ಧಾರವಾಡ: ಮೇ.31ರಂದು ಜಿಲ್ಲೆಯ ಕಲಘಟಗಿ(Kalaghatgi) ತಾಲೂಕಿನ ಲಿಂಗನಕೊಪ್ಪ ಗ್ರಾಮದ ಶಿವನಗೌಡ ಪಾಟೀಲ್ ಮತ್ತು ಅಕ್ಕಮ್ಮ ಎಂಬ ಪ್ರೇಮಿಗಳು ರಿಜಿಸ್ಟ್ರರ್ ಮದುವೆ(Marriage)ಯಾಗಿದ್ದರು. ಇದಾದ ಬಳಿಕ ಹುಡುಗಿ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಆತನನ್ನ ಮನೆಗೆ ಕರೆಯಿಸಿ ಥಳಿಸಿದ್ದಾರೆ. ನಂತರ ಹುಡುಗಿ ಮನೆಯವರ ಹಲ್ಲೆಯಿಂದ ಪ್ರೇಮಿ ಶಿವನಗೌಡ ಪಾಟೀಲ್ ಧಾರವಾಡ ಜಿಲ್ಲಾಸ್ಪತ್ರೆ ಸೇರಿಸಿದ್ದಾರೆ. ಇನ್ನು ಕಲಘಟಗಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದ ಈ ಜೋಡಿ. ಬಳಿಕ ಅಕ್ಕಮ್ಮ ತನ್ನ ಮನೆಗೆ ಹೋಗಿದ್ದಳು. ಮನೆಗೆ ಹೋದ ಮೇಲೆ ಅಕ್ಕಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ತಿಳಿದ ಶಿವನಗೌಡ ಪಾಟೀಲ್ ಆಕೆಯನ್ನ ಕರೆದುಕೊಂಡು ಬರಲು ಹೋಗಿದ್ದೆ, ಈ ವೇಳೆ ಕಣ್ಣಿಗೆ ಕಾರದ ಪುಡಿ ಎರಚಿ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಈ ಕುರಿತು ದೂರು ನೀಡಲು ಹೋದರೂ, ಹುಡುಗಿ ಮನೆಯಲ್ಲಿ ಪೊಲೀಸ್ ಇಲಾಖೆ ಮತ್ತು ಸೈನ್ಯದಲ್ಲಿದ್ದವರು ಇದ್ದು, ಹೀಗಾಗಿ ಕಲಘಟಗಿ ಠಾಣೆಯಲ್ಲಿ ನನ್ನ ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಪ್ರೇಮಿ ಶಿವನಗೌಡ ಪಾಟೀಲ್, ಈಗ ನ್ಯಾಯಕ್ಕಾಗಿ ಎಸ್ಪಿ ಬಳಿ ಹೋಗುವೆ ಎನ್ನುತ್ತಿದ್ದಾರೆ.
ಇದನ್ನೂ ಓದಿ:ಫೇಸ್‌ಬುಕ್ ಲವ್ ಸ್ಟೋರಿ ವಿವಾಹಿತ ಮಹಿಳೆಯ ಮತಾಂತರ; ವ್ಯಕ್ತಿಯ ಬಂಧನ
ಕೋಲಾರ: ಪ್ರೀತಿ(Love) ಎಂದರೆ ಎರಡು ಜೀವಗಳ ನಡುವಿನ ನಂಬಿಕೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರ ಜೀವನದಲ್ಲೂ ಇದು ಮಹತ್ವದ ಘಟ್ಟ. ತಾವು ಪ್ರೀತಿಸಿದವರನ್ನ ಕೊನೆಯವರೆಗೆ ಕಾಪಾಡಿಕೊಂಡು ಮದುವೆಯಾಗಿ ಜೊತೆಯಲ್ಲಿ ಬದುಕಬೇಕೆಂಬ ಅದೆಷ್ಟೋ ಪ್ರೀತಿಗಳು ಮರೆಯಾಗಿ ಹೋಗಿವೆ. ಬೆರಳಣಿಕೆಯಷ್ಟು ಪ್ರೀತಿಗಳು ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಅದರಂತೆ ಇಲ್ಲೊಂದು ಪ್ರೇಮಿಗಳಾದ ಜಿಲ್ಲೆಯ ಮುಡುವಾರಪಲ್ಲಿ ಪೋಜಿತ ಹಾಗೂ ಗುಡಿಸವಾರಪಲ್ಲಿ ನರೇಶ್ ಇಬ್ಬರು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದರು.
ಬಳಿಕ ಹುಡುಗಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಪ್ರೇಮಿಗಳನ್ನು ಹುಡುಕಿ ಖಾಸಗಿ ಕಾರೊಂದರಲ್ಲಿ ಕರೆ ತರುವ ವೇಳೆ, ಪೋಷಕರು ಅಡ್ಡಗಟ್ಟಿ ಕಾರು ಗ್ಲಾಸ್ ಒಡೆದು ಹುಡುಗಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಯುವಕನ ಮೇಲೆ ಕೂಡ ಹಲ್ಲೆ ಮಾಡಿದ್ದರು. ಬಳಿಕ ಮತ್ತೆ ಪೊಲೀಸ್ ಠಾಣೆಗೆ ಕರೆತಂದು ಹುಡುಗಿಯನ್ನು ಬಿಟ್ಟು ಹೋಗಿದ್ದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ದಾಖಲಿಸಿಕೊಂಡಿರುವ ರಾಯಲ್ಪಾಡು ಪೊಲೀಸರಿಂದ ಐದು ಜನರನ್ನ ವಶಕ್ಕೆ ಪಡೆದಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ