ಪೈಶಾಚಿಕ ಕೃತ್ಯವೆಸಗಿದರೂ ಸ್ಪಂದನೆ ಇಲ್ಲ: ಸಿಎಂ ಸಿದ್ದರಾಮಯ್ಯ ವಿರುದ್ಧ ಜೈನಮುನಿ ಗುಣಧರನಂದಿ ಕಿಡಿ

|

Updated on: Jul 09, 2023 | 7:28 PM

ಕಾಮಕುಮಾರನಂದಿ ಶ್ರೀಗಳನ್ನು ಅದಕ್ಕಿಂತ ಕ್ರೂರವಾಗಿ ಕೊಲ್ಲಲಾಗಿದೆ. ಇಂತಹ ದುಷ್ಕೃತ್ಯವೆಸಗಿದರೂ ಸಿಎಂ ಯಾವುದೇ ಸ್ಪಂದನೆ ಮಾಡಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ವಿರುದ್ಧ ಜೈನಮುನಿ ಗುಣಧರನಂದಿ ಮಹರಾಜರು ಆಕ್ರೋಶ ಹೊರಹಾಕಿದ್ದಾರೆ.

ಪೈಶಾಚಿಕ ಕೃತ್ಯವೆಸಗಿದರೂ ಸ್ಪಂದನೆ ಇಲ್ಲ: ಸಿಎಂ ಸಿದ್ದರಾಮಯ್ಯ ವಿರುದ್ಧ ಜೈನಮುನಿ ಗುಣಧರನಂದಿ ಕಿಡಿ
ಸಿಎಂ ಸಿದ್ದರಾಮಯ್ಯ ಮತ್ತು ಜೈನಮುನಿ ಗುಣಧರನಂದಿ ಮಹರಾಜ
Follow us on

ಹುಬ್ಬಳ್ಳಿ: ಕ್ರೂರವಾಗಿ ಜೈನ ಮುನಿ ಕಾಮಕುಮಾರನಂದಿ ಮಹರಾಜರನ್ನು ಕೊಲ್ಲಲಾಗಿದೆ. ಇಂತಹ ಪೈಶಾಚಿಕ ಕೃತ್ಯವೆಸಗಿದರೂ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಂದನೆ ನೀಡಿಲ್ಲ ಎಂದು ನವಗ್ರಹ ತೀರ್ಥಕ್ಷೇತ್ರದ ಜೈನಮುನಿ ಗುಣಧರನಂದಿ ಮಹಾರಾಜ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು. ತಾಲೂಕಿನ ವರೂರು ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಆತಂಕವಾದಿಗಳಿಗೆ ಯಾವ ಶಿಕ್ಷೆಯಾಗುವುದಿಲ್ಲವೋ ಅಂತಹ ಶಿಕ್ಷೆ ಜೈನ ಮುನಿಗಳಿಗೆ ನೀಡಲಾಗಿದೆ. ಕಾಮಕುಮಾರನಂದಿ ಶ್ರೀಗಳನ್ನು ಅದಕ್ಕಿಂತ ಕ್ರೂರವಾಗಿ ಕೊಲ್ಲಲಾಗಿದೆ. ಇಂತಹ ದುಷ್ಕೃತ್ಯವೆಸಗಿದರೂ ಸಿಎಂ ಯಾವುದೇ ಸ್ಪಂದನೆ ಮಾಡಿಲ್ಲ. ಅಲ್ಪಸಂಖ್ಯಾತ, ಕುರುಬ ಸಮಾಜದ ಶ್ರೀಗಳಿಗೆ ಹೀಗಾಗಿದರೆ ಸುಮ್ಮನಿರುತ್ತಿದ್ದರಾ? ಎಂದು ಪ್ರಶ್ನಿಸಿದರು.

ನಮ್ಮ ಸಮಾಜದ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಯಾಕಿಷ್ಟು ನಿರ್ಲಕ್ಷ್ಯ ಎಂದು ಪ್ರಶ್ನಿಸಿದ ಜೈನಮುನಿ ಗುಣಧರನಂದಿ, ಒಬ್ಬ ಜೈನ‌ಮುನಿಗೆ ಈ ರೀತಿ‌ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ‌ ಸಂಗತಿ. ಮಾಧ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದೆ. ನಾಳೆ ಸಂಜೆ 5 ಗಂಟೆ ಒಳಗೆ ನಮ್ಮ ಬೇಡಿಕೆಗೆ ಮನ್ನಣೆ ನೀಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ಭರವಸೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: ಹಿರೇಕೋಡಿಯಲ್ಲಿ ನೆರವೇರಿದ ಜೈನಮುನಿ ಮಹಾರಾಜರ ಅಂತ್ಯಸಂಸ್ಕಾರ, ಹತ್ಯೆ ಖಂಡಿಸಿ ನಾಳೆ ಮೌನ ಪ್ರತಿಭಟನೆ

ಅಲ್ಲದೆ, ದೇಶಾಂತರ ಪಾದಯಾತ್ರೆ ಮಾಡುವಾಗ ಭದ್ರತೆ ಇಲ್ಲದಿರುವುದರಿಂದ ಜೈನ ಮುನಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪಾದಯಾತ್ರೆ ಮಾಡುವ ಪ್ರತಿಯೊಬ್ಬ ಜೈನಮುನಿಗಳಿಗೆ ಸೂಕ್ತ ಭದ್ರತೆ ಜೊತೆಗೆ ಆಶ್ರಯ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೂಲಕ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದ ಜೈನಮುನಿ, ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಅಮರಣಾಂತ ಉಪವಾಸ ಕೈಬಿಡುವುದಿಲ್ಲ. ನಮಗೆ ಭದ್ರತೆ ಒದಗಿಸುವವರೆಗೂ ಅಮರಣಾಂತ ಉಪವಾಸ ನಡೆಸುತ್ತೇವೆ ಎಂದು ಜೈನಮುನಿ ಗುಣಧರನಂದಿ ಎಚ್ಚರಿಕೆ ನೀಡಿದರು.

ಜೈನಮುನಿಯೊಂದಿಗೆ ಮಾತನಾಡಿದ ಗೃಹಸಚಿವ

ನಮಗೆ ಭದ್ರತೆಯಿಲ್ಲ ನಾಳೆ ನಮಗೆ ಏನಾದರು ಆದರೆ ಏನು ಮಾಡುವುದು ಎಂದು ಕಣ್ಣೀರು ಹಾಕಿದ್ದ ಗುಣಧರನಂದಿ ಮಹರಾಜರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಧೈರ್ಯ ತುಂಬಿದ ಗೃಹಸಚಿವ ಜಿ ಪರಮೇಶ್ವರ್‌, ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ, ಹತ್ಯಗೈದ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂಬುದು ನಮ್ಮ ಬೇಡಿಕೆ ಅಲ್ಲ. ಅವರಿಗೂ ಕುಟುಂಬ ಇರುತ್ತದೆ. ನಾವು ಅಹಿಂಸಾ ತತ್ವವಾದಿಗಳು ಶಾಂತಿ ಪ್ರಿಯರು. ಹೀಗಾಗಿ ನಮ್ಮ ನಾಲ್ಕು ಬೇಡಿಕೆಗಳನ್ನು ನಿಮ್ಮ ಮುಂದಿಟ್ಟಿದ್ದೇವೆ, ಅವುಗಳನ್ನು ಈಡೇರಿಸಿದರೆ ಸಾಕು ಎಂದರು. ಅಲ್ಲದೆ, ನಾಳೆ ಗುಣಧರನಂದಿ ಅವರನ್ನು ಪರಮೇಶ್ವರ್ ಅವರು ಭೇಟಿಯಾಗುವ ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 pm, Sun, 9 July 23