ಡೆಡ್ ಲೈನ್ ಮುಗೀತು, ಹೈಕೋರ್ಟ್ ನಿರ್ದೇಶನದಂತೆ ಕ್ರಮ- ಸಚಿವ ಹಾಲಪ್ಪ ಆಚಾರ್

| Updated By: ವಿವೇಕ ಬಿರಾದಾರ

Updated on: Jan 03, 2023 | 6:22 PM

ರಾಜ್ಯ ಸರ್ಕಾರ ಎಲ್ಲ 137 ಎಂಎಸ್​​ಪಿಸಿಗಳಿಗೆ ಡಿಸೆಂಬರ್ ತಿಂಗಳಲ್ಲಿ BiS ಗುಂಪುಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಗಡುವು ನೀಡಿದೆ. ಡೆಡ್ ಲೈನ್ ಮುಗಿಯುತ್ತಾ ಬಂದ್ರು ಇನ್ನೂ 40 ಕ್ಕು ಹೆಚ್ಚು ಎಂಎಸ್​ಪೀಟಿಸಿಗಳು MoU ಮಾಡಿಕೊಂಡಿಲ್ಲ.

ಡೆಡ್ ಲೈನ್ ಮುಗೀತು, ಹೈಕೋರ್ಟ್ ನಿರ್ದೇಶನದಂತೆ ಕ್ರಮ- ಸಚಿವ ಹಾಲಪ್ಪ ಆಚಾರ್
ಸಚಿವ ಹಾಲಪ್ಪ ಆಚಾರ್​
Follow us on

ಧಾರವಾಡ: ಡಿಸೆಂಬರ್​ 02.2022 ರಂದು ರಾಜ್ಯದಲ್ಲಿರುವ ಸರಿಸುಮಾರು 66 ಸಾವಿರ ಅಂಗನವಾಡಿಗಳಲ್ಲಿರುವ ಸುಮಾರು 50 ಲಕ್ಷ ಮಕ್ಕಳಿಗೆ ಬದಲಾದ ಪೌಷ್ಟಿಕ ಆಹಾರ ಪೂರೈಕೆ ಮಾಡಬೇಕಿತ್ತು. ರಾಜ್ಯದಲ್ಲಿ ಪ್ರಸಕ್ತ ನೀಡಲಾಗುತ್ತಿರುವ ಆಹಾರ ಪದಾರ್ಥಗಳ ಪದ್ಧತಿಯನ್ನು ಬದಲಾಯಿಸಿ ಆಹಾರ ಪದಾರ್ಥಗಳ ಬಲವರ್ಧನೆಯ ಸೂತ್ರದ ಅನುಷ್ಠಾನದ ಸಲುವಾಗಿ ಎಂಎಸ್‌ಪಿಟಿಸಿಗಳು ಬೀಐಎಸ್ (ಉತ್ತಮ ಗುಣಮಟ್ಟದ ಉತ್ಪದಾನೆಗಾಗಿ ನೀಡುವ ಪ್ರಮಾಣ ಪತ್ರ)ಪರವಾನಗಿ ಹೊಂದಿರುವ ಮಹಿಳಾ ಗುಂಪುಗಳ ಸಹಾಯವನ್ನು ಪಡೆಯಲು ದಿನಾಂಕ 05.05.2021 ರಲ್ಲಿ ಹೊರಡಿಸಲಾದ ಸರ್ಕಾರದ ಆದೇಶದಂತೆ ಕರಾರು ಮಾಡಿಕೊಳ್ಳಲು ಎಂಎಸ್‌ಪಿಟಿಸಿಗಳಿಗೆ ಸೂಕ್ತ ನಿರ್ದೇಶನ ಹೊರಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ರಾಜ್ಯದ 137 ಎಂಎಸ್​​ಪೀಟಿ ಸಿಗಳು, BIS ಪ್ರಮಾಣ ಪತ್ರ ಹೊಂದಿದ ಮಹಿಳಾ ಸಂಘಗಳ ಮೂಲಕವೇ ಗುಣಮಟ್ಟದ ಬದಲಾದ ಪೋಷಕಾಂಶ ಭರಿತ ಆಹಾರ ಉತ್ಪಾದನೆಗೆ ಸಹಕಾರ ತೆಗೆದುಕೊಳ್ಳಬೇಕು.

ಅದಕ್ಕಾಗಿಯೇ ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಎಲ್ಲ 137 ಎಂಎಸ್​​ಪಿಸಿಗಳಿಗೆ ಡಿಸೆಂಬರ್ ತಿಂಗಳಲ್ಲಿ BiS ಗುಂಪುಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಗಡುವು ನೀಡಿದೆ. ಡೆಡ್ ಲೈನ್ ಮುಗಿಯುತ್ತಾ ಬಂದ್ರು ಇನ್ನೂ 40 ಕ್ಕು ಹೆಚ್ಚು ಎಂಎಸ್​ಪೀಟಿಸಿಗಳು MoU ಮಾಡಿಕೊಂಡಿಲ್ಲ. ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡುವ ಹೊಣೆ ಹೊತ್ತಿರುವ ಈ ಎಂಎಸ್​ಪೀಟಿ ಸಿಗಲು ಸರಿಯಾಗಿ ಪೌಷ್ಠಿಕ ಆಹಾರ ಪೂರೈಕೆ ಮಾಡುತ್ತಿಲ್ಲ ಅಂತಾನೆ ಹೈಕೋರ್ಟ್ ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆ ಮತ್ತು ತರಬೇತಿಗಾಗಿ ಈ BIS ಮಾನ್ಯತೆ ಹೊಂದಿದ ಮಹಿಳಾ ಗುಂಪುಗಳಿಗೆ ಈ ಎಂ ಎಸ್​ಪೀಟಿಸಿಗಳ ನಿರ್ವಹಣೆ ಮಾಡಲು ಜವಾಬ್ದಾರಿ ವಹಿಸಿದೆ. ಆದರೆ ಕೆಲ ಎಂಎಸ್​​​ಪೀಸಿಗಳು ಹೈಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶವನ್ನು ದಿಕ್ಕರಿಸಿ, ಕರಾರು ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ಮಕ್ಕಳು ಮತ್ತೆ ಮತ್ತೆ ಪೌಷ್ಠಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ.

ಸಚಿವ ಹಾಲಪ್ಪ ಆಚಾರ್:-

ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೈಕೋರ್ಟ್ ಸ್ಪಷ್ಟವಾಗಿ ಹೇಳಿಕೆ ನೀಡಿದೆ. ಆ ಗೈಡ್ ಲೈನ್ ಬಿಟ್ಟು ಯಾರು ಏನು ಮಾಡೋದಿಕ್ಕೆ ಆಗೋದಿಲ್ಲ. ಹೈಕೋರ್ಟ್ ಆದೇಶದ ಅನ್ವಯ, ಸರಕಾರ ಆದೇಶ ಮಾಡೆ ಮಾಡುತ್ತೆ. ಆದೇಶವನ್ನು ಎಂ ಎಸ್​​ಪೀಟಿಸಿಗಳು ಅನುಸರಿಸಬೇಕಾಗುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ​ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Tue, 3 January 23