
ಅಗಲಿದ ಆಧ್ಯಾತ್ಮದ ಜೀವ ವಿಜಯಪುರದ ಸಿದ್ದೇಶ್ವರ ಶ್ರೀಗಳಿಗೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ. ಶತಮಾನದ ಸಂತನಿಗೆ ಅದೆಷ್ಟೋ ಜನರು ವಿವಿಧ ರೀತಿಯಲ್ಲಿ ಕಂಬನಿ ಮಿಡಿದು ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ.

ಹುಬ್ಬಳ್ಳಿಯ ಕಲಾವಿದನೊಬ್ಬ ತನ್ನ ಕಲೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ. ಹುಬ್ಬಳ್ಳಿಯ ದಿನೇಶ ಚಿಲ್ಲಾಳ ಎಂಬ ಕಲಾವಿದ ರಂಗೋಲಿಯಲ್ಲಿ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರವನ್ನು ಚಿತ್ರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಣೆ ಮಾಡಿರುವುದು ವಿಶೇಷವಾಗಿದೆ.

ಇನ್ನೂ ನಾಡಿನ ಉದ್ದಗಲಕ್ಕೂ ಭಕ್ತರು ತಮ್ಮ ಭಕ್ತಿಯನ್ನು ವಿನೂತನ ಹಾಗೂ ವಿಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದು, ದಿನೇಶ ಚಿಲ್ಲಾಳ ಅವರ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.

ಜನವರಿ 02ರ ವೈಕುಂಟ ಏಕಾದಶಿಯಂದು ಸಾಯಂಕಾಲ 6 ಗಂಟೆ 05 ನಿಮಿಷಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಶಿವೈಕ್ಯರಾಗಿದ್ದಾರೆ. ವಿಜಯಪುರದ ಜ್ಞಾನಯೋಗಾಶ್ರಮದ ಆವರಣದಲ್ಲಿ ಪರಮಪೂಜ್ಯ ಶ್ರೀಗಳ ಅಂತ್ಯಕ್ರಿಯೆಯನ್ನು ಜನವರಿ 03ರಂದು ನೆರವೇರಿಸಲಾಗಿದೆ.

ವಿಜಯಪುರದ ಸೈನಿಕಶಾಲೆಯಲ್ಲಿ ಶ್ರೀಗಳ ಅಂತಿಮದರ್ಶನ ಪಡೆಯೋಕೆ 15 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ರು . ಹಿರಿಯರು, ಮಕ್ಕಳು, ಮಹಿಳೆಯರು ಶ್ರೀಗಳ ದರ್ಶನ ಪಡೆದ್ರು.