ಹುಬ್ಬಳ್ಳಿ: ದೇಶದಲ್ಲೇ ಸಂಚಲನ ನಿರ್ಮಿಸಿದ್ದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಇಂದು ಎಲ್ಲಾ ಅಡೆತಡೆಗಳನ್ನು ಮೀರಿ ಕಾನೂನಿನ ಮೂಲಕವೇ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗಿದೆ.
ಈ ಐತಿಹಾಸಿಕ ಮೈದಾನದಲ್ಲಿ ಅಂದು ರಾಷ್ಟ್ರ ಧ್ವಜ ಹಾರಿಸಲು ಅನೇಕರು ಜೀವ ಬಲಿದಾನಗೈದ ಘಟನೆ ಅಚ್ಚಳಿಯದಂತೆ ಸ್ಮೃತಿ ಪಟಲದಲ್ಲಿ ಉಳಿದಿದೆ. ಇಂತಹ ಐತಿಹಾಸಿಕ ಮೈದಾನದಲ್ಲಿ ಇಂದು ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆ ನಡೆದಿರುವುದು ಮತ್ತೊಂದು ಇತಿಹಾಸ.
ಈ ಅದ್ಧೂರಿ ಗಣೇಶೋತ್ಸವ ಆಚರಣೆಯ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಶ್ರೀ ಜಗದೀಶ್ ಶೆಟ್ಟರ್, ಸಚಿವರಾದ ಶ್ರೀ ಶಂಕರಪಾಟೀಲ್ ಮುನೇನಕೊಪ್ಪ, ಶ್ರೀ ಹಾಲಪ್ಪ ಆಚಾರ್, ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಶ್ರೀ ಸಿಎಂ ನಿಂಬಣ್ಣವರ್, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ ಟೆಂಗಿನಕಾಯಿ, ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಸಂತೋಷ್ ಚೌಹಾನ್, ಶ್ರೀ ಶಿವು ಮೆಣಸಿನಕಾಯಿ ಹಾಗೂ ಗಣೇಶೋತ್ಸವ ಸಮಿತಿಯ ಪ್ರಮುಖರು ಸಹ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಸಾಥ್ ನೀಡಿದರು.
ಮಹಾಮಂಗಳಾರತಿಯೊಂದಿಗೆ ಸಂಪನ್ನವಾದ ಗಣೇಶನ ಹಬ್ಬ!
ದೇಶದಲ್ಲೇ ಒಂದು ಸಂಚಲನ ನಿರ್ಮಿಸಿದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಇಂದು ಎಲ್ಲಾ ಅಡೆತಡೆಗಳನ್ನು ಮೀರಿ ಕಾನೂನಿನ ಮೂಲಕವೇ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇದೀಗ ಮಹಾಮಂಗಳಾರತಿ ಪೂಜಾ ಕಾರ್ಯ ನೆರವೇರಿದೆ. ರಾಷ್ಟ್ರ ಧ್ವಜ ಹಾರಿಸಲು ಅಂದು ಅನೇಕರು ಜೀವ ಬಲಿದಾನಗೈದ ಇದೇ ಮೈದಾನ ಇಂದು ಗಣೇಶೋತ್ಸವ ಆಚರಣೆಯ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
Published On - 8:21 pm, Wed, 31 August 22