೇ ಟಾರ್ಗೆಟ್ ಮಾಡಿ ಆಟ ಶುರುವಿಟ್ಟುಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಪ್ರತಿವಾರವೂ ಕೊರೊನಾ ಜೀಗಿತ ಕಾಣುತ್ತಿದೆ. ವಾರದಿಂದ ವಾರಕ್ಕೆ ಕೊರೊನಾ ಕೇಸ್ಗಳು ಏರಿಕೆಯಾಗುತ್ತಿವೆ. ನವೆಂಬರ್-1ನೇ ವಾರ-231 case average ನವೆಂಬರ್-2 ನೇ ವಾರ-258 case average (11.69% increased) ನವೆಂಬರ್-3ನೇ ವಾರ-247 case average (-4.26% decreased) ನವೆಂಬರ್-4th ನೇ ವಾರ-306 case average (23.89% increased) ಡಿಸೆಂಬರ್-1st ನೇ ವಾರ-390 Case Average ( 27.45% increased)
ಇನ್ನು ರಾಜ್ಯದಲ್ಲಿ 1 ರಿಂದ 10ನೆ ತರಗತಿವರೆಗಿನ ಒಟ್ಟು 130 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು, ಕೊಡಗು ಚಾಮರಾಜನಗರ ಜಿಲ್ಲೆಯಲ್ಲೇ ಹೆಚ್ಚು ಕೇಸ್ಗಳು ದಾಖಲಾಗಿವೆ. ಚಿಕ್ಕಮಗಳೂರು-92 ಕೇಸ್, ಕೊಡಗು-11, ಚಾಮರಾಜನಗರ-7, ಬೆಂಗಳೂರು ಉತ್ತರ-2, ಚಿತ್ರದುರ್ಗ-2, ಧಾರವಾಡ-2, ಗದಗ-1, ಹಾಸನ್-4, ಮಧುಗಿರಿ-5, ಮೈಸೂರು-2, ಶಿವಮೊಗ್ಗ-1, ಶಿರಸಿ-1. ಇನ್ನುಳಿದಂತೆ ಬಾಗಲಕೋಟೆ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಂತರ, ಬೆಳಗಾವಿ, ಬೆಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕೋಡಿ, ದಕ್ಷಿಣ ಕನ್ನಡ, ಹಾವೇರಿ, ಕಲ್ಬುರ್ಗಿ, ಕೋಲಾರ್, ಕೊಪ್ಪಳ, ಮಂಡ್ಯ ರಾಯಚೂರು, ರಾಮನಗರ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಮಹಾಮಾರಿಗೆ ಮಕ್ಕಳೇ ಟಾರ್ಗೆಟ್ ಪ್ರಪಂಚದಾದ್ಯಂತ ಹಿಂದಿನ ಅಲೆಗಳಲ್ಲಿ ಕೊವಿಡ್-19 ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಆದ್ರೆ, ಈಗ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಅದು ಕೂಡ ಒಮ್ರಿಕಾನ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲೂ ಮಕ್ಕಳ ಮೇಲೆ ಕೊರೊನಾ ಸವಾರಿ ಮಾಡ್ತಿದೆ. ಯಾಕಂದ್ರೆ, ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪೈಕಿ ಶೇಕಡಾ 10 ರಷ್ಟು ಮಕ್ಕಳೇ ಆಗಿದ್ದಾರಂತೆ. ಸೌತ್ ಆಫ್ರಿಕಾದ ತಹಸನೆ, ಪ್ರಿಟೋರಿಯಾ, ಜೋಹಾನ್ಸ್ ಬರ್ಗ್ನಲ್ಲಿ 1,511 ಕೊರೊನಾ ರೋಗಿಗಳ ಪೈಕಿ 113 ಮಂದಿ 9 ವರ್ಷದೊಳಗಿನ ಮಕ್ಕಳು ಎಂಬುದು ಮತ್ತೊಂದು ಆತಂಕಕಾರಿ ವಿಷ್ಯ ಆಗಿದೆ.
ಇದನ್ನೂ ಓದಿ: ಶಾಲೆಗಳಿಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಪ್ರಕಟಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಮನವಿ