ಧಾರವಾಡ: ಕಠಿಣ ಕಂಟೋನ್ಮೆಂಟ್ ಜೋನ್ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಕೊವಿಡ್ ಕೇಸ್ ಕಡಿಮೆ ಆಗೋವರೆಗೂ ಎಸ್‌ಡಿಎಂ ಕಾಲೇಜಿನ ಒಪಿಡಿ ಕ್ಲೋಸ್ ಆಗಿರುತ್ತದೆ. ಎಸ್‌ಡಿಎಂ ಕಾಲೇಜಿನ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ. ಕೊರೊನಾ ಬಗ್ಗೆ ಜಿಲ್ಲೆಯ ಜನತೆ ಆತಂಕ ಪಡಬೇಕಾಗಿಲ್ಲ. 281 ಜನರಿಗೆ ಕೊರೊನಾ ಬಂದ್ರೂ ಎಲ್ಲರೂ ಚೆನ್ನಾಗಿದ್ದಾರೆ. ಮಾಸ್ಕ್ ಧರಿಸದವರಿಗೆ ದಂಡ ಹಾಕುವಂತೆ ಸೂಚಿಸಲಾಗಿದೆ. ಮದುವೆಗಳಿಗೆ ಸದ್ಯಕ್ಕೆ ಯಾವುದೇ ರೀತಿ ನಿರ್ಬಂಧ ಇಲ್ಲ ಎಂದು ಸಿಎಂ ಜೊತೆಗೆ ವಿಡಿಯೋ ಸಂವಾದದ ಬಳಿಕ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಗೆ ಸಂಬಂಧಿಸಿದಂತೆ ಎಸ್‌ಡಿಎಂ ಕಾಲೇಜ್ ಮಾಹಿತಿ ಪಡೆದಿದ್ದಾರೆ. 281 ಪಾಸಿಟಿವ್ ಪ್ರಕರಣ ಆಗಿದೆ. ಆರು ಜನರಿಗೆ ಮಾತ್ರ ಕೊರೊನಾ ಲಕ್ಷಣ ಕಂಡು ಬಂದಿದೆ. ಉಳದಿವರಿಗೆ ರೋಗ ಲಕ್ಷಣ ಇಲ್ಲ. 281 ಜನರಿಗೆ ಸೋಂಕು ಬಂದರೂ ಆರಾಮವಾಗಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ. 1800 ಜನರ ರಿಸಲ್ಟ್ ಬರಬೇಕಿದೆ. ಕಠಿಣ ಕಂಟೈನ್ಮೆಂಟ್ ಝೋನ್ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಕೊವಿಡ್ ಕೇಸ್ ಕಡಿಮೆ ಆಗೋವರೆಗೂ ಎಸ್‌ಡಿಎಂ ಒಪಿಡಿ ಕ್ಲೋಸ್ ಆಗಿರುತ್ತದೆ. ಜಿಲ್ಲೆಯ ಜನತೆ ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾರೂ ಭಾಗಿಯಾಗಬಾರದು. ಜನಜಂಗುಳಿ ಪ್ರದೇಶ ಇರೋ ಕಡೆ ಜನ ಹೋಗಬಾರದು. ಮಾಸ್ಕ್ ರಹಿತರಿಗೆ ದಂಡ ಹಾಕಲು ಮಹಾನಗರ ಪಾಲಿಕೆ ಆಯುಕ್ತರಿಗೆ ಹೇಳಿದ್ದೇವೆ. ಮದುವೆಗೆ ಸದ್ಯಕ್ಕೆ ಯಾವುದೇ ನಿರ್ಬಂಧ ಇಲ್ಲ. ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬರಲಿದೆ. ಅದರನ್ವಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಉಡುಪಿ: ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡೋಣ: ಡಿಸಿ ಕೂರ್ಮಾರಾವ್ ಹೇಳಿಕೆ
ಕೋವಿಡ್ ನಿಯಂತ್ರಣಕ್ಕೆ ನಿಗಾವಹಿಸಲು ಸಿಎಂ ಸೂಚಿಸಿದ್ದಾರೆ. ವಿದೇಶದಿಂದ ಬಂದ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸುತ್ತೇವೆ. ದ.ಆಫ್ರಿಕಾ- ಹಾಂಗ್ ಕಾಂಗ್ ಸೇರಿದಂತೆ ಹೈರಿಸ್ಕ್ ದೇಶಗಳ ಮೇಲೆ ನಿಗಾ ಇಡಲಾಗುತ್ತದೆ. ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲು ಸಿಎಂ ಸೂಚಿಸಿದ್ದಾರೆ. ಎರಡು ಡೋಸ್ ವ್ಯಾಕ್ಸಿನ್ ಶೀಘ್ರ ಪೂರೈಸಲು ಹೇಳಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ, ಕೈ ಸ್ವಚ್ಛತೆ ನಾಗರಿಕರು ಪಾಲಿಸಬೇಕು. ಜಿಲ್ಲೆಯ ಜನ ಶೀಘ್ರ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ. ಸರಕಾರದ ನಿಯಮಾವಳಿಯನ್ನು ಕಡ್ಡಾಯ ಪಾಲಿಸಿ. ಉಡುಪಿ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡೋಣ ಎಂದು ಉಡುಪಿ ಡಿಸಿ ಕೂರ್ಮಾರಾವ್ ಹೇಳಿಕೆ ನೀಡಿದ್ದಾರೆ.
ಕೊಡಗು: ಕೆಲವೊಂದು ಪಾರ್ಟಿ, ಸಮಾರಂಭಗಳಿಗೆ ನಿಯಂತ್ರಣ ಹೇರಲಾಗುವುದು
ಆಫ್ರಿಕಾ ದೇಶಗಳಲ್ಲಿ ರೂಪಾಂತರಿ ತಳಿ ಪತ್ತೆ ಹಿನ್ನೆಲೆ, ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಸಿಎಂ ಸೂಚಿಸಿದ್ದಾರೆ. ಕಾನ್ಫರೆನ್ಸ್ ನಲ್ಲಿ ಹಲವು ನಿರ್ದೇಶನಗಳನ್ನು ಕೊಟ್ಟಿದ್ದಾರೆ. ಈಗಿನ ಕೊವಿಡ್ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ. ಹೊರ ರಾಜ್ಯಗಳಿಂದ ಬಂದವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ ಇರಲಿದೆ. ಕೆಲವೊಂದು ಪಾರ್ಟಿ, ಸಮಾರಂಭಗಳಿಗೆ ನಿಯಂತ್ರಣ ಹೇರಲಾಗುವುದು ಎಂದು ವಿಡಿಯೋ ಸಂವಾದ ಬಳಿಕ ಡಿಸಿ ಸತೀಶ್ ಹೇಳಿಕೆ ನೀಡಿದ್ದಾರೆ.
ಕೋಲಾರ: ಒಂದು ವಾರದಲ್ಲಿ ಹೊಸ ವೈರಸ್ನ ತೀವ್ರತೆ ತಿಳಿಯಲಿದೆ: ಸಚಿವ ಕೆ.ಸುಧಾಕರ್ ಹೇಳಿಕೆ
ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ಬೇಗ ಹರಡುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಒಂದು ವಾರದಲ್ಲಿ ಹೊಸ ವೈರಸ್ನ ತೀವ್ರತೆ ತಿಳಿಯಲಿದೆ ಎಂದು ಕೋಗಿಲಹಳ್ಳಿಯಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ ಒಮಿಕ್ರಾನ್ ಕೇಸ್ ಪತ್ತೆಯಾಗಿಲ್ಲ. ಹೈರಿಸ್ಕ್ ದೇಶದಿಂದ ಬಂದವರನ್ನ ಕ್ವಾರಂಟೈನ್ ಮಾಡುತ್ತೇವೆ ಎಂದು ಕೋಲಾರ ತಾಲೂಕಿನ ಕೋಗಿಲಹಳ್ಳಿಯಲ್ಲಿ ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ: Omicron Variant: ಡಿಸೆಂಬರ್ ತಿಂಗಳೊಳಗೆ 2ನೇ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳಿಸುವಂತೆ ಸಿಎಂ ಬೊಮ್ಮಾಯಿ ತಾಕೀತು
ಇದನ್ನೂ ಓದಿ: ಗಡಿಭಾಗದಲ್ಲಿ ಕಟ್ಟೆಚ್ಚರ, ಮಾಸ್ಕ್, ಲಸಿಕೆ ಕಡ್ಡಾಯ, ಬೂಸ್ಟರ್ ಡೋಸ್; ಸಭೆಯ ಮುಖ್ಯ ತೀರ್ಮಾನಗಳ ಬಗ್ಗೆ ಆರ್ ಅಶೋಕ್ ಮಾಹಿತಿ