ಹುಬ್ಬಳ್ಳಿ: ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 27, 2025 | 4:09 PM

ಪತ್ನಿ ಕಿರುಕುಳದಿಂದ ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಇಂತಹ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವ, ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಮೃತ ಸಂಬಂಧಿಕರು, ಶವ ಸಂಸ್ಕಾರ ಪೆಟ್ಟಿಗೆ ಮೇಲೆ ಹೆಂಡತಿ ಕಾಟ ತಾಳಲಾರದೆ ಸತ್ತನು ಎಂದು ಬರೆದಿದ್ದಾರೆ.

ಹುಬ್ಬಳ್ಳಿ: ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ
Follow us on

ಹುಬ್ಬಳ್ಳಿ, (ಜನವರಿ 27): ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿನಗರದಲ್ಲಿ ನಡೆದಿದೆ. ಪತ್ನಿ ಕಿರುಕುಳದಿಂದ ಬೇಸತ್ತು ಸಾಯಿಸುತ್ತಿದ್ದೇನೆಂದು ಪೀಟರ್ ಎನ್ನುವಾತ ಡೆತ್​ನೋಟ್​ ಬರೆದಿಟ್ಟು ಬಳಿಕ ನೇಣಿಗೆ ಶರಣಾಗಿದ್ದಾರೆ. ಕೆಲ ದಿನಗಳಿಂದ ಪತಿ ಪೀಟರ್​, ಪತ್ನಿ ಪಿಂಕಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಪೀಟರ್​ ಪ್ರಾಣ ಕಳೆದುಕೊಂಡಿದ್ದಾರೆ. ವಿಚ್ಚೇದನ ಅರ್ಜಿ ಇಂದು(ಜನವರಿ 27) ಕೋರ್ಟ್​ನಲ್ಲಿ ವಿಚಾರಣೆ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ,

ಹೆಂಡತಿ ಟಾರ್ಚರ್ ನಿಂದ ನಾನು ಸಾಯುತ್ತಿದ್ದೇನೆ ಎಂದು ಡೆತ್​ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಡ್ಯಾಡಿ ಆಯಮ್ ಸಾರಿ. ಪಿಂಕಿ(ಹೆಂಡತಿ) ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆಥ್ ಎಂದು ಡೆತ್​ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಪೀಟರ್ ಸಂಬಂಧಿಕರು, ಶವ ಸಂಸ್ಕಾರ ಪೆಟ್ಟಿಗೆ ಮೇಲೆ ಹೆಂಡತಿ ಕಾಟ ತಾಳಲಾರದೆ ಸತ್ತನು ಎಂದು ಬರೆದಿದ್ದಾರೆ.

ಫಿಬಿ ಖಾಸಗಿ ಶಾಲೆ‌‌ ಶಿಕ್ಷಕಿಯಾಗಿದ್ದಳು ಇತ್ತೀಚಿಗೆ ಬೇರೆ ವ್ಯಕ್ತಿ ‌ಜೊತೆಗೆ ಸುತ್ತಾಟ ನಡೆಸುತ್ತಿದ್ದಳು ಇದನ್ನು ಪೀಟರ್ ಮತ್ತು ಕುಟುಂಬಸ್ಥರು ಪ್ರಶ್ನೆ ಮಾಡಿದ್ದರು. ಆದ್ರೆ, ಇದಕ್ಕೆ ಪಿಂಕಿ, ನನ್ನ ಜೀವನ ನನ್ನಿಷ್ಟ ಎಂದಿದ್ದಳು. ಅಲ್ಲದೆ ಇತ್ತೀಚೆಗೆ ಪಿಂಕಿ ಹಲವಾರು ತಿಂಗಳು ಗಂಡನಿಂದ ದೂರುವಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಳು. ಇಂದು(ಜನವರಿ 27) ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಇತ್ತು. ಆದ್ರೆ, ವಿಚ್ಚೇದನಕ್ಕೆ 20 ಲಕ್ಷ ರೂ. ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದ್ದು, ಇದರಿಂದ ಪೀಟರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮತ್ತೆ ಒಂದಾಗಿ ಬಾಳೋಣಾ ಎಂದು ಕರೆಯಲು ಹೋಗಿ ಹೆಂಡ್ತಿ ಮನೆಯಲ್ಲೇ ಪತಿ ಆತ್ಮಹತ್ಯೆ!

ಪಿಂಕಿ ಬೇರೊಬ್ಬನ ಜೊತೆ ಅನೈತಿಕ‌ ಸಂಬಂಧ ಹೊಂದಿದ್ದಳು. ಹೀಗಾಗಿ ಕಳೆದ ಏಳೆಂಟು ತಿಂಗಳುಗಳಿಂದ ದೂರ ದೂರವಾಗಿದ್ದ ಪತಿ ಪತ್ನಿ ದೂರವಾಗಿದ್ದರು. ಅಲ್ಲದೇ ಗಂಡನಿಂದ ಡೈವೋರ್ಸ್ ಗಾಗಿ ಕೋರ್ಟ್ ಗೆ ಅರ್ಜಿ‌ ಸಲ್ಲಿಸಿದ್ದ ಪತ್ನಿ, ಜೀವನಾಂಶಕ್ಕಾಗಿ 20 ಲಕ್ಷ ರೂ. ಕೊಡುವಂತೆ ಪೀಡಿಸುತ್ತಿದ್ದಳು. ಇದರಿಂದಾಗಿಯೇ ಮನನೊಂದು ಪೀಟರ್ ನೇಣಿಗೆ ಶರಣಾಗಿರುವುದು. ಸಾವಿಗೂ ಮುನ್ನ ಡೆತ್ ನೋಟ್ ನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಮನವಿ ಮಾಡಿದ್ದ. ಪತ್ನಿ ಕಿರುಕುಳದಿಂದ ಸಾವನ್ನಪ್ಪಿದ ಗಂಡ‌ ಪೀಟರ್ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ತುಮಕೂರು: ಮತ್ತೊಂದೆಡೆ ತುಮಕೂರಿನಲ್ಲಿ ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದುರ್ಗದಹಳ್ಳಿ ಗ್ರಾಮದ ತಿಮ್ಮರಾಜು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಕ್ಕೆನಹಳ್ಳಿ ಗ್ರಾಮದಲ್ಲಿರುವ ಹೆಂಡತಿ ಮನೆ ಬಂದಿದ್ದ ತಿಮ್ಮರಾಜು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಂಡತಿಯಿಂದಿಗೆ ಗಲಾಟೆ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:00 pm, Mon, 27 January 25