ಹಾಸನ ಟಿಕೆಟ್ ಡ್ಯಾಮೆಂಜ್ ಕಂಟ್ರೋಲ್​ಗೆ ಬ್ರಾಹ್ಮಣ ಸಿಎಂ ಬಗ್ಗೆ ಮಾತಾಡಿದ್ರು, ಕುಮಾರಣ್ಣ ಹಾಕಿದ್ದ ಪ್ಲಾನ್​ ಸಕ್ಸಸ್ ಎಂದ ಬಿಜೆಪಿ ಶಾಸಕ

ಹಾಸನ ಟಿಕೆಟ್ ಡ್ಯಾಮೆಂಜ್ ಕಂಟ್ರೋಲ್​ಗೆ ಬ್ರಾಹ್ಮಣ ಸಿಎಂ ಬಗ್ಗೆ ಮಾತಾಡಿದ್ದಾರೆ. ಕುಮಾರಣ್ಣ ಹಾಕಿದ್ದ ಪ್ಲಾನ್​ ಸಕ್ಸಸ್ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.

ಹಾಸನ ಟಿಕೆಟ್ ಡ್ಯಾಮೆಂಜ್ ಕಂಟ್ರೋಲ್​ಗೆ ಬ್ರಾಹ್ಮಣ ಸಿಎಂ ಬಗ್ಗೆ ಮಾತಾಡಿದ್ರು, ಕುಮಾರಣ್ಣ ಹಾಕಿದ್ದ ಪ್ಲಾನ್​ ಸಕ್ಸಸ್ ಎಂದ ಬಿಜೆಪಿ ಶಾಸಕ
ಎಚ್ ಡಿ ಕುಮಾರಸ್ವಾಮಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 07, 2023 | 4:24 PM

ಯಾದಗಿರಿ: ಕುಮಾರಸ್ವಾಮಿ (HD Kumaraswamy) ಆಡಿದ ಒಂದೊಂದು ಮಾತುಗಳಿಂದ ಹೊತ್ತಿದ ಬೆಂಕಿ ಆರುತ್ತಿಲ್ಲ. ಒಂದು ಕೇಸರಿ ಮನೆಯೊಳಗೆ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದ್ರೆ, ಮತ್ತೊಂದು ಬ್ರಾಹ್ಮಣ ಸಮುದಾಯದ ನಾಯಕರು ಬೆಂಕಿಯುಂಡೆಯಂತಾಗಿದ್ದಾರೆ. ಹೌದು..ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(pralhad joshi) ವಿರುದ್ಧ ಕುಟುಕುವ ಭರದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ ಮಾತುಗಳು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕುಮಾರಸ್ವಾಮಿ ತಮ್ಮ ಕುಟುಂಬದ ಸುದ್ದಿಯನ್ನು ಮರೆಮಾಚಲು ಬ್ರಾಹ್ಮಣ ಸಮುದಾಯವನ್ನು ಎಳೆದುತಂದಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿ ನಾಯಕರಿಂದಲೂ ಕುಮಾರಸ್ವಾಮಿ ವಿರುದ್ಧ ಕೌಂಟರ್ ಅಟ್ಯಾಕ್ ಮುಂದುವರೆದಿದೆ. ಇನ್ನು ಇದೇ ವಿಚಾರವಾಗಿ ಮತ್ತೋರ್ವ ಬಿಜೆಪಿ ಶಾಸಕ ರಾಜುಗೌಡ (Raju Gowda) ಪ್ರತಿಕ್ರಿಯಿಸಿದ್ದು, ಜನರ ಗಮನ ಚೆಂಜ್ ಮಾಡಲು ಕುಮಾರಸ್ವಾಮಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕುಟುಂಬದಲ್ಲಿ ಹೊತ್ತಿಕೊಂಡ ಟಿಕೆಟ್​ ಕಿಡಿ ಹಾರಿಸಲೆಂದೇ ‘ಬ್ರಾಹ್ಮಣ ಸಿಎಂ’ ಬಾಂಬ್ ಸಿಡಿಸಿದ್ರಾ ಕುಮಾರಸ್ವಾಮಿ?

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದ‌ನೂರಿನಲ್ಲಿ ಇಂದು(ಫೆಬ್ರವರಿ 07) ಮಾತನಾಡಿರುವ ಶಾಸಕ ರಾಜುಗೌಡ, ಕುಮಾರಣ್ಣ ಹಾಕಿದ್ದ ಪ್ಲಾನ್​ನಲ್ಲಿ ಸಕ್ಸಸ್ ಆಗಿದ್ದಾರೆ. ಇದರಲ್ಲಿ ನೀವು (ಮಾಧ್ಯಮ) ನಮ್ಮ ಲೀಡರ್ಸ್ ಫೇಲ್ ಆಗಿದ್ದೇವೆ. ಕುಮಾರಣ್ಣ ಪಂಚರತ್ನ ಯಾತ್ರೆ ಮಾಡಿಕೊಂಡು ಹೋಗುತ್ತಿದ್ದರು. ಅವರ ಅತ್ತಿಗೆ ಭವಾನಿ ರೇವಣ್ಣ ಹಾಸನ ಟಿಕೆಟ್ ಕೇಳಿದ್ರು. ಆಗ ಪಂಚರತ್ನ ಯಾತ್ರೆ ಪಂಚರ್ ಆಯ್ತು. ಅದನ್ನು ಜನರು ಮರೆಯಲು ಡ್ಯಾಮೆಂಜಿಂಗ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಆಗ ಜನರ ಗಮನ ಚೆಂಜ್ ಮಾಡುವಂತೆ ಮಾಡಿದ್ರು ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.

ಕುಮಾರಣ್ಣ ರಾಜಕೀಯದಲ್ಲಿ ಬಹಳ ಬುದ್ಧಿವಂತ. ಹಾಸನ ಟಿಕೆಟ್ ಡ್ಯಾಮೆಂಜ್ ಕಂಟ್ರೋಲ್ ಮಾಡಲು ಅದಕ್ಕಿಂತ ದೊಡ್ಡ ಡ್ಯಾಮೇಜ್ ಮಾಡಿದ್ರು. ಹಾಗಾಗಿ ಬ್ರಾಹ್ಮಣ ಸಿಎಂ ಬಗ್ಗೆ ಮಾತಾಡಿದ್ರು. ಈಗ ಭವಾನಿ ರೇವಣ್ಣ ಟಿಕೆಟ್ ಬಗ್ಗೆ ಯಾರು ಮಾತನಾಡುತ್ತಿಲ್ಲ. ಕುಮಾರಣ್ಣ ತಿಳಿದಷ್ಟು ದಡ್ಡರಲ್ಲ, ಬಹಳ ಹುಷಾರ್ ಇದಾರೆ. ಅವರ ಡ್ಯಾಮೇಜ್ ಈ ತರ ಹೇಳಿದ್ದಾರೆ. ಅವರ ಮಾತಿಗೆ ಯಾವುದೇ ಮಹತ್ವ ಇಲ್ಲ. ಮೊದಲು ತಮ್ಮ ಪಕ್ಷದ ಹಾಸನ ಟಿಕೆಟ್ ಬಗ್ಗೆ ಸರಿಪಡಿಸಿಕೊಳ್ಳಲಿ. ಹಾಸನ ಟಿಕೆಟ್​ ಕಾರ್ಯಕರ್ತರಿಗೆ ಕೊಡ್ತಿನಿ ಅಂತ ಕುಮಾರಣ್ಣ ಆ್ಯಕ್ಟಿಂಗ್, ಕಣ್ಣೀರು ಕೊನೆಗೆ ಭವಾನಿ ರೇವಣ್ಣ ಅವರಿಗೆ ಕೊಡ್ತಾರೆ. ಇದನ್ನು ಬರೆದಿಟ್ಕೊಳ್ಳಿ ಎಂದರು.

ಇದನ್ನೂ ಓದಿ: ಚುನಾವಣೆಗೆ ಮೊದಲೇ ಪ್ರಲ್ಹಾದ್ ಜೋಶಿಯನ್ನು ಸಿಎಂ ಅಭ್ಯರ್ಥಿಯೆಂದು ಘೋಷಿಸಿ: ಬಿಜೆಪಿಗೆ ಎಚ್​ಡಿ ಕುಮಾರಸ್ವಾಮಿ ಮತ್ತೊಂದು ಸವಾಲು

ಇನ್ನು ಇದೇ ವೇಳೆ ಬಿಜೆಪಿಗರು ನಪುಂಸಕರು ಎಂಬ ಜೆಡಿಎಸ್ ಟ್ವೀಟ್​ಗೆ ಪ್ರತಿಕ್ರಿಯಿಸಿ, ತಮ್ಮ ಡ್ಯಾಮೇಜ್ ಕಂಟ್ರೋಲ್ ಬೇಕಾದದನ್ನು ಹೇಳುತ್ತಾರೆ. ಇನ್ನು ಕೇಳಮಟ್ಟಕ್ಕೆ ಹೋಗಿ ಮಾತನಾಡುತ್ತಾರೆ. ಕುಮಾರಣ್ಣ ಎರಡು ಸಲ ಸಿಎಂ ಆಗ್ತಾರೆ. ಅಂತವರು ಟ್ವೀಟ್​ ಮಾಡುವುದು, ಇಂತಹ ಶಬ್ದ ಯಾರಿಗೂ ಶೋಭೆಯಲ್ಲ. ಅದಕ್ಕೆ ಪ್ರತಿಕ್ರಿಯೆ ಕೊಟ್ರೆ ಅವರಿಗಿಂತ ಸಣ್ಣವರು ಆಗುತ್ತೇವೆ ಎಂದು ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:23 pm, Tue, 7 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ