ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ: ಬಿಜೆಪಿಯ ಓಲೈಕೆ ನಿಲುವು ಬಟಾಬಯಲಾಗಿದೆ ಎಂದ ಮುತಾಲಿಕ್

| Updated By: ರಮೇಶ್ ಬಿ. ಜವಳಗೇರಾ

Updated on: Nov 09, 2022 | 11:05 PM

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅಕವಾಶ ಮಾಡಿಕೊಟ್ಟಿದ್ದಕ್ಕೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕೆಂಡಾಮಂಡಲರಾಗಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ: ಬಿಜೆಪಿಯ ಓಲೈಕೆ ನಿಲುವು ಬಟಾಬಯಲಾಗಿದೆ ಎಂದ ಮುತಾಲಿಕ್
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
Follow us on

ಧಾರವಾಡ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ (Hubbli Idgah Maidan) ಟಿಪ್ಪು ಜಯಂತಿ (Tipu Jayanti)  ಆಚರಣೆ ಮಾಡಲು ಹುಬ್ಬಳ್ಳಿ-ಧಾರವಾಡ ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (pramod muthalik) ಗರಂ ಆಗಿದ್ದು, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿರೋದು ಅಕ್ಷಮ್ಯ ಅಪರಾಧ. ಬಿಜೆಪಿ ಆಡಳಿತದಲ್ಲಿರೋ ಪಾಲಿಕೆ ದ್ರೋಹ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಿದ ​ಹು-ಧಾ ಪಾಲಿಕೆ

ಧಾರವಾಡದಲ್ಲಿ ಇಂದು(ನ.09) ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿರೋದು ಅಕ್ಷಮ್ಯ ಅಪರಾಧ. ಪಾಲಿಕೆಯವರು ತಪ್ಪು ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿರೋ ಪಾಲಿಕೆ ದ್ರೋಹ ಮಾಡಿದೆ. ಇದು ಅತ್ಯಂತ ನೀಚ ಕೆಲಸ ಎಂದು ಕಿಡಿಕಾರಿದರು.

ಇದೇ ಬಿಜೆಪಿ ಟಿಪ್ಪು ಜಯಂತಿ ನಿಷೇಧ ಮಾಡಿದೆ. ಆದರೆ ಇವತ್ತು ಅವರೇ ಅನುಮತಿ ಕೊಟ್ಟಿದ್ದಾರೆ. ಇದು ದ್ವಂದ್ವ ನಿಲುವು. ಇವರಿಗೆ ತತ್ವ ಬೇಕಿಲ್ಲ, ಅಧಿಕಾರ ಬೇಕು. ಇವರ ಓಲೈಕೆ ನಿಲುವು ಬಟಾಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.

AIMIM ಪಕ್ಷ ದ್ರೇಶದ್ರೋಹದ ಪಕ್ಷ. ಇಂಥ ಪಕ್ಷದ ಬೇಡಿಕೆಗೆ ಮನ್ನಣೆ ಕೊಡ್ತೀನಿ ಅಂದ್ರೆ ಯಾವ ಮಟ್ಟಕ್ಕೆ ಬಂದಿದೆ? ಟಿಪ್ಪು ಕನ್ನಡದ್ರೋಹಿ, ಮತಾಂಧ. ನಾವು ಕ್ಷಮೆ ಮಾಡೋಕೆ ಸಾಧ್ಯವೇ ಇಲ್ಲ. ನೀವು ಹಿಂದೂಗಳಿಗೆ ದ್ರೋಹ ಮಾಡಿದ್ದೀರಿ. ಇದನ್ನು ವಾಪಸ್ ತಗೆದುಕೊಳ್ಳಬೇಕು ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದರು.

ಸಭೆಯಲ್ಲಿ ತೀರ್ಮಾನಿಸಿದ ಮೇಯರ್

ಗಣೇಶ ಹಬ್ಬದ ಸಮಯದಲ್ಲಿ ಗಣೇಶೋತ್ಸವಕ್ಕೆ ಹುಬ್ಬಳ್ಳಿ ಮೈದಾನದಲ್ಲಿ ಅವಕಾಶ ಕೊಟ್ಟ ಬೆನ್ನಲ್ಲೇ ಈಗ ಪ್ರತಿ ಆಚರಣೆಗಳಿಗೂ ಅವಕಾಶ ಕೇಳಿ ಅನೇಕ ಸಂಘಟನೆಗಳು ಮನವಿ ಪತ್ರ ಸಲ್ಲಿಸುತ್ತಿದ್ದರು. ಟಿಪ್ಪು ಜಯಂತಿ, ಕನಕ ಜಯಂತಿ ನಡುವೆ ಈಗ ಪಾಲಿಕೆಗೆ ಅನೇಕ ಬೇಡಿಕೆಗಳು ಬಂದಿದ್ದವು. ಇದರಿಂದ ಹುಬ್ಬಳ್ಳಿ ಧಾರಾವಾಡ ಮಹಾನಗರ ಪಾಲಿಕೆಗೆ ದೊಡ್ಡ ಸಂಕಷ್ಟವೇ ಎದುರಾಗಿತ್ತು. ಕೊನೆಗೆ ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಅವರು ಸಭೆ ಮಾಡಿ, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿ ಎಲ್ಲ ಜಯಂತಿಗೂ ಅವಕಾಶ ಮಾಡಿಕೊಟ್ಟಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ