ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಎಂದು ಹೇಳಿಲ್ಲ, ಅವರ ಹಿನ್ನೆಲೆ ಹೇಳಿದ್ದೇನೆ ಅಷ್ಟೇ: ಕುಮಾರಸ್ವಾಮಿ ಸ್ಪಷ್ಟನೆ

ಪ್ರಹ್ಲಾದ್ ಜೋಶಿಯವರು ಮುಖ್ಯಮಂತ್ರಿ ಆಗಬಾರದು ಎಂದಿಲ್ಲ. ಆದರೆ ಅವರ ಡಿಎ‌ನ್‌ಎ, ಅವರ ಹಿನ್ನೆಲೆ ಏನು ಅಂತ ನಾನು ಹೇಳಿದ್ದೇನೆ. ನಾನು ಯಾವತ್ತೂ ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿದವನಲ್ಲ. ಯಾವುದೇ ಸಮುದಾಯದಕ್ಕೂ ನಾನು ಅವಮಾನ ಮಾಡಿಲ್ಲ. ಈ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಎಂದು ಹೇಳಿಲ್ಲ, ಅವರ ಹಿನ್ನೆಲೆ ಹೇಳಿದ್ದೇನೆ ಅಷ್ಟೇ: ಕುಮಾರಸ್ವಾಮಿ ಸ್ಪಷ್ಟನೆ
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 07, 2023 | 5:26 PM

ಬೆಂಗಳೂರು: ಪ್ರಹ್ಲಾದ್ ಜೋಶಿಯವರು ಮುಖ್ಯಮಂತ್ರಿ ಆಗಬಾರದು ಎಂದಿಲ್ಲ. ಆದರೆ ಅವರ ಡಿಎ‌ನ್‌ಎ, ಅವರ ಹಿನ್ನೆಲೆ ಏನು ಅಂತ ನಾನು ಹೇಳಿದ್ದೇನೆ. ನಾನು ಯಾವತ್ತು ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿದವನಲ್ಲ. ಯಾವುದೇ ಸಮುದಾಯದಕ್ಕೂ ನಾನು ಅವಮಾನ ಮಾಡಿಲ್ಲ. ಈ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ರಾಜ್ಯದ ಬ್ರಾಹ್ಮಣರು ಸುಸಂಸ್ಕೃತಿಯಿಂದ ಜೀವನ ಮಾಡುತ್ತಿದ್ದಾರೆ. ಯಾವುದೇ ಸಮಾಜದ ಮನಸ್ಸಿಗೆ ನೋವಾಗಬೇಕೆಂದು ಹೇಳಿಕೆ ಕೊಟ್ಟಿಲ್ಲ. ರಾಜ್ಯದಲ್ಲಿ ಬೆಂಕಿ ಹಚ್ಚಬೇಕೆಂದು ನಾನು ಹೇಳಿಕೆ ನೀಡಿಲ್ಲ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ನಾಯಕರ ಟೀಕೆಯನ್ನು ನಾನು ಗಮನಿಸಿದ್ದೇನೆ. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಸಾರ್ವಜನಿಕರಿಂದ ಅಹವಾಲು ಕೇಳುವಾಗಲೂ ಜಾತಿ ಕೇಳಿಲ್ಲ. ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ನೋಡಿ, ಕರ್ನಾಟಕಕ್ಕೂ ಸ್ವಾತಂತ್ರ್ಯ ವೀರ್​ ಸಾರ್ವಕರ್​ಗೂ ಸಂಬಂಧವೇನು? ಕರ್ನಾಟಕಕ್ಕೂ ಗೋಡ್ಸೆಗೂ ಸಂಬಂಧವೇನು. ಸಮಾಜ ಒಡೆಯುವ ಕೆಲಸಕ್ಕೆ ಬಿಜೆಪಿಯವರು ಕೈಹಾಕಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಕುಟುಂಬದಲ್ಲಿ ಹೊತ್ತಿಕೊಂಡ ಟಿಕೆಟ್​ ಕಿಡಿ ಹಾರಿಸಲೆಂದೇ ‘ಬ್ರಾಹ್ಮಣ ಸಿಎಂ’ ಬಾಂಬ್ ಸಿಡಿಸಿದ್ರಾ ಕುಮಾರಸ್ವಾಮಿ?

ಈ ಬಾರಿ ಲಿಂಗಾಯತರು ಬಿಜೆಪಿಗೆ ವೋಟ್ ಹಾಕುವುದಿಲ್ಲ

ಈ ಬಾರಿ ಲಿಂಗಾಯತರು ಬಿಜೆಪಿಗೆ ವೋಟ್ ಹಾಕುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಪಕ್ಕಾ. ನಮ್ಮ ಪಕ್ಷಕ್ಕೆ ಬಹುಮತ ಬರದಿದ್ದರೂ 2 ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ರಾಷ್ಟ್ರೀಯ ಪಕ್ಷಗಳ ಸರ್ಟಿಫಿಕೇಟ್​ ಬೇಕಿಲ್ಲ. ಈ ಬಾರಿ ಜೆಡಿಎಸ್​​ 123 ಸ್ಥಾನ ಗೆದ್ದೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಜೆಪಿ ಎಲ್ಲ ಶಾಸಕರೆಲ್ಲರೂ ಪರಿಶುದ್ಧವಾಗಿದ್ದಾರಾ?

ರಾಜ್ಯ ಬಿಜೆಪಿಯಲ್ಲಿರುವ ಎಲ್ಲ ಶಾಸಕರು ಪರಿಶುದ್ಧವಾಗಿದ್ದಾರಾ. ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದರು ಯಾರು? ಅಶ್ವಥ್ ನಾರಯಣ್ ಏನೋ ತಿಂದಿದ್ದಾರೆ ಅಂದ್ರು. ಸಾರ್ವಜನಿಕರ ಟ್ರಸ್ಟ್ ಅನ್ನು ಬೇಕಾದವರಿಗೆ ಕೊಟ್ಟಿದ್ದು, ಇದಕ್ಕಿಂತ ಹೇಳಬೇಕಾ? ಮಹಾನುಭಾವ ಎಲ್ಲಿ ಕೂತು ಆಸ್ತಿ ಬರೆದುಕೊಟ್ಡಿದ್ದಾನೆ ನೋಡ್ಕೊಳಿ ಎಂದು ಬಿಎಂಎಸ್ ಟ್ರಸ್ಟಿ ಜೊತೆಗೆ ಸಚಿವ ಅಶ್ವಥ್ ನಾರಾಯಣ ಊಟ ಮಾಡುತ್ತಿರುವ ಫೋಟೊವನ್ನು ಕುಮಾರಸ್ವಾಮಿ ತೋರಿಸಿದರು. ಇದರ ಬಗ್ಗೆ ಮೋದಿಯವರು ಉತ್ತರ ಕೊಡುತ್ತಾರಾ..? ಈ ಹಿಂದೆ ಅಧಿವೇಶನದಲ್ಲೂ ಕುಮಾರಸ್ವಾಮಿ ಬಿಎಂಎಸ್​ ಟ್ರಸ್ಟ್​​ನ ಅಕ್ರಮದ ಬಗ್ಗೆ ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: ಹಾಸನ ಟಿಕೆಟ್ ಡ್ಯಾಮೆಂಜ್ ಕಂಟ್ರೋಲ್​ಗೆ ಬ್ರಾಹ್ಮಣ ಸಿಎಂ ಬಗ್ಗೆ ಮಾತಾಡಿದ್ರು, ಕುಮಾರಣ್ಣ ಹಾಕಿದ್ದ ಪ್ಲಾನ್​ ಸಕ್ಸಸ್ ಎಂದ ಬಿಜೆಪಿ ಶಾಸಕ

ಶಿಕ್ಷಕನೋರ್ವ KRSನಿಂದ ಬಿದ್ದು ಯಾಕೆ ಸತ್ತ ಎಂದು ಹೇಳ್ತೀರಾ?

ನಾನು ಸಿ.ಟಿ.ರವಿ ವಿಚಾರಕ್ಕೆ ಹೋಗಿಲ್ಲ, ಆದರೂ ಟೀಕೆ ಮಾಡುತ್ತಾರೆ. ಸಿ.ಟಿ.ರವಿ ಇತಿಹಾಸ ಏನು ಅಂತಾ ರಾಜ್ಯದ ಜನರಿಗೆ ಗೊತ್ತಿದೆ. ಶಿಕ್ಷಕನೋರ್ವ KRSನಿಂದ ಬಿದ್ದು ಯಾಕೆ ಸತ್ತ ಎಂದು ಹೇಳ್ತಿರಾ? ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Tue, 7 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ