Rape Case: ಮಲತಂದೆಯಿಂದ ಅತ್ಯಾಚಾರ; ಅಪ್ರಾಪ್ತೆ ಗರ್ಭವತಿ- ಆರೋಪಿಗೆ ಜೀವಾವಧಿ ಶಿಕ್ಷೆ

49 Year Old Man Gets Life Imprisonment: ಎರಡನೇ ಮದುವೆಯಾದ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ತನ್ನ ಮಲಮಗಳ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭವತಿಯನ್ನಾಗಿ ಮಾಡಿದ್ದಾನೆ. ಈ ಆರೋಪದ ಮೇಲೆ ಪೋಕ್ಸೋ ಕಾಯ್ದೆ ಅಡಿ ಆರೋಪಿ ಗಣೇಶ್ ನಾಯಕ್​ಗೆ ಜೀವಾವಧಿ ಶಿಕ್ಷೆ ಸಿಕ್ಕಿದೆ.

Rape Case: ಮಲತಂದೆಯಿಂದ ಅತ್ಯಾಚಾರ; ಅಪ್ರಾಪ್ತೆ ಗರ್ಭವತಿ- ಆರೋಪಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Feb 08, 2023 | 3:57 PM

ಮಂಗಳೂರು: ಮಲಮಗಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗುವಂತೆ ಮಾಡಿದ 49 ವರ್ಷದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಲಾಗಿದೆ. ಪೋಕ್ಸೋ ಕಾಯ್ದೆಗಳಡಿ ದಾಖಲಾದ ಈ ಪ್ರಕರಣದಲ್ಲಿ ಆರೋಪಿ ಗಣೇಶ್ ನಾಯಕ್​ಗೆ ಉಡುಪಿ ಜಿಲ್ಲಾ ಸೆಷನ್ಸ್ ಕೋರ್ಟ್ ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಿದೆ. ಆರೋಪಿಗೆ ಜೀವಾವಧಿ ಶಿಕ್ಷೆಯ ಜೊತೆಗೆ 10 ಸಾವಿರ ರೂ ದಂಡ ಕಟ್ಟುವಂತೆಯೂ ತಿಳಿಸಲಾಗಿದೆ. ಒಂದು ವೇಳೆ ದಂಡ ಪಾವತಿಸದೇ ಹೋದಲ್ಲಿ ಒಂದು ವರ್ಷ ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ. ಇಲ್ಲಿ ಜೀವಾವಧಿ ಶಿಕ್ಷೆ 15 ವರ್ಷದ್ದಾಗಿರುತ್ತದೆ.

ಆರೋಪಿ ಗಣೇಶ್ ನಾಯಕ್ ಸಂತ್ರಸ್ತೆಯ ತಾಯಿಯೊಂದಿಗೆ ಎರಡನೇ ವಿವಾಹವಾಗಿದ್ದು, ಮೂವರು ಒಟ್ಟಿಗೆ ವಾಸವಿರುತ್ತಾರೆ. 2021ರ ಅಕ್ಟೋಬರ್ ತಿಂಗಳಲ್ಲಿ ಪತ್ನಿ ಕೆಲಸದ ನಿಮಿತ್ತ ಬೇರೆ ಪಟ್ಟಣಕ್ಕೆ ಹೋದಾಗ ಮಲಮಗಳಿಗೆ ಮತ್ತುಬರುವ ಪಾನೀಯ ಕುಡಿಸಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ.

ಮೂರು ತಿಂಗಳ ಬಳಿಕ ಊರಿಗೆ ಮರಳಿದ ತಾಯಿಗೆ ತನ್ನ ಮಗಳು ಗರ್ಭಿಣಿಯಾಗಿರುವ ವಿಚಾರ ಗೊತ್ತಾಗುತ್ತದೆ. ಆಕೆಯನ್ನು ವಿಚಾರಿಸಿದಾಗ ಸಂತ್ರಸ್ತೆಯು ನಡೆದಿರುವ ವಿಷಯವನ್ನು ತಾಯಿ ಬಳಿ ಹೇಳಿಕೊಳ್ಳುತ್ತಾಳೆ. ಇದಾದ ಬಳಿಕ 2022ರ ಜನವರಿ ತಿಂಗಳಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ.

ಇದನ್ನೂ ಓದಿ: Gadag Police: ಪೊಲೀಸರಿಗೇ ಕಾಟ ಕೊಡುತ್ತಿದ್ದ ಗದಗ ಕುಖ್ಯಾತ ರೌಡಿಶೀಟರ್​, ಕೊನೆಗೂ ಹುಬ್ಬಳ್ಳಿಯಲ್ಲಿ ಅರೆಸ್ಟ್​, ಬಳ್ಳಾರಿ ಜೈಲಿಗೆ ರವಾನೆ

ಇದೇ ವೇಳೆ, ಕುತೂಹಲಕಾರಿ ಸಂಗತಿ ಎಂದರೆ ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಪ್ರತೀ ವರ್ಷ ಐಪಿಸಿ ಸೆಕ್ಷನ್ ಅಡಿ ದಾಖಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ 500 ಇದೆ. ಐದು ವರ್ಷಗಳಿಗೂ ಮುಂಚೆ ರಾಜ್ಯದಲ್ಲಿ ಪ್ರತೀ ವರ್ಷ ಒಂದು ಸಾವಿರಕ್ಕೂ ಹೆಚ್ಚು ರೇಪ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಈಗ ಐದು ವರ್ಷದಲ್ಲಿ ಪ್ರಕರಣಗಳು ಇಳಿಮುಖವಾಗಲು ಪ್ರಮುಖ ಕಾರಣ ಪೋಕ್ಸೋ ಕಾಯ್ದೆ. ಅಪ್ರಾಪ್ತರ ಮೇಲೆ ನಡೆಯುವ ಅಪರಾಧ ಪ್ರಕರಣಗಳನ್ನು ಪೋಕ್ಸೋ ಕಾಯ್ದೆ ಅಡಿ ದಾಖಲು ಮಾಡಲಾಗುತ್ತಿದೆ. ಹೀಗಾಗಿ, ಐಪಿಸಿ ಸೆಕ್ಷನ್ ಅಡಿ ದಾಖಲಾಗುವ ರೇಪ್ ಕೇಸ್ ಸಂಖ್ಯೆ ಕಡಿಮೆ ಇದೆ.

Published On - 3:57 pm, Wed, 8 February 23