MLA Konareddy: ಗ್ಯಾರಂಟಿ ಜಾರಿ ಮಾಡದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ – ಕೋನರೆಡ್ಡಿ ಖಡಕ್ ಸಂದೇಶ

|

Updated on: May 26, 2023 | 2:21 PM

ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಕೋನರೆಡ್ಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿ ಮಾಡದಿದ್ರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಬಿಜೆಪಿಯವರು 15 ಲಕ್ಷ ಹಾಕ್ತೀನಿ ಅಂದ್ರು, 2 ಕೋಟಿ ಉದ್ಯೋಗ ಕೊಡ್ತೀನಿ ಅಂದರು. ಅದನ್ನು ಯಾರೂ ಕೇಳೋದಿಲ್ಲ ಎಂದು ಕಿಡಿಕಾರಿದರು.

MLA Konareddy: ಗ್ಯಾರಂಟಿ ಜಾರಿ ಮಾಡದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ - ಕೋನರೆಡ್ಡಿ ಖಡಕ್ ಸಂದೇಶ
ಶಾಸಕ ಕೋನರೆಡ್ಡಿ
Follow us on

ಹುಬ್ಬಳ್ಳಿ: ಗ್ಯಾರಂಟಿ(Congress Guarantee) ಜಾರಿ ಮಾಡದಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ನವಲಗುಂದ ಕಾಂಗ್ರೆಸ್​ ಶಾಸಕ ಕೋನರೆಡ್ಡಿ(MLA Konareddy) ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ, ಡಿಸಿಎಂ ಸಭೆಯಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ. ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ಒಂದುವೇಳೆ ಜಾರಿ ಮಾಡದಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಶಾಸಕ ಕೋನರೆಡ್ಡಿ ಶಪಥ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಕೋನರೆಡ್ಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿ ಮಾಡದಿದ್ರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ 5 ಗ್ಯಾರಂಟಿಗಳನ್ನು ಘೋಷಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿತ್ತು. ಆದ್ರೆ ಸರ್ಕಾರ ಬಂದು 2 ವಾರ ಕಳೆದರೂ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಹೀಗಾಗಿ ಈ ಬಗ್ಗೆ ಮಾತನಾಡಿದ ಕೋನರೆಡ್ಡಿಯವರು ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ! ಅಶ್ವತ್ಥನಾರಾಯಣ ಹೇಳಿದ್ದೇನು?

ನಮ್ಮ ಸರ್ಕಾರ ಗ್ಯಾರಂಟಿಗೆ ನಾನು ಗ್ಯಾರಂಟಿ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಸಭೆಯಲ್ಲಿಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ಅಕಸ್ಮಾತ್ ಜಾರಿ ಮಾಡದೆ ಹೋದ್ರೆ ನಾನು ರಾಜಕೀಯ ನಿವೃತ್ತಿ ತಗೆದುಕೊಳ್ತೀನಿ‌. ಅಷ್ಟ ಗ್ಯಾರಂಟಿ ನಾನು ಕೊಡ್ತೀನಿ. ಬಿಜೆಪಿಗೆ ಯಾಕೆ ಇಷ್ಟು ಅವಸರ. ಐದು ವರ್ಷದಲ್ಲಿ‌ ಒಂದು ಕೆಲಸ ಮಾಡಿಲ್ಲ ಅವರು. ನಮ್ಮ ಸರ್ಕಾರ ಇವಾಗ ರಚನೆ ಆಗಿದೆ. ಅದಕ್ಕೊಂದು ಕಾಲಾವಕಾಶ ಬೇಕು, ಅಂಕಿ ಅಂಶ ಬೇಕು. ಕೊಟ್ಟ ಗ್ಯಾರಂಟಿಯನ್ನು 100 ಕ್ಕೆ 100 ಜಾರಿ ಮಾಡ್ತೀವಿ. ಗ್ಯಾರಂಟಿ ಬಗ್ಗೆ ನಾನು ಗ್ಯಾರಂಟಿ ಎಂದು ಶಾಸಕ ಕೋನರೆಡ್ಡಿ ಭರವಸೆ ಕೊಟ್ಟಿದ್ದಾರೆ.

ಬಿಜೆಪಿಯವರು 15 ಲಕ್ಷ ಹಾಕ್ತೀನಿ ಅಂದ್ರು, 2 ಕೋಟಿ ಉದ್ಯೋಗ ಕೊಡ್ತೀನಿ ಅಂದರು. ಅದನ್ನು ಯಾರೂ ಕೇಳೋದಿಲ್ಲ. ಎಷ್ಟೇ ಹಣ ಖರ್ಚ ಆದ್ರೂ ನಮ್ಮ ನಾಯಕರು ಜಾರಿ ಮಾಡ್ತೀವಿ ಎಂದಿದ್ದಾರೆ. RSS ಭಜರಂಗ ದಳ ನಿಷೇಧ ಬಗ್ಗೆ ನಾನು ಮಾತಾಡಲ್ಲ. ನಾಳೆ ಲಿಸ್ಟ್ ಅಲ್ಲಿ ಬಂದ್ರೆ ಮಂತ್ರಿ ಸ್ಥಾನ ತಗೋತಿನಿ. ಧಾರವಾಡ ಜಿಲ್ಲೆಯಲ್ಲಿ ಸಂತೋಷ್ ಲಾಡ್, ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಇದ್ದಾರೆ. ನನಗೂ ಒಮ್ಮೆ ಕೃಷಿ ಸಚಿವನಾಗೋ ಬಯಕೆ ಇದೆ. ಆದ್ರೆ ಅಂತಿಮ ನಿರ್ಧಾರ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರ ತೀರ್ಮಾನಕ್ಕೆ ನಾನು ಬದ್ದ ಎಂದರು.

ಹುಬ್ಬಳ್ಳಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ